ಅರಸು ಪ್ರಜಾತಂತ್ರದ ಶ್ರೇಷ್ಠ ರೂವಾರಿ: ಪರಶುರಾಮ ಘಸ್ತೆ

KannadaprabhaNewsNetwork |  
Published : Aug 24, 2024, 01:19 AM IST
ಸಮಾರಂಭವನ್ನು ದಾಂಡೇಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಶೇಖ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಳಿಯಾಳದ ಬಿಸಿಎಂ ಇಲಾಖೆಯ ದೇವರಾಜ ಅರಸು ಭವನದಲ್ಲಿ ದೇವರಾಜ ಅರಸು ಜಯಂತಿ ಕಾರ್ಯಕ್ರಮ ನಡೆಯಿತು.

ಹಳಿಯಾಳ: ದೂರದೃಷ್ಟಿಯ ಮಹಾನಾಯಕ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಹಾಗೂ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂರಹಿತರಿಗೆ ಭೂಮಿಯ ಹಕ್ಕನ್ನು ನೀಡಿದ ಮಾಜಿ ಸಿಎಂ ದಿ. ದೇವರಾಜ ಅರಸು ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ತಿಳಿಸಿದರು.ಮಂಗಳವಾರ ಪಟ್ಟಣದ ಬಿಸಿಎಂ ಇಲಾಖೆಯ ದೇವರಾಜ ಅರಸು ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಹಳಿಯಾಳ ಮತ್ತು ದಾಂಡೇಲಿ ಪೌರಸಂಸ್ಥೆಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ದಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ದಿ. ರಾಜೀವ್ ಗಾಂಧಿಯವರು ಅವರು ಅತಿ ಚಿಕ್ಕವಯಸ್ಸಿನಲ್ಲಿಯೇ ಪ್ರಧಾನ ಮಂತ್ರಿಯಂತಹ ಅತ್ಯುನ್ನತ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ ಯುವ ನಾಯಕರಾಗಿದ್ದರು. 18 ವರ್ಷ ವಯಸ್ಸಿನವರಿಗೆ ಮತದಾನದ ಹಕ್ಕು ನೀಡಿರುವುದು ದೇಶದ ಯುವಜನತೆಗೆ ಇವರು ಕೊಟ್ಟಿರುವ ಅಪೂರ್ವ ಕಾಣಿಕೆಯಾಗಿದೆ. ದೇಶಕ್ಕೆ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿ, ದೇಶದ ತಂತ್ರಜ್ಞಾನದ ಪ್ರಗತಿಗೆ ಅಡಿಗಲ್ಲು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಸಮಾರಂಭವನ್ನು ಉದ್ಘಾಟಿಸಿದ ದಾಂಡೇಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಶೇಖ್ ಮಾತನಾಡಿ, ಸಮಾಜದ ಅಭಿವೃದ್ಧಿ ದಿಸೆಯಲ್ಲಿ ಅರಸು ಹಾಕಿಕೊಂಡ ಯೋಜನೆಗಳನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಚಾಚೂ ತಪ್ಪದೇ ಮುಂದುವರಿಸಿದ್ದು ಅರಸು ಅವರ ಆಡಳಿತ ದೂರದೃಷ್ಟಿಗೆ ಸಾಕ್ಷಿಯಾದಂತಿದೆ ಎಂದರು.

ಡಾ. ಮೇಟಿ ರುದ್ರೇಶ ಅವರು ಅರಸು ಅವರ ಜೀವನದ ಬಗ್ಗೆ ಉಪನ್ಯಾಸ ನೀಡಿದರು. ಬಿಸಿಎಂ ಅಧಿಕಾರಿ ಸುಜಾತಾ ಖಡತರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರಸ್ತೇದಾರ ಹನುಮಂತ ಪರೋಡಕರ, ಹಳಿಯಾಳ ಪುರಸಭೆಯ ನೂತನ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸದಸ್ಯ ಜಮೀಲ ಅಹ್ಮದ ಶಿವಳ್ಳಿ, ದಾಂಡೇಲಿ ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಖೋಡೆ, ನಗರಸಭಾ ಹಿರಿಯ ಸದಸ್ಯೆ ಯಾಸ್ಮೀನ ಕಿತ್ತೂರ, ಪ್ರೀತಿ ನಾಯಕ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ ಹಾಗೂ ಇತರರು ಇದ್ದರು. ಚಿದಾನಂದ ಕೆ ಅವರು ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ