ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರ್ಕಾರ ಅನುದಾನ ನೀಡಲು ಸತಾಯಿಸುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.ಹೋಬಳಿಯ ಊಗಿನಹಳ್ಳಿ, ಗೊಂದಿಹಳ್ಳಿ, ಮಾದಾಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅನುದಾನಕ್ಕಾಗಿ ಪ್ರತಿಬಾರಿಯೂ ಸರ್ಕಾರವನ್ನು ಬೇಡುವ ಸ್ಥಿತಿ ಎದುರಾಗಿದೆ. ಇದೇರೀತಿ ಮುಂದುವರೆದಲ್ಲಿ ವಿಧಾನಸೌಧಕ್ಕೆ ತಾಲೂಕಿನಿಂದ ಜನತೆಯೊಂದಿಗೆ ಚಲೋ ನಡೆಸಲಾಗುವುದು ಎಂದರು.
ಕಾವೇರಿ ನೀರಾವರಿ ನಿಗಮದಿಂದ ಪ್ರಗತಿಪಥ ಯೋಜನೆಯಡಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಗುಣಮಟ್ಟದ ಕಾಮಗಾರಿ ವೀಕ್ಷಣೆಯನ್ನು ಸ್ಥಳೀಯರು ಗಮನ ಹರಿಸಬೇಕು ಎಂದರು.ಈ ವೇಳೆ ರಾಜ್ಯ ಮಾರಾಟ ಮಹಾಮಂಡಲ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷ ಬಿ.ಎಂ. ಕಿರಣ್, ಜೆಡಿಎಸ್ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ, ಗ್ರಾಮ ಮುಖಂಡರು ಇದ್ದರು.ಮೇ 23 ರಂದು ನೇರ ಸಂದರ್ಶನ
ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ. ಬಿ.ಎಸ್.ಎಸ್ ಮೈಕ್ರೋ ಫೈನನ್ಸ್ ಲಿ., ಮತ್ತು ಮೆ. ಕ್ರೆಡಿಟ್ ಗ್ರಾಮೀಣ್ ಆಕ್ಸಿಸ್ ಬ್ಯಾಂಕ್ ಸಂಸ್ಥೆ ಖಾಲಿಯಿರುವ ಹುದ್ದೆಗಳಿಗಾಗಿ ನೇರ ಸಂದರ್ಶನ ನಡೆಸಲಿದೆ. 18 ರಿಂದ 30 ವರ್ಷ ವಯೋಮಾನವುಳ್ಳ ಆಸಕ್ತ ಅಭ್ಯರ್ಥಿಗಳು ಮೇ 23 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ರೆಸ್ಯೂಮೆ ಮತ್ತು ಬಯೋಡೇಟಾಗಳೊಂದಿಗೆ ನೇರಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಪಡೆಯಬಹುದು. ಟ್ರೈನಿ ಸೆಂಟರ್ ಆಫೀಸರ್ಸ್ ಮತ್ತು ರಿಲೇಷನ್‌ಶಿಪ್ ಆಫೀಸರ್ಸ್” ಖಾಲಿಯಿರುವ ಹುದ್ದೆಗಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08232-295124 ಮತ್ತು ಮೊ-9164642684, ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.