ಮೈನವಿರೇಳಿಸುವ ಪುರವಂತರ ಗುಗ್ಗಳ

KannadaprabhaNewsNetwork |  
Published : Mar 21, 2026, 02:00 AM IST
ಪೋಟೊ20ಕೆಎಸಟಿ5: ಕುಷ್ಟಗಿ ಪಟ್ಟಣದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪುರವಂತರ ಗುಗ್ಗಳೋತ್ಸವ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ರುದ್ರಾಭಿಷೇಕ,ಮಹಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ಬಿಲ್ವಾರ್ಚನೆ ಅಭಿಷೇಕ ವಿಶೇಷ ಪೂಜೆ ಪುನಸ್ಕಾರ ಧಾರ್ಮಿಕ ಕಾರ್ಯಗಳು ನಡೆದವು

ಕುಷ್ಟಗಿ: ಪಟ್ಟಣದ ವೀರಭದ್ರೇಶ್ವರ ದೇವರ ಜಾತ್ರಾಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ,ಮಹಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ಬಿಲ್ವಾರ್ಚನೆ ಅಭಿಷೇಕ ವಿಶೇಷ ಪೂಜೆ ಪುನಸ್ಕಾರ ಧಾರ್ಮಿಕ ಕಾರ್ಯಗಳು ನಡೆದವು.

ನಂತರ ನಡೆದ ಪುರವಂತರ ಗುಗ್ಗಳೋತ್ಸವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪುರವಂತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮೂರ್ತಿಗಳೊಂದಿಗೆ ಒಡಪು ಹೇಳುತ್ತಾ ಎಂದು ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.

ಮೆರವಣಿಗೆಯಲ್ಲಿ ಪುರವಂತರ ವೀರಭದ್ರೇಶ್ವರ ದೇವರ ಒಡಪು, ಕುಣಿತ ಜಾತ್ರೆಯಲ್ಲಿ ನೋಡುಗರ ಮೈನವಿರೇಳಿಸಿತು. ಹರಕೆಯೊತ್ತ ನೂರಾರು ಜನ ಭಕ್ತರು ಪುರವಂತರಿಂದ ಶಸ್ತ್ರ ಹಾಕಿಸಿಕೊಳ್ಳುತ್ತಿರುವದು ಕಂಡು ಬಂತು. ಮೆರವಣಿಗೆಯಲ್ಲಿ ಮಹಿಳೆಯರು ಕಳಶ ಹಿಡಿದುಕೊಂಡು ಹೆಜ್ಜೆ ಹಾಕಿದರು. ವಾದ್ಯಮೇಳಗಳೊಂದಿಗೆ ಸಾವಿರಾರು ಜನರು ಭಾಗವಹಿಸಿದ್ದರು. ಮೆರವಣಿಗೆ ನಂತರ ಬಂದಿರುವ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪಟ್ಟಣದ ಗಣ್ಯರು ಹಾಗೂ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಮೂಡಿಸಿ
ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು-ಶಿವಾಚಾರ್ಯರು