ರಾಜಕೀಯದಲ್ಲಿ ಮರಾಠ ಸಮಾಜದ ಬೆಳವಣಿಗೆ ಆಶಾದಾಯಕ: ಯಶವಂತರಾವ್

KannadaprabhaNewsNetwork |  
Published : Feb 17, 2025, 12:31 AM IST
ಪೋಟೊ ಇದೆ.12 ಎಚ್‍ಎಚ್‍ಆರ್ ಪಿ 05ಶಿವಮೊಗ್ಗ ಜಿಲ್ಲಾ ಕ್ಷತ್ರೀಯಾ ಮರಾಠ ಸೇವಾ ಸಂಘ ಹಾಗೂ ಜಿಲ್ಲಾ ಮರಾಠ ಸಮಾಜದ ವತಿಯಿಂದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್‍ಗೆ ಸನ್ಮಾನಿಸಲಾಯಿತ್ತು. ಮುಖಂಡ ಯಶವಂತರಾವ್ ಘೋರ್ಪಡೆ, ಸಚಿನ್ ಸಿಂದ್ಯಾ, ಕೃಷ್ಣೋಜಿರಾವ್ ಇತರರಿದ್ದಾರೆ. | Kannada Prabha

ಸಾರಾಂಶ

ಮರಾಠ ಸಮಾಜ ಮುಖಂಡರು ರಾಜಕೀಯದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮರಾಠ ಸಮಾಜ ಮುಖಂಡ ಯಶವಂತರಾವ್ ಘೋರ್ಪಡೆ ಹೇಳಿದರು.

ಹೊಳೆಹೊನ್ನೂರು: ಮರಾಠ ಸಮಾಜ ಮುಖಂಡರು ರಾಜಕೀಯದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮರಾಠ ಸಮಾಜ ಮುಖಂಡ ಯಶವಂತರಾವ್ ಘೋರ್ಪಡೆ ಹೇಳಿದರು.

ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘ ಹಾಗೂ ಜಿಲ್ಲಾ ಮರಾಠ ಸಮಾಜದ ವತಿಯಿಂದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಜಗದೀಶ್‍ಗೆ ಗೌರವ ಸಮರ್ಪಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮರಾಠ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಕೆಲ ತಾಲೂಕುಗಳಲ್ಲಿ ಮರಾಠ ಸಮುದಾಯದ ಮತಗಳೆ ನಿರ್ಣಾಯಕವಾಗಿವೆ. ಬಿಜೆಪಿಯ ರಾಷ್ಟ್ರೀಯಾ ನಾಯಕರು ನಮ್ಮ ಮರಾಠ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಹುದ್ದೆ ನೀಡಿರುವುದು ಸ್ವಾಗರ್ತ. ಸಮುದಾಯದ ಮುಖಂಡರು ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಸಹಕಾರ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಪ್ರಮಾಣಿಕವಾಗಿ ಪ್ರಯತ್ನಿಸಬೇಕು. ಸಮಾಜದ ಅಭಿವೃದ್ದಿ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದರು.

ಸೇವಾ ಸಂಘದ ಅಧ್ಯಕ್ಷ ಸಚಿನ್ ಸಿಂದ್ಯಾ, ಬಾಳೋಜಿ ಕೃಷ್ಣೋಜಿರಾವ್, ಗೀತಾಸತೀಶ್, ದೇವರಾಜ್ ಸಿಂಧೆ, ರಮೇಶ್, ದೇವೇಂದ್ರಪ್ಪ, ಕವಿತಾರಾವ್, ರಾಮಚಂದ್ರರಾವ್, ಕೃಷ್ಣಮೂರ್ತಿ, ಕಿರಣ್, ರಾಜಶೇಖರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ