ಗ್ರಂಥಾಲಯಗಳ ಆರಂಭದಿಂದ ಓದುವ ಹವ್ಯಾಸ, ಜ್ಞಾನ ವೃದ್ಧಿ

KannadaprabhaNewsNetwork | Published : May 4, 2025 1:32 AM

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಸುಜ್ಜಜಿತವಾದ ಗ್ರಂಥಾಲಯ ಆರಂಭಿಸುವುದರಿಂದ ಜನರಲ್ಲಿ ಓದುವ ಹವ್ಯಾಸ ಬೆಳೆಯುವುದರ ಜೊತೆಗೆ ಜ್ಞಾನ ವೃದ್ಧಿಯಾಗುವುದು ಎಂದು ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಗ್ರಾಮೀಣ ಪ್ರದೇಶದಲ್ಲಿ ಸುಜ್ಜಜಿತವಾದ ಗ್ರಂಥಾಲಯ ಆರಂಭಿಸುವುದರಿಂದ ಜನರಲ್ಲಿ ಓದುವ ಹವ್ಯಾಸ ಬೆಳೆಯುವುದರ ಜೊತೆಗೆ ಜ್ಞಾನ ವೃದ್ಧಿಯಾಗುವುದು ಎಂದು ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.

ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಬಸವ ಗ್ರಂಥ ಬಂಡಾರ ಮತ್ತು ಕಲ್ಯಾಣ ಮಂಟಪ ಬಸವೇಶ್ವರ ಮಂದಿರದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಗ್ರಂಥಾಲಯದಲ್ಲಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ಪುಸ್ತಕವನ್ನು ಖರೀದಿಸಬೇಕು. ಅದಕ್ಕೆ ₹2 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಮಂದಿರವನ್ನು ಕಟ್ಟಿಸುವುದರ ಜತೆಗೆ ಕಲ್ಯಾಣ ಮಂಟಪ ಹಾಗೂ ಅಧುನಿಕ ವ್ಯವಸ್ಥೆಯ ಗ್ರಂಥಾಲಯ ಕಟ್ಟಿ ಇತರರಿಗೆ ಮಾದರಿಯಾಗಿದ್ದೀರಿ. ನೇತೃತ್ವ ವಹಿಸಿದ್ದ ಡಾ.ಧರೇಪ್ಪ ಚೌಗಲಾ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿ ಇದು ನಿಜವಾದ ಬಸವಣ್ಣವರ ತತ್ವವನ್ನು ಆಚರಣೆಗೆ ತಂದತ್ತೆ ಎಂದು ಬಣ್ಣಿಸಿದರು.

ಬಸವಾದಿ ಶರಣರು ವಚನಗಳನ್ನು ಬರೆದು ಅವುಗಳನ್ನು ಜನ ಸಾಮಾನ್ಯರ ಮನ ಮುಟ್ಟವಂತೆ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಯಕಕ್ಕೆ ಮಹತ್ವ ನೀಡಿ ಸಮಾನತೆ ಸಮಾಜವನ್ನು ಕಟ್ಟಿದರು ಎಂದು ತಿಳಿಸಿದರು.ಸಮಾರಂಭದ ಸಾನ್ನಿಧ್ಯವನ್ನು ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮತ್ತು 108 ಭಾಲಾಚಾರ್ಯ ಸಿದ್ದಸೇನ ಮುನಿ ಮಹಾರಾಜರು ವಹಿಸಿದ್ದರು.

ಪಾವನ ಸಾನ್ನಿಧ್ಯ ನದಿ-ಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿ, ನೇತೃತ್ವ ಶೇಗುಣಸಿ ಡಾ.ಮಹಾಂತ ಪ್ರಭು ಸ್ವಾಮೀಜಿ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಲ್.ಇ ಆಸ್ಪತ್ರೆ ಗೋಕಾಕ ಮುಖ್ಯ ವೈದ್ಯಾಧಿಕಾರಿ ಡಾ.ಧರೆಪ್ಪ ಚೌಗಲಾ ವಹಿಸಿದ್ದರು. ಅತಿಥಿಗಳಾಗಿ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಮಹಾದೇವ ಚೌಗಲಾ, ರಾಜು ನಾಡಗೌಡ, ಡಾ.ಸಂಜೀವ ಚೌಗಲಾ, ಅಪ್ಪಾಸಾಬ ಕುಮಾರಗೌಡ, ಪ್ರದೀಪ ನಂದಗಾಂವ, ಆನಂದ ಕುಲಕರ್ಣಿ ಭಾಗವಹಿಸಿದ್ದರು.

Share this article