ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಚಿಂತಾಮಣರಾವ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಕಾರಣಿಯ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳು ಆರೋಪಿಗೆ ಠಾಣಾ ಜಾಮೀನು ನೀಡಿ ಕಳಿಸಿದ್ದಾರೆ. ಇಂತಹ ಘಟನೆಗಳು ಬೆಳಗಾವಿ ಮಾತ್ರವಲ್ಲ, ರಾಜ್ಯದ ಬೇರೆಬೇರೆ ಕಡೆ ಹೆಣ್ಣುಮಕ್ಕಳ ಮೇಲೆ ಇಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರು, ಹೆಣ್ಣುಮಕ್ಕಳ ಬಗ್ಗೆ ಕನಿಕರವೇ ಇಲ್ಲ ಎಂದು ಹರಿಹಾಯ್ದರು.
ತಮ್ಮವರಿಗೆ ಬೆಂಬಲವಾಗಿ ನಿಲ್ಲುವ ಮುನ್ನ ರಾಜಕಾರಣಿಯೂ ಮಾನವೀಯತೆಯಿಂದ ಹೆಜ್ಜೆ ಇಡಬೇಕು. ದುಷ್ಟರಿಗೆ ರಾಜಕೀಯ ಆಶ್ರಯ ಕೊಡಬಾರದು. ಜಿಲ್ಲೆಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಗೃಹ ಸಚಿವರು ಸುಮ್ಮನೇ ಇರುವುದು ಅಚ್ಚರಿ ತರಿಸಿದೆ. ಈಗಲಾದರೂ ಅವರು ಪ್ರತಿಕ್ರಿಯಿಸಬೇಕು ಎಂದೂ ಆಗ್ರಹಿಸಿದರು.ಈ ಪ್ರಕರಣದಲ್ಲಿ ಬೇರೆ ಯಾರದ್ದಾದರೂ ರಾಜಕೀಯ ಒತ್ತಡವಿದೆಯೋ ಅಥವಾ ಅಧಿಕಾರಿಗಳು ದುಡ್ಡಿನ ವ್ಯವಹಾರ ಏನಾದರೂ ಮಾಡಿಕೊಂಡಿದ್ದಾರೋ ಎಂಬುದರ ಬಗ್ಗೆ ಬಹಿರಂಗ ಮಾಡಬೇಕು. ಇಲ್ಲದೇ ಹೋದರೆ ಸರ್ಕಾರ ಸತ್ತಿದೆ ಎಂದರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.ಚಳಿಗಾಲದ ಅಧಿವೇಶನದ ಸದನ ಕಲಾಪವೋ ಯಲ್ಲಮ್ಮನಗುಡ್ಡದ ಜಾತ್ರೆಯೋ ಎಂಬಂತೆ ಆಯಿತು ಎಂದು ಅಭಯ ಪಾಟೀಲ ವಾಗ್ದಾಳಿ ನಡೆಸಿದರು.
ಹತ್ತು ದಿನಗಳ ಕಾಲ ಕಲಾಪಗಳಿಗೆ ನಿಗದಿ ಮಾಡಿಕೊಂಡು ಬಂದರು. ಮೊದಲ ದಿನ ಕೇವಲ ಶ್ರದ್ಧಾಂಜಲಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣ ಮತ್ತೊಂದು ದಿನ ಕಲಾಪವನ್ನು ಮುಂದೂಡಿದರು. ಎರಡು ದಿನ ಸರ್ಕಾರಿ ರಜೆ ಇತ್ತು. ಎಲ್ಲವೂ ಸೇರಿ ಆರು ದಿನ ಮಾತ್ರ ಸದನವನ್ನು ನಡೆಸಿದ್ದಾರೆ. ಈ ಬಾರಿಯೂ ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ನಿರಿಕ್ಷೆಯಂತೆ ಕಾಳಜಿ ತೋರಲಿಲ್ಲ. ಇದರಿಂದ ಚಳಿಗಾಲದ ಅಧಿವೇಶನದ ಉದ್ದೇಶವೇ ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಹಾಕುವ ಟೂರಿಂಗ್ ಟಾಕೀಸ್‌ನಂತೆ ಸರ್ಕಾರ ನಡೆದುಕೊಂಡಿತು. ಎಲ್ಲೆಂದರಲ್ಲಿ ಡಿನ್ನರ್ ಪಾರ್ಟಿಗಳನ್ನು ಮಾಡಿ ಹೋದರಷ್ಟೆ ಹೊರತು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪಾಲಿಗೆ ಈ ಸರ್ಕಾರ ಸತ್ತುಹೋಗಿದೆ ಎಂದು ಕಿಡಿಕಾರಿದರು.
-------ಕೋಟ್ಬೆಳಗಾವಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೋಕ್ಸೋ ಕೇಸ್ ದಾಖಲಿಸಲೇಬೇಕು. ಈ ಕುರಿತು ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಅಲ್ಲದೇ, ಪೊಲೀಸ್ ಆಯುಕ್ತರ ಬಳಿದೀ ಬಗ್ಗೆ ವಿವರಣೆ ಕೇಳಿದ್ದು, ಕ್ರಮಕ್ಕೂ ಸೂಚನೆ ನೀಡುತ್ತೇನೆ.ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು.