ಗುರುಗಳು ಸದಾ ಭಕ್ತರ ಏಳಿಗೆ ಬಯಸುತ್ತಾರೆ: ಹೊನ್ನಾಳಿ ಶ್ರೀಗಳು

KannadaprabhaNewsNetwork |  
Published : Jan 15, 2025, 12:47 AM IST
ಫೋಟೊ ಶೀರ್ಷಿಕೆ: 14ಆರ್‌ಎನ್‌ಆರ್7ರಾಣಿಬೆನ್ನೂರು ನಗರದ ಚೆನ್ನೇಶ್ವರ ಮಠದದಲ್ಲಿ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಜರುಗಿತು.  | Kannada Prabha

ಸಾರಾಂಶ

ಗುರುಗಳು ಯಾವಾಗಲೂ ಭಕ್ತರ ಏಳಿಗೆಯನ್ನು ಬಯಸುತ್ತಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಗುರುಗಳು ಯಾವಾಗಲೂ ಭಕ್ತರ ಏಳಿಗೆಯನ್ನು ಬಯಸುತ್ತಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದದಲ್ಲಿ ಹೊನ್ನಾಳಿ ಶ್ರೀ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಗುರುಗಳ ಆಶಯವನ್ನು ಅರ್ಥೈಸಿಕೊಂಡು ಸಮಾಜಕ್ಕೆ ಬೇಕಾದಂತೆ ಬದುಕುವುದು ಶಿಷ್ಯನ ಕರ್ತವ್ಯ. ದೀಪಕ್ಕೆ ಬಳಸುವ ಬತ್ತಿ, ಎಣ್ಣೆ, ಪಣತೆ ಎಲ್ಲವೂ ಪ್ರಕೃತಿಯದ್ದು. ಇವೆಲ್ಲವುಗಳನ್ನು ಬಳಸಿಕೊಳ್ಳುವ ನಾವು ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಬದುಕಬೇಕು ಎಂದರು. ಕಾರ್ತಿಕ ದೀಪೋತ್ಸವ ಕುರಿತು ವಿಶ್ರಾಂತ ಪ್ರಾಧ್ಯಾಪಕ ಜಿ.ವಿ. ಕೋರಿ ವಿಶೇಷ ಉಪನ್ಯಾಸ ಮಾಡಿದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹೊನ್ನಾಳಿ ಪುರಸಭೆಯ ಸದಸ್ಯ ಹಾಗೂ ಚನ್ನಕಿರಣ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ ಹೊಸಕೇರೆ, ಪತ್ರಕರ್ತ ವಿಶ್ವನಾಥ್ ಕುಂಬಳೂರ, ಮಂಜನಗೌಡ ಸಣ್ಣಿಂಗಮ್ಮನವರ, ಬಿ.ಎಲ್. ಕುಮಾರಸ್ವಾಮಿ, ನಿವೃತ್ತ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವನಗೌಡ ಪಾಟೀಲ, ಕಾಕೋಳ ಗ್ರಾಮದ ಆದರ್ಶ ರೈತ ಕರಬಸನಗೌಡ ಪೊಲೀಸಗೌಡ ಅವರುಗಳಿಗೆ ಗುರು ರಕ್ಷೆಯನ್ನು ನೀಡಲಾಯಿತು. ಶ್ರೀ ಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ರಾಮಣ್ಣ ಪಾಗಾದಾರ, ಜಗದೀಶ ಮಳೆಮಠ, ಮಂಜುಳಾ, ಚೆನ್ನವೀರಗೌಡ ಪಾಟೀಲ, ಲಲಿತಮ್ಮ ಹರನಗಿರಿ, ರತ್ನಾ, ಉಮೇಶ್ ವೀರಬಸಪ್ಪನವರ, ರಜನಿ ಕರಿಗಾರ, ಯುವರಾಜ ಹಿರೇಮಠ, ಎಸ್.ಎಮ್. ಕರಿಗಾರ, ವಿ.ವಿ. ಹರಪನಹಳ್ಳಿ, ಕಸ್ತೂರೆಮ್ಮ ಪಾಟೀಲ, ಬಿದ್ದಾಡಪ್ಪ ಚಕ್ರಸಾಲಿ, ಪ್ರಭಾಕರ ಶಿಗ್ಲಿ, ಮೃತ್ಯುಂಜಯ ಪಾಟೀಲ, ಗೌರಿಶಂಕರಸ್ವಾಮಿ ನೆಗಳೂರಮಠ, ಎಂ.ಕೆ. ಹಾಲಸಿದ್ದಯ್ಯಾ ಸ್ವಾಮಿಗಳು, ಕಲ್ಲಪ್ಪ ಅಂಗಡಕಿ, ಬಸವರಾಜ ಕುರವತ್ತಿ, ನಾಗರಾಜ ಪಟ್ಟಣಶೆಟ್ಟಿ, ಗಾಯತ್ರಿ ಕುರುವತ್ತಿ, ಸುನಂದಮ್ಮ ತಿಳವಳ್ಳಿ, ಭಾಗ್ಯಶ್ರೀ ಗುಂಡಗಟ್ಟಿ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ