ಕನ್ನಡಪ್ರಭ ವಾರ್ತೆ ಮೈಸೂರು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಅಸಹಾಯಕತೆಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಉದಯಗಿರಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪಾರ್ಟ್ 2 ಉದಯಗಿರಿ ಘಟನೆ ಎಂದು ಆರೋಪಿಸಿದರು.
ಈ ಸರ್ಕಾರದಲ್ಲಿ ಅಧಿಕಾರಿಗಳು, ಜನ ಸಾಮಾನ್ಯರು, ಪೊಲೀಸರಿಗೂ ರಕ್ಷಣೆ ಇಲ್ಲ. ಈ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನಾವು ಯೋಚನೆ ಮಾಡಬೇಕು ಎಂದರು.ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಹಾಕೊಂಡಿದ್ದಾರೆ. ಮಾತೆತ್ತಿದರೆ ಎಸ್ಸಿ, ಎಸ್ಟಿ ಸಮುದಾಯದ ಜೊತೆ ಇದ್ದೇವೆ ಎನ್ನುತ್ತಾರೆ. ಈ ಸಮುದಾಯಗಳ ಜೊತೆ ಕಾಂಗ್ರೆಸ್ ನಿಂತಿದಿಯಾ ಎಂದು ಅರಿಯಬೇಕು.
ಅಧಿಕಾರಿಗಳ ತಪ್ಪಿನ ಹಿಂದೆ ಯಾರು ಇದ್ದಾರೆ?
ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತದ ಹಲ್ಲು ಕಿತ್ತು ಹಾಕಿದ್ದರು. ತಮ್ಮ ಹುಳುಕು ಮುಚ್ಚಿಕೊಳ್ಳಲು ಹಾಗೆಲ್ಲಾ ಮಾಡಿದರು. ರಾಜ್ಯದ ಸಿಎಂ ಎ1, ಅವರ ಪತ್ನಿ ಎ2, ಬಾಮೈದ ಎ3 ಆರೋಪಿ. ಲೋಕಾಯುಕ್ತರು ಸಿಎಂ ಕೈ ಕೆಳಗೆ ಇರೋದು. ಇನ್ನೇನು ನ್ಯಾಯ ಸಿಗತ್ತದೆ ಎಂದು ಅವರು ಕಿಡಿಕಾರಿದರು.
----
ಬಿಡದಿಯ ಕೇತುಗಾನಹಳ್ಳಿ ಜಮೀನು ವಿಚಾರವನ್ನು 10 ವರ್ಷದ ಹಿಂದೆಯಿಂದಲೇ ಪ್ರಾರಂಭ ಮಾಡಿದ್ದರು. ನಾವು ಯಾರಿಗೂ ಮೋಸ ಮಾಡಿ, ಅಕ್ರಮ ಎಸಗಿ ಜಮೀನು ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಅವರ ಹೆಸರಿನಲ್ಲಿ ಇರುವ ಒಂದೇ ಒಂದು ಆಸ್ತಿ ಅದು. ನನಗೂ ಕೃಷಿಕನಾಗಿ ಮುಂದುವರೆಬೇಕೆಂದು ಬುದ್ಧಿ ಹೇಳಿದ್ದಾರೆ. ನಾವ್ಯಾರು ಅಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿ ಬಾಡಿಗೆ ತೆಗೆದುಕೊಳ್ಳುತ್ತಿಲ್ಲ. ನಾವು ಅಲ್ಲಿ ಕೃಷಿ ಮಾಡುತ್ತಿದ್ದೇವೆ.