ಜಗತ್ತಿನಲ್ಲಿ ನಡೆಯುವ ದ್ವೇಷ, ವಿಕಾರಗಳೇ ಅಶಾಂತಿಗೆ ಕಾರಣ: ಸುದೇಶ ದೀದಿಜಿ

KannadaprabhaNewsNetwork |  
Published : May 18, 2025, 11:58 PM IST
18ಎಚ್‌ವಿಆರ್4 | Kannada Prabha

ಸಾರಾಂಶ

ದೈವಿ ಮೌಲ್ಯಗಳು ಹಾಗೂ ದೈವಿ ಗುಣಗಳಿಂದ ಸಕಾರಾತ್ಮಕ ಜೀವನವನ್ನು ಸುವರ್ಣ ಮಾಡಿಕೊಳ್ಳಬೇಕು. ಆಗ ಮಾತ್ರ ಜೀವನ ಸುವರ್ಣಮಯವಾಗುತ್ತದೆ.

ಹಾವೇರಿ: ಜಗತ್ತಿನಲ್ಲಿ ನಡೆಯುವ ದ್ವೇಷ, ವಿಕಾರಗಳೇ ಅಶಾಂತಿಗೆ ಕಾರಣವಾಗಿದೆ. ಈ ವಿಕಾರಗಳನ್ನು ಹೊಡೆದೊಡಿಸುವ ಕೆಲಸವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ರಾಜಸ್ಥಾನದ ಮೌಂಟ್ ಅಬು ಬ್ರಹ್ಮಾಕುಮಾರಿಸ್ ಸಹ ಮುಖ್ಯ ಆಡಳಿತಾಕಾರಿಣಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿಜಿ ತಿಳಿಸಿದರು.ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಹಾವೇರಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೈವಿ ಮೌಲ್ಯಗಳು ಹಾಗೂ ದೈವಿ ಗುಣಗಳಿಂದ ಸಕಾರಾತ್ಮಕ ಜೀವನವನ್ನು ಸುವರ್ಣ ಮಾಡಿಕೊಳ್ಳಬೇಕು. ಆಗ ಮಾತ್ರ ಜೀವನ ಸುವರ್ಣಮಯವಾಗುತ್ತದೆ. ಅತೀ ಶೀಘ್ರದಲ್ಲಿ ಸುವರ್ಣಯುಗ ಬರಲಿದ್ದು, ಸುವರ್ಣಯುಗದ ಸ್ಥಾಪನೆಯನ್ನು ಸ್ವಯಂ ಭಗವಂತನೇ ಮಾಡುತ್ತಿದ್ದಾನೆ. ಯಾವುದೇ ಜಾತಿ, ಮತ, ಭೇದ, ಸ್ವಾರ್ಥಗಳಿಲ್ಲದೇ, ನಮಗಾಗಿಯೂ ಅಲ್ಲದೇ ವಿಶ್ವಶಾಂತಿಗೋಸ್ಕರ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಸೇವೆ ಮಾಡುತ್ತಿದೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಮಾಡುತ್ತಿರುವ ಈ ಸುವರ್ಣ ಸಂಭ್ರಮ ವಿಶ್ವಕ್ಕೋಸ್ಕರ ಸೀಮಿತವಾಗಿದೆ. ಸತ್ಯ, ನ್ಯಾಯ, ನೀತಿ, ಧರ್ಮ ಜಾಗೃತಿ ಆಗುವ ಸಮಯ ಬಂದಿದೆ. ಶಿಷ್ಟಗುಣಗಳ ಸಂಹಾರ, ಶ್ರೇಷ್ಠ ಗುಣಗಳ ಸಂಸ್ಕಾರ ವರ್ತಮಾನ ಸಮಯದಲ್ಲಿ ಈ ಜಗತ್ತಿಗೆ ಅವಶ್ಯಕತೆ ಇದೆ ಎಂದರು.ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿಗಳು ಮಾತನಾಡಿ, ಅನೇಕ ವರ್ಷಗಳಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮನೆ ಮನೆಗೆ, ಹಳ್ಳಿ ಹಳ್ಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡುವಂತಹ ಕಾರ್ಯವನ್ನು ಮಾಡುತ್ತಿದೆ. ಮಾನವೀಯ ಮೌಲ್ಯಗಳ ಜಾಗೃತಿಯನ್ನು ಬೆಳೆಸುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ವಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಅವರು ಉತ್ತಮ ವ್ಯಕ್ತಿತ್ವ ಹಾಗೂ ಆರೋಗ್ಯಯುತ ಜೀವನಕ್ಕೆ ಧ್ಯಾನವೇ ಮದ್ದು ಎಂದು ಹೇಳಿ ನೆರೆದಿದ್ದ ಜನಸಮೂಹಕ್ಕೆ ಧ್ಯಾನದ ಮಹತ್ವವನ್ನು ತಿಳಿಸಿಕೊಟ್ಟರು. ಧ್ಯಾನದ ಅಭ್ಯಾಸ ಮಾಡಿಸಿದರು.ಈ ವೇಳೆ ಶ್ರವಣಕುಮಾರ ಬೆಂಗೇರಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಇದ್ದರು. ಬ್ರಹ್ಮಾಕುಮಾರಿ ಅನ್ನಪೂರ್ಣ, ಬ್ರಹ್ಮಾಕುಮಾರಿ ವೈಶಾಲಿ, ಬ್ರಹ್ಮಕುಮಾರಿ ಕಲಾವತಿ, ಬ್ರಹ್ಮಕುಮಾರಿ ಬಸಮ್ಮ ಅಕ್ಕನವರು ಭಾಗವಹಿಸಿದ್ದರು. ಹಾವೇರಿಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಸ್ವಾಗತಿಸಿದರು. ಶಿರಸಿಯ ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜಿ ನಿರೂಪಿಸಿದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು