ಹುಚ್ಚಮ್ಮ ದೇವಿಯ ವೈಭವದ ಮಹಾರಥೋತ್ಸವ

KannadaprabhaNewsNetwork |  
Published : Apr 11, 2026, 01:30 AM IST
10ಎಚ್ಎಸ್ಎನ್15 :  ಯಳವಾರೆ ಮಹೋತ್ಸವದಲ್ಲಿ ಸಾವಿರಾರು ಭಕ್ತರುಗಳು ಪಾಲ್ಗೋಂಡು ರಥ ಎಳೆದರು. | Kannada Prabha

ಸಾರಾಂಶ

ಯಳವಾರೆ ಹುಚ್ಚಮ್ಮದೇವಿ ಮೂಲಸನ್ನಿಧಾನದ ಅಮ್ಮನವರಿಗೆ ವಿಶೇಷ ಹೂವುಗಳಿಂದ ಅಮ್ಮನವರನ್ನು ಶೃಂಗಾರ ಮಾಡಿದ್ದು ದೂರದ ಊರುಗಳಿಂದ ಬಂದ ಭಕ್ತರು ಅಮ್ಮನವರಿಗೆ ಹಣ್ಣುಕಾಯಿ ಪೂಜೆ ಮಾಡಿಸಿ ಹರಕೆ ತಿರಿಸಿದರು. ರಥಬೀದಿಯಲ್ಲಿ ಯಳವಾರೆ ಹುಚ್ಚಮ್ಮದೇವಿ ಹಾರನಹಳ್ಳಿ ಗ್ರಾಮದೇವತೆ ಶ್ರೀ ಕೋಡಮ್ಮದೇವಿ, ಧೂತರಾಯಸ್ವಾಮಿ, ಯಳವಾರೆ ಚಲುವರಾಯಸ್ವಾಮಿ, ಧೂತರಾಯಸ್ವಾಮಿಗಳಿಗೆ ಹೊಂಬಾಳೆ, ಬಣ್ಣಬಣ್ಣದ ಹೂವುಗಳಿಂದ ಶೃಂಗಾರಮಾಡಿ ಸಿಡಿ ಕಂಬಕ್ಕೆ ಪೂಜೆ ಮಾಡಿ ಸಿಡಿಸೇವೆ ನಡೆಯಿತು, ತಾಯಂದಿರು ಮಕ್ಕಳನ್ನು ಸಿಡಿಕಂಬ ಸೂತ್ತಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ ಸಮೀಪದ ಯಳವಾರೆ ಗ್ರಾಮ ದೇವತೆ ಹುಚ್ಚಮ್ಮ ದೇವಿಯವರ ಮಹಾರಥೋತ್ಸವವು ಗುರುವಾರ ಬೆಳ್ಳಗೆ ಸಾವಿರಾರು ಭಕ್ತರ ಸಮ್ಮಖದಲ್ಲಿ ವೈಭವದಿಂದ ನಡೆಯಿತು.ಯಳವಾರೆ ಹುಚ್ಚಮ್ಮದೇವಿ ಮೂಲಸನ್ನಿಧಾನದ ಅಮ್ಮನವರಿಗೆ ವಿಶೇಷ ಹೂವುಗಳಿಂದ ಅಮ್ಮನವರನ್ನು ಶೃಂಗಾರ ಮಾಡಿದ್ದು ದೂರದ ಊರುಗಳಿಂದ ಬಂದ ಭಕ್ತರು ಅಮ್ಮನವರಿಗೆ ಹಣ್ಣುಕಾಯಿ ಪೂಜೆ ಮಾಡಿಸಿ ಹರಕೆ ತಿರಿಸಿದರು. ರಥಬೀದಿಯಲ್ಲಿ ಯಳವಾರೆ ಹುಚ್ಚಮ್ಮದೇವಿ ಹಾರನಹಳ್ಳಿ ಗ್ರಾಮದೇವತೆ ಶ್ರೀ ಕೋಡಮ್ಮದೇವಿ, ಧೂತರಾಯಸ್ವಾಮಿ, ಯಳವಾರೆ ಚಲುವರಾಯಸ್ವಾಮಿ, ಧೂತರಾಯಸ್ವಾಮಿಗಳಿಗೆ ಹೊಂಬಾಳೆ, ಬಣ್ಣಬಣ್ಣದ ಹೂವುಗಳಿಂದ ಶೃಂಗಾರಮಾಡಿ ಸಿಡಿ ಕಂಬಕ್ಕೆ ಪೂಜೆ ಮಾಡಿ ಸಿಡಿಸೇವೆ ನಡೆಯಿತು, ತಾಯಂದಿರು ಮಕ್ಕಳನ್ನು ಸಿಡಿಕಂಬ ಸೂತ್ತಿ ಪೂಜೆ ಸಲ್ಲಿಸಿದರು. ಯಳವಾರೆ ಹುಚ್ಚಮ್ಮದೇವಿ ಹಾರನಹಳ್ಳಿ ಗ್ರಾಮದೇವತೆ ಶ್ರೀ ಕೋಡಮ್ಮ ದೇವಿ, ಅಮ್ಮನವರನ್ನು ಉಯ್ಯಾಲೆಯಲ್ಲಿ ಕೂರಿಸಿ ಚಲುವರಾಯಸ್ವಾಮಿಯವರು ಪೂಜೆ ಸಲ್ಲಿಸಿದ ನಂತರ ಭಕ್ತರು ಉಯ್ಯಾಲೆ ಸೇವೆ ಮಾಡಿದರು. ಯಾದಪುರದ ಶ್ರೀ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯವರನ್ನು ರಥದಲ್ಲಿ ಪೂಜೆ ಸಲ್ಲಿಸಿ ರಥೋತ್ಸವ ನಡೆಯಿತು. ಭಕ್ತರು ಕರ್ಪೂರ ಹಚ್ಚಿ ರಥಕ್ಕೆ ಬಾಳೆಹಣ್ಣು ಎಸೆದು ಅಜಯ್ಯನವರನ್ನು ಪ್ರಾರ್ಥಿಸಿದ್ದರು. ಯಳವಾರೆ ಚಲುವರಾಯ ಸ್ವಾಮಿಯವರ ಕತ್ತಿ ಸೇವೆ ಈ ಜಾತ್ರೆಯ ಆಕರ್ಷಣೆಯಾಗಿದ್ದು, ಅರೆವಾದ್ಯ, ಓಲಗ, ತಮಟೆ ಕರಡೆವಾದ್ಯಗಳನ್ನು ಬಾರಿಸುತ್ತಾ ದೇವಿ ಪದಗಳನ್ನು ಹೇಂತ್ತಾ ವಾದ್ಯ ಕಲಾವಿದರು ವಾದ್ಯಗಳ ಮೂಲಕ ದೇವರನ್ನು ಹುರಿದುಂಬಿಸಿ ಶ್ರೀ ಚಲುವರಾಯಸ್ವಾಮಿಯವರ ಸೋಮನ ಕುಣಿತದ ನಂತರ ಬೆಳ್ಳಿ ಕತ್ತಿ ಸೇವೆ ನಡೆಸಿದ್ದು. ರಥದಲ್ಲಿ ಯಳವಾರೆ ಹುಚ್ಚಮ್ಮದೇವಿ ಹಾರನಹಳ್ಳಿ ಗ್ರಾಮದೇವತೆ ಶ್ರೀ ಕೋಡಮ್ಮದೇವಿಯನ್ನು ಕೂರಿಸಿ ಪೂಜೆ ಪುಣ್ಯಾಹಃ ಮಾಡಿದ ನಂತರ ದೇವತೆಗಳು ರಥಕ್ಕೆ ಕಾಯಿ ಒಡೆದ ನಂತರ ಸಾವಿರಾರು ಭಕ್ತರು ರಥ ಎಳೆದು ಭಕ್ತಿ ಭಾವ ಸಮರ್ಪಿಸಿದರು. ಉತ್ತಮ ಮಳೆ ಬೆಳೆಯಾಗಲಿ ಎಂದು ರಥಕ್ಕೆ ಹಣ್ಣು ಹೂವು ಅರ್ಪಿಸಿ ಪ್ರಾರ್ಥಿಸಿದರು.ಯರೇಹಳ್ಳಿ ಹೂಸೂರು ಗುತ್ತಿನಕೆರೆ ಮಾಕನಹಳ್ಳಿ ಹಾರನಹಳ್ಳಿ ಜಾಡಘಟ್ಟೆ, ಕೋಡಿಕೋಪ್ಪಲು, ಮಲಿದೇವಿಹಳ್ಳಿ ನಾಗೇನಹಳ್ಳಿ ಕಬ್ಬೂರಹಳ್ಳಿ ಸೇರಿದಂತೆ ಯಳವಾರೆ ಬುಡಕಟ್ಟಿನ ಭಕ್ತರು, ಸಾವಿರಾರು ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಹುಚ್ಚಮ್ಮ ದೇವಿ ಟ್ರಸ್ಟ್ ಸದಸ್ಯರು ಜಾತ್ರಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ವದ್ದು
ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಬೇಲೂರಲ್ಲಿ ಜನಸ್ಪಂದನ ಸಭೆ