ರಾಮನಗರ: ಐತಿಹಾಸಿಕ ಹಿನ್ನೆಲೆಯುಳ್ಳ ರಾಮನೂರಿನಲ್ಲಿ ಶುಕ್ರವಾರ ರಾತ್ರಿ ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಮಡಿಕೇರಿ ಸ್ತಬ್ಧಚಿತ್ರ ಪ್ರದರ್ಶನ ಹಾಗೂ ಗ್ರಾಮ ದೇವ - ದೇವತೆಗಳ ಭವ್ಯ ಮೆರವಣಿಗೆ ಜನರನ್ನು ದೇವಲೋಕಕ್ಕೆ ಕರೆದೊಯ್ದಿತ್ತು.
ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನು ಒಮ್ಮೆ ದೇವಲೋಕಕ್ಕೆ ಕರೆದುಕೊಂಡು ಹೋಗಿತ್ತು. ಒಂದೊಂದು ಮಂಟಪಗಳಲ್ಲೂ ಒಂದೊಂದು ಕಥೆಯನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದಿಟ್ಟು ಕಲಾವಿದರು ಮೆಚ್ಚುಗೆ ಗಳಿಸಿದರು.
ಮೆರವಣಿಗೆ ನೋಡಲು ಜನರು ಮುಗಿಬಿದ್ದರು. ನೂಕುನುಗ್ಗಲಿನ ನಡುವೆಯೂ ಜನರು ವರ್ಣ ರಂಜಿತ ಮೂರು ಮಂಟಪಗಳನ್ನು ವೀಕ್ಷಿಸಲು ನಗರದಾದ್ಯಂತ ಕಾಲ್ನಡಿಗೆಯಲ್ಲೇ ತೆರಳಿ ದೇವರುಗಳ ಮೆರವಣಿಗೆ ಸೌಂದರ್ಯವನ್ನು ಕಣ್ತುಂಬಿಕೊಂಡರು.ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೆ ಮಿನುಗುವ ದೀಪಗಳ ಕೆಳಗೆ ಕತ್ತಲೆಯನ್ನು ಭೇದಿಸುವ ರಾಕ್ಷಸರ ಘರ್ಜನೆ, ಶಾಂತಿ ಮತ್ತು ಭದ್ರತೆಯ ಭಾವವನ್ನು ತರಲು ದೇವರು
ಸಚಿವರಿಂದ ಪೂಜೆ ಸಲ್ಲಿಸಿ ಚಾಲನೆ :
ಅಲಂಕಾರದೊಂದಿಗೆ ಸಾರೋಟು ಮತ್ತು ತೆರೆದ ಟ್ರ್ಯಾಕ್ಟರ್ ಗಳಲ್ಲಿ ಮಾರುತಿ ನಗರದ ಬಳಿಗೆ ತಂದು ಮೆರವಣಿಗೆಗೆ ಅಣಿಗೊಳಿಸಲಾಯಿತು.
ಆನಂತರ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಬಮೂಲ್ ಅಧ್ಯಕ್ಷ ಡಿ. ಕೆ. ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಐಜೂರು ವೃತ್ತದ ಮಾರ್ಗವಾಗಿ ಕೆಂಪೇಗೌಡ ವೃತ್ತ, ರಾಯರದೊಡ್ಡಿ ವೃತ್ತಕ್ಕೆ ತೆರಳಿ ಸ್ತಬ್ಧ ಚಿತ್ರಗಳು ಪ್ರದರ್ಶನ ನೀಡಿದವು.ಅಲ್ಲಿಂದ ರೋಟರಿ ಸರ್ಕಲ್ ಮಾರ್ಗವಾಗಿ ಕಾಂಗ್ರೆಸ್ ಭವನದ ಎದುರಿಗಿರುವ ಗೌಸಿಯಾ ಕಾಲೇಜು ಬಳಿಗೆ ವಾಪಸ್ಸಾಯಿತು. ರಸ್ತೆಯ ಎರಡು ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ನಿಂತು ಜನರು ದೇವರ ದರ್ಶನ ಪಡೆದು ಪುನಿತರಾದರು.
ಈ ವರ್ಣ ರಂಜಿತ ಸ್ತಬ್ಧ ಚಿತ್ರಗಳು ಹಾಗೂ ಗ್ರಾಮ ದೇವರುಗಳ ಮೆರವಣಿಗೆಗೆ ಜಾನಪದ ಕಲೆ ಮತ್ತು ಕಲಾವಿದರು ರಂಗು ತುಂಬಿದರು.ಶ್ರೀರಾಮ, ಲಕ್ಷ್ಮಣ, ಆಂಜನೇಯ ಗೊಂಬೆಗಳು,
ಕೋಟ್.....
ಬಿಜೆಪಿ ಪಕ್ಷದವರಂತೆ ಕಾಂಗ್ರೆಸ್ ಎಂದೂ ದೇವರನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಚುನಾವಣೆಗಳು ಬಂದಾಗ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಬಿಜೆಪಿಗಿಂತಲೂ ಕಾಂಗ್ರಸ್ ನಲ್ಲಿ ಹೆಚ್ಚಿನ ದೇವ ಭಕ್ತರಿದ್ದಾರೆ. ಅಂತೆಯೇ ಕಾಂಗ್ರೆಸ್ ಸರ್ಕಾರ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೂ ಒತ್ತು ಕೊಡುತ್ತಿದೆ.- ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವರು.16ಕೆಆರ್ ಎಂಎನ್ 11,12.ಜೆಪಿಜಿ
ಮಡಿಕೇರಿಯ ಸ್ತಬ್ಧ ಚಿತ್ರಗಳು ಮತ್ತು ಗ್ರಾಮ ದೇವರುಗಳ ಆಕರ್ಷಕ ಮೆರವಣಿಗೆ.