ಮೊಬೈಲ್‌ ಗೀಳಿನಿಂದ ಪುಸ್ತಕ ಓದುವ ಅಭ್ಯಾಸ ಮಾಯ

KannadaprabhaNewsNetwork |  
Published : Feb 24, 2025, 12:32 AM IST
೨೩ಕೆಎಲ್‌ಆರ್-೧ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿವಿಯಿಂದ ಪ್ರಥಮ ಪದವಿ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ತರಗತಿಗಳ ಪಠ್ಯಪುಸ್ತಕ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಪುಸ್ತಕ ಬರೆಯುವುದು, ಪುಸ್ತಕ ಮುದ್ರಿಸುವುದು ಸುಲಭದ ಕೆಲಸವಲ್ಲ, ಅದೊಂದು ಸಾಧನೆಯೇ ಸರಿ ಆದರೆ ಅಂತಹ ಪುಸ್ತಕಗಳನ್ನು ಶ್ರಮವಹಿಸಿ ಹೊರತಂದರು ಕೊಳ್ಳುವ ಮನಸ್ಥಿತಿ ಇಂದಿನ ಯುವಕರಲ್ಲಿ ಇಲ್ಲ, ಪಠ್ಯ ಪುಸ್ತಕಗಳನ್ನೂ ಪಿಡಿಎಫ್‌ನಲ್ಲಿ ನೋಡಿ ಬಳಕೆಮಾಡುವಂತಹ ಮನಸ್ಥಿತಿ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳೆವಣಿಯಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಇತ್ತೀಚೆಗೆ ಕಂಪ್ಯೂಟರ್ ಯುಗದಲ್ಲಿ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡಿ ಕಾಲೇಜುಗಳಿಗೆ ಹಂಚಿದರೂ ಕೊಂಡುಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಿಗೆ ಇಲ್ಲ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ವಿಷಾದ ವ್ಯಕ್ತಪಡಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉತ್ತರ ವಿವಿಯಿಂದ ಪ್ರಥಮ ಪದವಿ ಬಿಎ ,ಬಿಎಸ್ಸಿ,ಬಿಕಾಂ, ಬಿಸಿಎ, ಬಿಬಿಎ ತರಗತಿಗಳ ಪಠ್ಯಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಬರವಣಿಗೆ, ಮುದ್ರಣ ಕಷ್ಟ

ಪುಸ್ತಕ ಬರೆಯುವುದು, ಪುಸ್ತಕ ಮುದ್ರಿಸುವುದು ಸುಲಭದ ಕೆಲಸವಲ್ಲ, ಅದೊಂದು ಸಾಧನೆಯೇ ಸರಿ ಆದರೆ ಅಂತಹ ಪುಸ್ತಕಗಳನ್ನು ಶ್ರಮವಹಿಸಿ ಹೊರತಂದರು ಕೊಳ್ಳುವ ಮನಸ್ಥಿತಿ ಇಂದಿನ ಯುವಕರಲ್ಲಿ ಇಲ್ಲ, ಪಠ್ಯ ಪುಸ್ತಕಗಳನ್ನೂ ಪಿಡಿಎಫ್‌ನಲ್ಲಿ ನೋಡಿ ಬಳಕೆಮಾಡುವಂತಹ ಮನಸ್ಥಿತಿ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳೆವಣಿಯಲ್ಲ ಎಂದು ತಿಳಿಸಿದರು.ಹಿಂದೆ ನಾಡಿನ ಹೆಸರಾಂತ ಸಾಹಿತಿಗಳು ಬರೆದು ಬಿಡುಗಡೆ ಮಾಡಿದ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇತ್ತು, ಹಲವಾರು ಮುದ್ರಣಗಳನ್ನು ಪಡೆದುಕೊಂಡು ಪುಸ್ತಕ ಮಾರಾಟವಾಗುತ್ತಿದ್ದವು. ಮೊಬೈಲ್ ಗೀಳಿನಿಂದ ಇಂದು ಪುಸ್ತಕ ಓದುವ ಅಭ್ಯಾಸ ಮಾಯವಾಗುತ್ತಿದೆ. ಶೈಕ್ಷಣಿಕ ಸಾಧನೆಗೆ ಪಠ್ಯ ಪುಸ್ತಕ ಓದುವುದು ಹೆಚ್ಚು ಸೂಕ್ತ, ಕೇವಲ ಪ್ರಶ್ನೋತ್ತರಗಳನ್ನು ಸಂಗ್ರಹಿಸಿಕೊಂಡು ಪಿಡಿಎಫ್‌ನಲ್ಲಿ ಓದಿದರೆ ನಿಮ್ಮ ಸಾಧನೆ ಶೇ.೧೦೦ ಆಗಲು ಸಾಧ್ಯವೇ ಇಲ್ಲ, ಅಂತಹ ಸಾಧನೆಗೆ ನಿರಂತರ ಪಠ್ಯಪುಸ್ತಕ ಅಧ್ಯಯನ ಅಗತ್ಯ ಎಂದರು.

ಅಂಬೇಡ್ಕರ್‌ ಆದರ್ಶ ಪಾಲಿಸಿ

ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭ್ಯಾಸ ಹೆಚ್ಚಿಸುವಲ್ಲಿ ಅಧ್ಯಾಪಕರ ಜವಾಬ್ದಾರಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಪುಸ್ತಕಗಳನ್ನು ಕೊಂಡುಕೊಳ್ಳಲು ಪ್ರೇರೇಪಿಸಬೇಕು. ಅಂಬೇಡ್ಕರ್ ಅಷ್ಟೊಂದು ಪುಸ್ತಕಗಳನ್ನು ಓದಿದ್ದರಿಂದಲೇ ದೇಶದ ಸಂವಿಧಾನ ರಚಿಸುವ ಶಕ್ತಿ ಪಡೆದುಕೊಂಡು ನಮ್ಮ ಸಂವಿಧಾನ ಶಿಲ್ಪಿಯಾದರು. ಪುಸ್ತಕ ಓದುವ ಅಭ್ಯಾಸಕ್ಕೆ ಅವರೇ ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದು, ಅವರ ಆದರ್ಶ ಪಾಲಿಸಿ ಪುಸ್ತಕ ಓದಿ ಎಂದು ಕರೆ ನೀಡಿದರು.

ಮೊಬೈಲ್‌ ಗೀಳಿನಿಂದ ಹೊರಬನ್ನಿ

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿ ಆಡಳಿತ ವಿಭಾಗದ ಕುಲ ಸಚಿವ ಶ್ರೀಧರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬನ್ನಿ, ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಅದು ನಿಮ್ಮ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಮುನಿಶಾಮಪ್ಪ, ಅಧ್ಯಾಪಕರಾದ ಕನ್ನಡ ವಿಭಾಗದ ಡಾ.ಚೆಲುವರಾಜ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ