ಮೊಬೈಲ್‌ನಿಂದ ಓದುವ ಹವ್ಯಾಸ ಕುಂಠಿತ

KannadaprabhaNewsNetwork |  
Published : Oct 28, 2025, 12:26 AM IST
ಫೋಟೊ 26 ಟಿಟಿಎಚ್ 01: ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ ಬರೆದ ಜೋಪಾನ ಸಖಿ ಜೋಪಾನ ಪುಸ್ತಕವನ್ನು ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಲೋಕಾರ್ಪಣೆ ಮಾಡಿದರು. ಡಾ. ಅಪರ್ಣಾ ಶ್ರೀವತ್ಸಾ ತಾಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಇದ್ದರು. | Kannada Prabha

ಸಾರಾಂಶ

ಮೊಬೈಲ್ ಗೀಳಿನಿಂದಾಗಿ ಈಚೆಗೆ ಜನರಲ್ಲಿ ಓದುವ ಹವ್ಯಾಸವೇ ಕುಂದುತ್ತಿದ್ದು ಸಾಹಿತ್ಯ ಕೃತಿಗಳ ರಚನೆ ಅಗತ್ಯವೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಯಾರಿಗಾಗಿ ಬರೆಯಬೇಕು ಎಂಬ ನಿರಾಶದಾಯಕ ವಾತಾವರಣ ಸೃಷ್ಟಿಯಾಗಿರುವುದು ವಿಷಾದನೀಯ ಎಂದು ಲೇಖಕರೂ ಆಗಿರುವ ನಿವೃತ್ತ ಪ್ರಾಧ್ಯಾಪಕ ಡಾ.ಸಣ್ಣರಾಮ ಅಸಮಾಧಾನ ವ್ಯಕ್ತಪಡಿಸಿದರು.

ತೀರ್ಥಹಳ್ಳಿ: ಮೊಬೈಲ್ ಗೀಳಿನಿಂದಾಗಿ ಈಚೆಗೆ ಜನರಲ್ಲಿ ಓದುವ ಹವ್ಯಾಸವೇ ಕುಂದುತ್ತಿದ್ದು ಸಾಹಿತ್ಯ ಕೃತಿಗಳ ರಚನೆ ಅಗತ್ಯವೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಯಾರಿಗಾಗಿ ಬರೆಯಬೇಕು ಎಂಬ ನಿರಾಶದಾಯಕ ವಾತಾವರಣ ಸೃಷ್ಟಿಯಾಗಿರುವುದು ವಿಷಾದನೀಯ ಎಂದು ಲೇಖಕರೂ ಆಗಿರುವ ನಿವೃತ್ತ ಪ್ರಾಧ್ಯಾಪಕ ಡಾ.ಸಣ್ಣರಾಮ ಅಸಮಾಧಾನ ವ್ಯಕ್ತಪಡಿಸಿದರು.

ತೀರ್ಥಹಳ್ಳಿ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ ಬರೆದ ಜೋಪಾನ ಸಖಿ ಜೋಪಾನ ಪುಸ್ತಕವನ್ನು ಲೋಕಾರ್ಪಣೆ ಮಾಡಿ, ಬರಹಗಾರ ತನ್ನ ಆಂತರ್ಯದಲ್ಲಿ ಹುಟ್ಟಿದ ಭಾವವನ್ನು ಯಥಾವತ್ತಾಗಿ ಕೃತಿ ರೂಪದಲ್ಲಿ ಮೂಡಿಸುವುದು ಸುಲಭ ಸಾಧ್ಯವಲ್ಲಾ. ಅಂತಹ ಅರ್ಹತೆ ಬರಹಗಾರರಿಗೆ ಅಗತ್ಯ. ಈ ಕೃತಿಯಲ್ಲಿ ಲೇಖಕಿ ತಮ್ಮ ಸಾಮಥ್ರ್ಯವನ್ನು ಸಾದರಪಡಿಸಿದ್ದಾರೆ ಎಂದು ಹೇಳಿದರು.

ಸ್ತನ ಕ್ಯಾನ್ಸರ್ ರೋಗಕ್ಕೆ ಸಂಭಂದಿಸಿದ ಈ ಕೃತಿಯ ಶಿರೋನಾಮೆಯೇ ಕೃತಿಯ ಮಹತ್ವವನ್ನು ಸಾರಿದ್ದು ಹೆಣ್ಣಿನ ನೋವನ್ನು ಅರಿತ ಲೇಖಕಿ ತನಗೇ ನೋವು ತಟ್ಟಿದ ರೀತಿಯಲ್ಲಿ ಸಾಂತ್ವನದ ಭಾವದಲ್ಲಿ ಅದನ್ನು ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ ಎಂದರು.

ಮೊಬೈಲ್ ಗೀಳಿನಿಂದಾಗಿ ಈಚಿನ ದಿನಗಳಲ್ಲಿ ಜನರಲ್ಲಿ ಓದುವ ಹವ್ಯಾಸವೇ ಇಲ್ಲವಾಗಿದ್ದು ಹೀಗಾಗಿ ಯಾರಿಗಾಗಿ ಬರೆಯಬೇಕು ಎಂಬ ಮನೋಭಾವ ಬರಹಗಾರರಲ್ಲಿ ಮೂಡುತ್ತಿರುವಂತಿದೆ. ಎರಡು ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿರುವ ಶ್ರೀಮಂತ ಸಾಹಿತ್ಯದ ಈ ನೆಲದಲ್ಲಿ ಸಾಹಿತ್ಯದ ಬಗೆಗಿನ ಕಾಳಜಿ ಪ್ರಶಂಸನೀಯ ಎಂದರು.

ಪುಸ್ತಕದ ಕುರಿತು ಮಾತನಾಡಿದ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ, ಸ್ತನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಮಹಿಳೆಯನ್ನು ಹತ್ತಿರದಿಂದ ಕಂಡಿದ್ದು ವೈಯಕ್ತಿಕವಾಗಿಯೂ ನನ್ನನ್ನು ಕಾಡಿದ ಹಿನ್ನೆಲೆಯಲ್ಲಿ ಈ ಕೃತಿಯ ರಚನೆಗೆ ಪ್ರೇರಣೆ ದೊರೆತಿದೆ. ರೋಗ ಕಾಣಿಸಿಕೊಂಡ ಮಾತ್ರದಲ್ಲಿ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲಾ. ಸೂಕ್ತ ಚಿಕಿತ್ಸೆಯೂ ಇದ್ದು ಈ ಬಗ್ಗೆ ಮಹಿಳೆಯರನ್ನು ಜಾಗೃತಗೊಳಿಸಬೇಕೆಂಬುದಷ್ಠೇ ನನ್ನ ಪ್ರಯತ್ನವಾಗಿದೆ ಎಂದರು.

ಶಿವಮೊಗ್ಗ ಎನ್ ಎಚ್ ಆಸ್ಪತ್ರೆಯ ಅಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸಾ, ನಿವೃತ್ತ ಪ್ರಾಂಶುಪಾಲ ಡಾ. ಬಿ.ಗಣಪತಿ ಅಧ್ಯಕ್ಷತೆ ವಹಿಸಿದ್ದು, ಡಾ.ಅಪರ್ಣಾ ಶ್ರೀವತ್ಸಾ ತಾಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಇದ್ದರು. ಫೋಟೊ 26 ಟಿಟಿಎಚ್ 01: ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ ಬರೆದ ಜೋಪಾನ ಸಖಿ ಜೋಪಾನ ಪುಸ್ತಕವನ್ನು ತೀರ್ಥಹಳ್ಳಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಲೋಕಾರ್ಪಣೆ ಮಾಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು