ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಂಬೇಡ್ಕರರು ಬುದ್ದಿವಂತಿಕೆಯಿಂದ ಸಂವಿಧಾನ ರಚಿಸಿದ್ದು, ಒಬ್ಬರಿಗೆ ಸಿಎಂ ಆಗಲು ಅವಕಾಶ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಬಹಳ ಜನ ಅಂಬೇಡ್ಕರ್ ಆಗಿದ್ದಾರೆ. ಅವಕಾಶ ಸಿಕ್ಕರೆ ಸಿಎಂ ಆಗ್ತಿನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಇನ್ನೊಂದೆಡೆ ಜಾರಕಿಹೊಳಿ ಕೂಡ ನಾನೇನು ಕಡಿಮೆ ಎನ್ನುತ್ತಿದ್ದಾರೆ. ಹೀಗೆ ಐದಾರು ಜನರು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.ಜಗದೀಶ್ ಶೆಟ್ಟರ ತಂದೆ ಜನಸಂಘದಲ್ಲಿ ಇದ್ದವರು. ಸೈದ್ಧಾಂತಿಕವಾಗಿ ಹಿಂದುತ್ವ, ರಾಷ್ಟ್ರವಾದಿಯಾಗಿದ್ದ ಶೆಟ್ಟರ ಯಕಃಶ್ಚಿತ ಟಿಕೆಟ್ ಸಿಗದೇ ಇದ್ದುದ್ದಕ್ಕೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದು, ಅವರ ತಂದೆಯವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.ಅವರು ಬಿಜೆಪಿಗೆ ಮತ್ತೆ ಬರಬೇಕೆನ್ನುವುದು ನನ್ನ ವೈಯಕ್ತಿಕ ಆಶಯ. ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಲೋಕಸಭೆ ಚುನಾವಣೆಗೆ ಸಜ್ಜಾಗುವಂತೆ ಪಕ್ಷ ನನ್ನ ಪುತ್ರ ಕಾಂತೇಶ್‌ಗೆ ಸೂಚನೆ ನೀಡಿದೆ. ಹಾಗಾಗಿ ಎಲ್ಲ ಕಡೆಗೂ ಓಡಾಡುತ್ತಿದ್ದಾನೆ.ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತಾನೆ. ಇಲ್ಲವೆಂದಾದಲ್ಲಿ ಪಕ್ಷ ಸಂಘಟಿಸುತ್ತಾನೆ ಎಂದರು.ಬಿಜೆಪಿಯು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಪರವಾಗಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ಹಿಂದುಳಿದ ವರ್ಗಗಳ ನಾಯಕರ ಅಭಿಪ್ರಾಯ ಪಡೆದಿದ್ದು, ಪರವಾಗಿ ನಿಲುವು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಜಾತಿ ಗಣತಿ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸುವ ಕುರಿತಾಗಿ ಸರ್ಕಾರದ ಸರ್ವ ಪಕ್ಷಗಳ ನಾಯಕರು, ಸ್ವಾಮೀಜಿಗಳು, ಸಮುದಾಯದ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದುವರಿಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಲಿಂಗರಾಜ ಅಂಗಡಿ, ರವಿ ನಾಯಕ ಇದ್ದರು.
ಕೇಂದ್ರವೇ ಸ್ಪಷ್ಟಪಡಿಸಲಿಯುವಕರು ಸಂಸತ್‌ನಲ್ಲಿ ಹೇಗೆ ನುಗ್ಗಿದರು ಎನ್ನುವುದನ್ನು ಕೇಂದ್ರ ಸರ್ಕಾರವೇ ತಿಳಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಧಾನಿ ಮೋದಿ ಸರ್ಕಾರಕ್ಕೆ ಹೆಚ್ಚಿನ ಬೆಂಬಲ ಸಿಗುತ್ತಿರುವುದಕ್ಕೆ ಕೆಲವೊಂದು ದುಷ್ಟ ಸಂಘಟನೆಗಳು ಹೀಗೆ ಮಾಡುತ್ತಿವೆ ಎಂದು ಆರೋಪಿಸಿದರು. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಎಂಪಿ ಪಾಸ್ ತೆಗೆದುಕೊಂಡು ಯುವಕ ಒಳನ್ನುಗ್ಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇದು ನಂಬಿಕೆ ಪ್ರಶ್ನೆ. ಕೂಲಂಕಷ ತನಿಖೆ ನಂತರ ಸತ್ಯ ಗೊತ್ತಾಗಲಿದೆ ಎಂದರು.