ಸಂವಿಧಾನದಲ್ಲಿದೆ ಶರಣರ ಆಶಯ: ಶಾಂತಲಿಂಗ ಶ್ರೀಗಳು

KannadaprabhaNewsNetwork |  
Published : Dec 08, 2025, 02:30 AM IST
(7ಎನ್.ಆರ್.ಡಿ1 ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಮಾತನಾಡಿದರು.)  | Kannada Prabha

ಸಾರಾಂಶ

ವರ್ಣ ವ್ಯವಸ್ಥೆ ಜಾರಿಯಲ್ಲಿದ್ದ ಕಾಲದಲ್ಲಿ ಜಾತಿಯತೆಯನ್ನು ಹೋಗಲಾಡಿಸಿ, ಜಾತ್ಯತೀತ ವ್ಯವಸ್ಥೆ ನಿರ್ಮಾಣ ಮಾಡಿದವರು ಬಸವಾದಿ ಶಿವಶರಣರು.

ನರಗುಂದ: ಸ್ವಾತಂತ್ರ್ಯ ನಂತರದ ಭಾರತದ ಸಂವಿಧಾನದಲ್ಲಿ ಇಂದಿಗೂ ಬಸವಾದಿ ಶರಣರ ವಚನಗಳ ಮೂಲ ಆಶಯಗಳಿಗೆ ಪೂರಕವಾದ ಕಾಯ್ದೆಗಳಿವೆ. ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್ ಆಗಿದ್ದಾರೆ. ಅವರು ಸಮ ಸಮಾಜ ನಿರ್ಮಾಣ ಮಾಡಲು ಅವರು ಸಾಕಷ್ಟು ಶ್ರಮಿಸಿದರು ಎಂದು ಶಾಂತಲಿಂಗ ಶ್ರೀಗಳು ತಿಳಿಸಿದರು.

ತಾಲೂಕಿನ ಶಿರೋಳ ಗ್ರಾಮದ ಮಾದಾರ ಚನ್ನಯ್ಯ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ 69ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ಣ ವ್ಯವಸ್ಥೆ ಜಾರಿಯಲ್ಲಿದ್ದ ಕಾಲದಲ್ಲಿ ಜಾತಿಯತೆಯನ್ನು ಹೋಗಲಾಡಿಸಿ, ಜಾತ್ಯತೀತ ವ್ಯವಸ್ಥೆ ನಿರ್ಮಾಣ ಮಾಡಿದವರು ಬಸವಾದಿ ಶಿವಶರಣರು ಎಂದರು.

ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿ, ಸ್ತ್ರೀಸಮಾನತೆ, ಸ್ತ್ರೀ ಶಿಕ್ಷಣದೊಂದಿಗೆ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂದು ಪ್ರತಿಪಾದಿಸಿದರು. ಬಲಿಷ್ಠ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿ ಪ್ರಜಾಪ್ರಭುತ್ವ ಬಲಪಡಿಸಿದರು. ಸರ್ ಸಿದ್ದಪ್ಪ ಕಂಬಳಿ ಅವರೊಂದಿಗಿನ ಉತ್ತಮ ಒಡನಾಟ ಹೊಂದಿದ ಅಂಬೇಡ್ಕರ್ ಅವರು ಬುದ್ಧ, ಬಸವೇಶ್ವರರ ತತ್ವಾದರ್ಶಗಳಿಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲಿ ಅಡಗಿಸಿ ಸಂಪ್ರದಾಯಕ್ಕಿಂತ ಸಂವಿಧಾನ ದೊಡ್ಡದು ಎಂದು ಸಾರಿದರು ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಂಕರ ಕುಪ್ಪಸ್ತ, ಗ್ರಾಪಂ ಅಧ್ಯಕ್ಷೆ ಹನುಮವ್ವ ಹಿರೇಮನಿ, ಶೇಖರಯ್ಯ ನಾಗಲೋಟಿಮಠ, ನಿವೃತ್ತ ಶಿಕ್ಷಕ ವಿ.ಕೆ. ಮರೆಗುದ್ದಿ, ಬಸಣ್ಣ ಕುಪ್ಪಸ್ತ, ಗೂಡುಸಾಬ ಯಲಿಗಾರ, ಬಸಣ್ಣ ಗಡ್ಡಿ, ಯಂಕಪ್ಪ ಶಾಂತಗೇರಿ, ಪ್ರಕಾಶಗೌಡ ತಿರಕನಗೌಡ್ರ, ಬಾಲು ಮೂಲಿಮನಿ, ಶ್ರೀಧರ ಬೇವಿನಕಟ್ಟಿ, ಸೋಮಶೇಖರಪ್ಪ ಗೊರವರ, ಪ್ರಭುಲಿಂಗ ಶಿರಯಣ್ಣವರ, ಭೂಪತಿರಾಜ ಧೋತರದ, ಪ್ರೀತಿ ಹಂಚಿನಮಠ, ಕಾಳಮ್ಮ ಕಮ್ಮಾರ, ಮಲ್ಲಪ್ಪ ಸಂಗಳದ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ, ಗಂಗಾಧರ ಫಾರಗೆ ಇದ್ದರು. ವೀರನಗೌಡ ಸ್ವಾಗತಿಸಿದರು. ಶ್ರೀಕಾಂತ ದೊಡಮನಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಬಸವರಾಜ ಸಾಲಿಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌