ಕಿಕ್ಕೇರಿ:
ಪಟ್ಟಣದ ಕೆಪಿಎಸ್ ಶಾಲಾ ಶಿಕ್ಷಣ ಸಮೂಹದಲ್ಲಿ ಜರುಗಿದ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ವಿವಿಧ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಸುಂದರವಾದ ಬೃಹತ್ ಸಂವಿಧಾನ ನೀಡಿದ ಡಾ. ಅಂಬೇಡ್ಕರ್ ಆಶಯದಂತೆ ಬದುಕುವುದನ್ನು ಕಲಿಯಬೇಕಿದೆ. ಸರ್ವರಿಗೂ ಸಮಪಾಲು, ಸಮಬಾಳು ಸಿಗುವಂತೆ ಬದುಕಬೇಕಿದೆ ಎಂದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ರಾಜಪ್ರಭುತ್ವದಲ್ಲಿ ಎಲ್ಲ ಪ್ರಾಂತ್ಯಗಳು ಹರಿದು ಹೋಗಿದ್ದವು. ಎಲ್ಲವನ್ನು ಒಗ್ಗೂಡಿಸಿ ಗಣತಂತ್ರ ರಾಷ್ಟ್ರವಾಗಿಸಿರುವ ಹಿರಿಯರ ಕೊಡುಗೆಯಿಂದ ನೆಮ್ಮದಿ ಬದುಕು ನಮ್ಮದಾಗಿದೆ ಎಂದರು.ಹೋಬಳಿಯಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಸಿಹಿ ಹಂಚಿ, ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ವಿವಿಧ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸ್ಮರಿಸಲಾಯಿತು.
ಎಸ್‌ಡಿಎಂಸಿ ಸದಸ್ಯ ದಿನೇಶ್‌ಬಾಬು, ಮುಖ್ಯಶಿಕ್ಷಕಿ ಮಮತಾ, ಭಾರತಿ, ನಂಜುಂಡಯ್ಯ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಎನ್‌ಸಿಸಿ ಘಟಕಾಧಿಕಾರಿ ಎಸ್.ಎಂ.ಬಸವರಾಜು, ರವೀಂದ್ರ, ಮಂಜುನಾಥ್, ನಾಗೇಶ್‌ಇದ್ದರು.ಇಂದು ಐತಿಹಾಸಿಕ ಪಟ್ಟಲದಮ್ಮ ಸಿಡಿಹಬ್ಬಕ್ಕೆ ಅಧಿಕೃತ ಚಾಲನೆಮಳವಳ್ಳಿ:
ಪಟ್ಟಣದ ದೊಡ್ಡಕರೆ ಸಮೀಪ ನೆಲೆಸಿರುವ ದಂಡಿನ ಮಾರಮ್ಮನ ಹಬ್ಬವು ಜ.27ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ಭಕ್ತಿ ಪ್ರಧಾನವಾಗಿ ಜರುಗುವ ಮೂಲಕ ಐತಿಹಾಸಿಕ ಪಟ್ಟಲದಮ್ಮ ಸಿಡಿಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ.ತಾಲೂಕಿನ ಸುತ್ತಲಮುತ್ತಲ ಸಾವಿರಾರು ಮಹಿಳೆಯರು ತಂಬಿಟ್ಟಿನ ಅರತಿಯೊಂದಿಗೆ ಕುಟುಂಬ ಸಮೇತ ಆಗಮಿಸಿ ಶಕ್ತಿ ದೇವತೆ ದಂಡಿನ ಮಾರಮ್ಮ ತಾಯಿಗೆ ಪೂಜೆ ಸಲ್ಲಿಸಲಿದ್ದಾರೆ. ಹಬ್ಬದ ವಿಶೇಷವಾಗಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಆಲಂಕರಿಸಲಾಗುತ್ತದೆ. ವಿದ್ಯುತ್ ದೀಪಾಲಾಂಕಾರ ಮಾಡಲಾಗಿದೆ. ದಂಡಿನ ಮಾರಮ್ಮ ದೇವಿಗೆ ಮುತ್ತಿನ ಮಣಿ ಹಾಗೂ ಹೂವಿನಿಂದ ಆಲಂಕೃತಗೊಳಿಸಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಪಟ್ಟಣದ ಗಂಗಾಮತ ಬೀದಿಯ ಪಟ್ಟಲದಮ್ಮ ದೇವಿಗೆ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿ ಮಧ್ಯಾಹ್ನದ ಸಮಯದಲ್ಲಿ ಪಟ್ಟಲದಮ್ಮ ದೇವಿಯ ರಥದ ಉತ್ಸವ ಮೂರ್ತಿಯನ್ನು ಪಟ್ಟಲದಮ್ಮ ದೇವಸ್ಥಾನದಿಂದ ತಮಟೆ ಹಾಗೂ ಮಂಗಳ ವಾಧ್ಯ ಸಮೇತ ದಂಡಿನಮಾರಮ್ಮ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತೆರಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.ದಂಡಿನ ಮಾರಮ್ಮ ಸೇವಾ ಟ್ರಸ್ಟ್‌ನಿಂದ ಹಬ್ಬದ ಯಶಸ್ವಿಗೆ ಹಲವು ತೀರ್ಮಾನ ಕೈಗೊಳ್ಳಲಾಗಿದೆ. ಬೆಳಗ್ಗೆಯಿಂದ ಸಂಜೆವರೆವಿಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಸರದಿಯಲ್ಲಿ ನಿಂತು ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೋಳಿ ಹಾಗೂ ಮರಿ ಅರಕೆ ತೀರಿಸಲು ಪ್ರತ್ಯೇಕ ಸ್ಥಳ ನಿಗಧಿಪಡಿಸಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಯಶ್ವಂತಕುಮಾರ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.