ಕನ್ನಡಪ್ರಭ ವಾರ್ತೆ ಇಂಡಿ
ನಗರದ ಬಿಜೆಪಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಬೂತ್ ಮಟ್ಟದ ಪಕ್ಷದ ಏಜೆಂಟರಿಗೆ ಹಾಗೂ ನೂತನ ಪದಾಧಿಕಾರಿಗಳ(BLO) ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಳೆ ಕೊರತೆಯಿಂದ ಜಾನುವಾರಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಜಮೀನಿನಲ್ಲಿ ಬಿತ್ತನೆ ಮಾಡದ ರೈತರು ಆಕಾಶ ನೋಡುತ್ತಿದ್ದಾರೆ. ಹೀಗಾದರೆ, ರೈತರ ಗತಿ ಏನು? ರಾಜ್ಯ ಸರ್ಕಾರ ರೈತರ ಬಗ್ಗೆ ಚಿಂತನೆ ಮಾಡುವುದು ಬಿಟ್ಟು ಮಂತ್ರಿಗಿರಿ ಹಂಚಿಕೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ನಾನು ಎಸ್ಟಿ ಇದ್ದಿದ್ದಕ್ಕಾಗಿ ಬಿಜೆಪಿಯವರು ಟಾರ್ಗೆಟ್ ಮಾಡಿದ್ದಾರೆ ಎನ್ನುತ್ತಾ ಹೊರಟಿದ್ದಾನೆ. ₹ 187 ಕೋಟಿ ಎಲ್ಲಿ ಹೋಯಿತು ?. ಸಚಿವನಾಗಿ ಅಷ್ಟು ಹಣ ಎಲ್ಲಿ ಹೋಗಿದೆ ಎಂಬುದರ ಬಗ್ಗೆ ಏಕೆ ತಿಳಿದುಕೊಳ್ಳಲಿಲ್ಲ. ₹ 187 ಕೋಟಿ ಹಣದಲ್ಲಿ ಎಷ್ಟು ಜನ ಬಡವರಿಗೆ ಅನುಕೂಲವಾಗುತ್ತಿತ್ತು ಎಂಬು ತಿಳಿದಿಕೊಳ್ಳಬೇಕು ಎಂದು ಹೇಳಿದರು. ಸಿದ್ದರಾಮಯ್ಯನವರೇ ವಾಲ್ಮೀಕಿ ನಿಗಮದಲ್ಲಿ ಅನುದಾನ ದುರುಪಯೋಗ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮಂತ್ರಿ ಮಾಡಲಿಲ್ಲ ಅಂದರೆ, ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಮಂತ್ರಿಗಿರಿ ನೀಡಿದ್ದಾರೆ ಎಂದರು.ಇಂಡಿ ತಾಲೂಕಿನ ನಿಷ್ಠಾವಂತ ಜನ ನನ್ನನ್ನು ರಾಜಕಾರಣದಲ್ಲಿ ಬೆಳೆಸಿದ್ದಾರೆ. ಜಾತಿ ಮುಂದೆ ಇಟ್ಟುಕೊಂಡು ರಾಜಕಾರಣ ಮಾಡಬೇಡಿ. ಪಕ್ಷ ಎಂಬ ಭಾವ ಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿ, ಪಕ್ಷವಿದ್ದರೆ ನಾವೆಲ್ಲಾ, ಪಕ್ಷವಿಲ್ಲದಿದ್ದರೆ ನಾವ್ಯಾರು ಇಲ್ಲ. ಬಿಜೆಪಿ ಟಿಕೆಟ್ ಯಾರಿಗಾದರೂ ಕೊಡಲಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ಕೆಲಸ ಮಾಡಬೇಕು. ರಮೇಶ ಜಿಗಜಿಣಗಿ ರಾಜಕೀಯ ಮುಗಿಯಿತು ಎಂದು ಯಾರಾದರೂ ಹೇಳುತ್ತಿದ್ದರೆ ಕೇಳಬೇಡಿ, ನನ್ನ ರಾಜಕೀಯ ಇನ್ನು ಮುಗಿದಿಲ್ಲ. ನನಗೇನು ವಯಸ್ಸಾಗಿಲ್ಲ, ವಯಸ್ಸು ಮುಗಿಯುವವರೆಗೆ ನನ್ನ ರಾಜಕಾರಣ ಮುಗಿಯುವುದಿಲ್ಲ ಎಂದು ಹೇಳಿದರು.