ದೀಪಾವಳಿ ಪಾಡ್ಯದ ದಿನ ಸಂಜೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ರಥೋತ್ಸವವನ್ನು ಸಂಪ್ರದಾಯದಂತೆ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಲಕ್ಷ್ಮೇಶ್ವರ:
ದೀಪಾವಳಿ ಪಾಡ್ಯದ ದಿನ ಸಂಜೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ರಥೋತ್ಸವವನ್ನು ಸಂಪ್ರದಾಯದಂತೆ ಸಡಗರ, ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ರಥೋತ್ಸವ ಹಿನ್ನೆಲೆ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮತ್ತು ಹನುಮಂತ ದೇವರ ಮೂರ್ತಿಯನ್ನು ಬೆಣ್ಣೆ ಮತ್ತು ವಿಳ್ಯದೆಲೆಯಿಂದ ಅಲಂಕರಿಸಲಾಗಿತ್ತು. ಸಂಜೆ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ರಥೋತ್ಸವವಕ್ಕೆ ಚಾಲನೆ ನೀಡಿದರು.ರಥೋತ್ಸವವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಹೂವಿನಶಿಗ್ಲಿ ಶ್ರೀಗಳು ಅಜ್ಞಾನ, ಅಂಧಕಾರ ಕಳೆದು ಜ್ಞಾನದ ಜ್ಯೋತಿ ಬೆಳಗಿಸುವುದು ದೀಪಾವಳಿ ಹಬ್ಬದ ವೈಶಿಷ್ಟವಾಗಿದೆ. ದೀಪವು ಧರ್ಮ, ಸಂಸ್ಕೃತಿ, ಜ್ಞಾನ ಮತ್ತು ಆಧ್ಯಾತ್ಮದ ಸಂಕೇತವಾಗಿ, ದೀಪ ಬೆಳಗಿದಂತೆ ಎಲ್ಲರ ಜೀವನದಲ್ಲಿ ಬೆಳಕು ಪ್ರಜ್ವಲಿಸಬೇಕು, ಸಮಾಜದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕೆ ಹೊರತು ಕತ್ತಲೆಗೆ ತಳ್ಳುವ ಕಾರ್ಯವನ್ನು ಮಾಡಬಾರದು ಎಂದರು. ಕುಂದಗೋಳ ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು ಉಪಸ್ಥಿತರಿದ್ದರು. ಈ ಸಂದರ್ಭರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಶಾಸಕ ಡಾ. ಚಂದ್ರು ಲಮಾಣಿ, ಪ್ರಮುಖರಾದ ಈಶ್ವರಪ್ಪ ಕುಂಬಾರ, ನೀಲಪ್ಪ ಕರ್ಜೇಕಣ್ಣವರ, ನಾಗರಾಜ ಚಿಂಚಲಿ, ಮಹೇಶ ಹೊಗೆಸೊಪ್ಪಿನ, ಮಂಜುನಾಥ ಮಾಗಡಿ, ಫಕ್ಕೀರೇಶ ಅಣ್ಣಿಗೇರಿ, ಸುನೀಲ ಮುಳಗುಂದ, ಶೇಖಪ್ಪ ಕರ್ಜೆಕಣ್ಣವರ, ಮಲ್ಲಿಕಾರ್ಜುನ ಮುಳಗುಂದ, ಶೇಖಪ್ಪ ಕರ್ಜೆಕಣ್ಣವರ, ರಮೇಶ ಕುಂಬಾರ, ಮಲ್ಲಪ್ಪ ಚಕ್ರಸಾಲಿ, ಬಸವರಾಜ ಚಕ್ರಸಾಲಿ, ಚಂದ್ರು ಕರ್ಜೆಕಣ್ಣವರ, ಕಿರಣ ಕುಂಬಾರ, ಈರಣ್ಣ ಪೂಜಾರ, ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಅನಿಲ ಮುಳಗುಂದ, ನೀಲಪ್ಪ ಪೂಜಾರ, ಟಾಕಪ್ಪ ಸಾತಪೂತೆ, ಕಿರಣ ನವಲೆ, ಎಂ.ಕೆ. ಕಳ್ಳಿಮಠ, ಈರಣ್ಣ ಅಕ್ಕೂರ, ರವಿ ಪುರಾಣಿಕಮಠ, ಮಂಜು ಕುಂಬಾರ, ಶಂಕರ ಕುಂಬಾರ, ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿ, ಹಾವಳಿ ಆಂಜನೇಯ ಭಜನಾ ಮಂಡಳಿ, ಯುವಕ ಮಂಡಳಿ ಸದಸ್ಯರು ಸೇರಿ ಹಿರಿಯರು, ಮುಖಂಡರು, ಯುವಕರು, ಸಾವಿರಾರು ಜನರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.