ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಪಡಿಸುವ ಅಧಿಕಾರವನ್ನು ಸರ್ಕಾರ ಕೊಡಬೇಕು. ರೈತರಿಗೆ ಸಿಗಬೇಕಾದ ಗೌರವ ದೊರಕಲಿ ಎಂದು ಪ್ರಗತಿಪರ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ಹಾವೇರಿ: ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಪಡಿಸುವ ಅಧಿಕಾರವನ್ನು ಸರ್ಕಾರ ಕೊಡಬೇಕು. ರೈತರಿಗೆ ಸಿಗಬೇಕಾದ ಗೌರವ ದೊರಕಲಿ ಎಂದು ಪ್ರಗತಿಪರ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ನಗರದ ಭಗತ್‌ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಮತ್ತು ಭಗತ್ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತರ ಮಕ್ಕಳು ಬೆಳೆಯಬೇಕು, ರೈತರೂ ಕೂಡ ಕೋಟಿ ರುಪಾಯಿಗಳಲ್ಲಿ ಮಾತನಾಡಬೇಕು. ರೈತನಿಗೂ ಸಮಾಜದಲ್ಲಿ ಎಲ್ಲಾ ರೀತಿಯ ಗೌರವ ಸಿಗಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡಲು ಸಮಾಜ ಹಿಂದೇಟು ಹಾಕಬಾರದು, ರೈತ ಮನಸ್ಸು ಮಾಡಿದರೆ ಕೇವಲ ಒಂದು ಎಕರೆಯಲ್ಲಿ ಕೋಟಿ ರು ,ಗಳನ್ನು ಗಳಿಸಬಹುದು. ನಾನು ರೈತನ ಮಗ, ಮಗಳು ಎಂದು ಹೆಮ್ಮೆಯಿಂದ ಹೇಳಬೇಕು ಎಂದರು.ಭಗತ್‌ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ ನೆರವೇರಿಸಿದ ಧಾರವಾಡದ ಜಿನಿಯಸ್ ಅಕಾಡೆಮಿ ಅಧ್ಯಕ್ಷ ಅಲ್ತಾಪಹ್ಮದ ಡುಮ್ಮಾಳ ಮಾತನಾಡಿ, ಭಗತ್‌ಕಾಲೇಜು ಬಹಳ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ಕೃಷ್ಟಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಭಗತ್ ಪ್ರಥಮ ದರ್ಜೆ ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳನ್ನೊಳಗೊಂಡ ಶಿಕ್ಷಣವನ್ನು ನೀಡುತ್ತಿದ್ದು ನೀವು ಪದವಿ ಪಡೆಯುವ 3 ವರ್ಷದೊಳಗಾಗಿ ಸರ್ಕಾರ ಕರೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮನ್ನು ಈ ಕಾಲೇಜು ಸಿದ್ಧಗೊಳಿಸುತ್ತದೆ ಎಂದರು.ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ ಮಾತನಾಡಿ, ಭಗತ್‌ಸಿಂಗ್ ಎಂತಹ ದೇಶಭಕ್ತಿ ತುಂಬಿರೋ ಸ್ವಾತಂತ್ರ್ಯ ಹೋರಾಟಗಾರ ಎಂದು ತಿಳಿಸಿ ಅದೇ ಹೆಸರನ್ನು ನಮ್ಮ ಸಂಸ್ಥೆಗೆ ಇಟ್ಟಿದ್ದು ಬಹಳ ಖುಷಿಯ ವಿಚಾರ. ಸಂಸ್ಥೆಯ ಅಧ್ಯಕ್ಷ ಕೂಡ ಯುವ ಭಗತ್‌ಸಿಂಗ್ ಎಂದು ಬಣ್ಣಿಸಿದರು. ಕೇವಲ 30 ವರ್ಷದ ಒಬ್ಬ ಯುವಕ ಪ್ರತಿ ವರ್ಷ ಸುಮಾರು 500 ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿ ಸುಮಾರು 35 ಕುಟುಂಬಗಳಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆಸರೆಯಾಗಿರುವುದು ಸಾಮಾನ್ಯ ವಿಷಯವಲ್ಲ. ವಿದ್ಯಾರ್ಥಿಗಳು ಕೂಡ ಇದೇ ದಾರಿಯಲ್ಲಿ ಮುನ್ನಡೆದು ತಮ್ಮ ಗುರಿಯನ್ನು ತಲುಪಬೇಕು ಎಂದರು. ಕುಂದಗೊಳ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ರವೀಂದ್ರಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ರತನ ಕಾಶಪ್ಪನವರ, ಉಪನ್ಯಾಸಕರಾದ ಬಸವರಾಜಪ್ಪ ಕೆ, ರಚನಾ ಹರ್ತಿ, ಮೋಹಿನ್‌ಖಾನ್ ಪಠಾಣ, ಭಾನುನಂದನ ನೂಲಗೇರಿ, ಜ್ಯೋತಿ ಭೊವೇರ್, ನಾಜರಿನ ನೆಗಳೂರು, ತೇಜಶ್ವಿನಿ ಬೆಲ್ಲದ, ಪುಷ್ಪಾ ಕಡೂರು, ಸವಿತಾ ಮಾಸ್ತೇರ, ಕವಿತಾ ಗಂಜೇರ, ಅಭಿಷೇಕ ಅಗಸಿಬಾಗಿಲು ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕರಾದ ಆಸ್ಮಾ ತಳಕಲ್ಲ ಸ್ವಾಗತಿಸಿದರು. ರಶ್ಮಿ ಬಾಗರ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮಿ ಖರಾಟೆ ವಾರ್ಷಿಕ ವರದಿ ವಾಚಿಸಿದರು. ಪರಶುರಾಮ ರಿತ್ತಿ ಮತ್ತು ದೀಪಾ ಜೋಗಿಹಳ್ಳಿ ನಿರೂಪಿಸಿದರು. ಮೇಘನಾ ಏಳುಕೊಳ್ಳದ ವಂದಿಸಿದರು.ನಮ್ಮೆಲ್ಲ ಉಪನ್ಯಾಸಕರು ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಈ ವರ್ಷ ಸಂಪೂರ್ಣವಾಗಿ ಫಲಿತಾಂಶದ ಕಡೆ ಒತ್ತುಕೊಟ್ಟಿದ್ದೇವೆ. ಹಾಗೇ ಆ ರೀತಿಯ ಫಲಿತಾಂಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಎಲ್ಲಾ ಪಾಲಕರು ನಮಗೆ ಸಂಪೂರ್ಣ ಸಹಕಾರ ನೀಡಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ನಮ್ಮ ಜೊತೆ ಕೈ ಜೋಡಿಸಿ. ಹಾಗೇ ಈ ವರ್ಷ ಪ್ರಾರಂಭವಾದ ಭಗತ್ ಪ್ರಥಮ ದರ್ಜೆ ಕಾಲೇಜು ಮುಂದೆ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಭಗತ್‌ಸಿಂಗ್ ಸಮೂಹ ಸಂಸ್ಥೆ ಸಂಸ್ಥಾಪಕ ಎಂ.ಬಿ. ಸತೀಶ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.