ಗುರಿ ಮುಟ್ಟಲು ಗುರು ಕಾರಣ್ಯ ಅತ್ಯವಶ್ಯಕ: ಬಸವದೇವರು

KannadaprabhaNewsNetwork |  
Published : Sep 27, 2026, 01:30 AM IST
ಚಿತ್ರ 26ಬಿಡಿಆರ್57 | Kannada Prabha

ಸಾರಾಂಶ

ಜೀವನದ ಗುರಿ ಮುಟ್ಟಲು ಗುರು ಕಾರುಣ್ಯ ಬೇಕು ಎಂದು ಬಸವಕಲ್ಯಾಣದ ಬಸವ ತತ್ವ ಪ್ರಚಾರಕ ಬಸವದೇವರು ಹೇಳಿದರು. ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಈಚೆಗೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವ ಮಂಡಿಸಿ ಗುರು ತೋರಿದ ಮಾರ್ಗದಲ್ಲಿ ಭಕ್ತಿ ಮಾಡಬೇಕು. ಭಕ್ತಿಯಲ್ಲಿ ಅರೆ ಕ್ಷಣದ ಮರೆವು ಸಹ ಸಲ್ಲದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಜೀವನದ ಗುರಿ ಮುಟ್ಟಲು ಗುರು ಕಾರುಣ್ಯ ಬೇಕು ಎಂದು ಬಸವಕಲ್ಯಾಣದ ಬಸವ ತತ್ವ ಪ್ರಚಾರಕ ಬಸವದೇವರು ಹೇಳಿದರು. ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಈಚೆಗೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವ ಮಂಡಿಸಿ ಗುರು ತೋರಿದ ಮಾರ್ಗದಲ್ಲಿ ಭಕ್ತಿ ಮಾಡಬೇಕು. ಭಕ್ತಿಯಲ್ಲಿ ಅರೆ ಕ್ಷಣದ ಮರೆವು ಸಹ ಸಲ್ಲದು ಎಂದು ತಿಳಿಸಿದರು.

ತನು, ಮನ, ಭಾವಗಳ ಶುದ್ಧೀಕರಣವೇ ಸಾಧನೆಯ ಮೂಲ ಅಸ್ತ್ರ. ಅಂತರಂಗ ತೊಳೆದುಕೊಳ್ಳುವ ಬಗೆಯನ್ನು ಚನ್ನಬಸವಣ್ಣನವರು ತಮ್ಮ ಕರಣ ಹಸಿಗೆಯಲ್ಲಿ ಹೃದಯಂಗಮವಾಗಿ ವಿವರಿಸಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಮಾನವನ ಪರಮ ಉದ್ದೇಶ ಲಿಂಗಾಂಗ ಸಾಮರಸ್ಯ. ಈ ದಿಸೆಯಲ್ಲಿ ವಚನಗಳು ದಾರಿ ತೋರುತ್ತವೆ. ವಚನಗಳಿಂದ ನರ ನಾಡಿಗಳೆಲ್ಲ ರೋಮಾಂಚನಗೊಳ್ಳುತ್ತವೆ ಎಂದು ತಿಳಿಸಿದರು.

ಜಗತ್ತು ಪರಮಾತ್ಮನ ಮನೆ. ಎಲ್ಲ ಜೀವಿಗಳಲ್ಲಿ ಪರಮಾತ್ಮನಿರುವ ಕಾರಣ ಯಾರಿಗೂ, ಯಾವ ಜೀವಿಗೂ ನೋವು ಉಂಟು ಮಾಡಬಾರದು ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಬೀದರ್ ವಿಶ್ವವಿದ್ಯಾಲಯಕ್ಕೆ ಅನುಭವ ಮಂಟಪ ಸ್ಥಾಪಿಸಿ, ಪ್ರಜಾಪ್ರಭುತ್ವದ ಬೀಜ ಬಿತ್ತಿದ ಜಗಜ್ಯೋತಿ ಬಸವೇಶ್ವರ ಹೆಸರಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಬೀದರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಪ್ರಯುಕ್ತ ಶಿವಯ್ಯ ಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಕಿ ಸಂಧ್ಯಾರಾಣಿ ಮುತ್ತಂಗೆ ಅವರಿಗೆ ಅಭಿನಂದಿಸಲಾಯಿತು. ಸಿ.ಎಸ್.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಶಾಂತಕುಮಾರ ಪ್ರಭಾ ಮುಖ್ಯ ಅತಿಥಿಯಾಗಿದ್ದರು. ಸಾಹಿತಿ ರಮೇಶ ಮಠಪತಿ, ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಪ್ರಕಾಶ ಮಠಪತಿ, ರಾಜಕುಮಾರ ಪಾಟೀಲ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್