ಕನ್ನಡಪ್ರಭ ವಾರ್ತೆ ಜಮಖಂಡಿ
ಈ ವೇಳೆ ಮಾತನಾಡಿದ ಅವರು, ಸರ್ಕಾರ ದಿಂದ ನಡೆಯುವ ವಸತಿ ನಿಲಯಗಳ ವ್ಯವಸ್ಥೆ ಸುಧಾರಿಸಬೇಕು.ನಿಲಯದಲ್ಲಿರುವ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆದಿಲ್ಲ. ತಿಂಗಳಿಗೊಮ್ಮೆ ವಿತರಿಸಲಾಗುವ ಸ್ಯಾನಟರಿ ಪ್ಯಾಡ್‌ಗಳನ್ನು ಬಿಸಾಕಲು ಪ್ರತ್ಯೆಕ ಡಸ್ಟ್‌ಬಿನ್‌ಗಳಿಲ್ಲ. ತಿಂಗಳಿಗೊಮ್ಮೆ ಪಡಿತರ ವಿತರಿಸಲಾಗುತ್ತಿದ್ದು, ಆಹಾರ ಧಾನ್ಯಗಳಲ್ಲಿ ಹುಳು ಬಿದ್ದಿವೆ. ಒಂದು ರೋಮ್‌ನಲ್ಲಿ ಆರು ಜನ ವಿದ್ಯಾರ್ಥಿನಿಯರು ವಾಸಿಸುತ್ತಿದ್ದಾರೆ. ನಾಲ್ವರಿಗೆ ಮಾತ್ರ ಮಲಗುವ ಕಾಟ್ ವ್ಯವಸ್ಥೆ ಇದೆ. ಇನ್ನಿಬ್ಬರು ವಿದ್ಯಾರ್ಥಿನಿಯರು ನೆಲದ ಮೇಲೆ ಮಲುಗುವ ಅನಿವಾರ್ಯತೆ ಇದೆ. ಮಕ್ಕಳಿಗೆ ಯೋಗ, ವ್ಯಾಯಾಮ, ಪ್ರಾರ್ಥನೆ ಮಾಡಲು ಸ್ಥಳಾವಕಾಶವಿಲ್ಲ. ಹೀಗೆ ಹಲವಾರು ಸಮಸ್ಯೆಗಳು ವಸತಿ ನಿಲಯದಲ್ಲಿದ್ದು ಸರ್ಕಾರಕ್ಕೆ ಈ ಕುರಿತು ಪತ್ರ ಬರೆಯುವುದಾಗಿ ಶಾಸಕರು ತಿಳಿಸಿದರು.
ವಸತಿ ನಿಲಯದ ವಿಸ್ತರಣಾಧಿಕಾರಿ ಮಹೇಶ ನಾಯಕ ಮಾಹಿತಿ ನೀಡಿ, ನಿಲಯ ಬಾಡಿಗೆ ಕಟ್ಟಡದಲ್ಲಿದೆ. ಸರ್ಕಾರದ ನಿಯಮದಂತೆ ಪ್ರತಿ ವಿದ್ಯಾರ್ಥಿನಿಗೆ ತಿಂಗಳಿಗೆ ₹1850 ಖರ್ಚು ಮಾಡಲಾಗುತ್ತದೆ. ತಿಂಗಳಿಗೊಮ್ಮೆ ಶುಚಿತ್ವದ ಕಿಟ್, ಸ್ಯಾನೇಟರಿ ಪ್ಯಾಡ್ ವಿತರಿಸಲಾಗುತ್ತಿದೆ. ವಾರಕ್ಕೊಮ್ಮೆ ಮೊಟ್ಟೆ ತರಕಾರಿ ನೀಡಲಾಗುತ್ತಿದೆ. 9 ಶೌಚಾಲಯಗಳಿದ್ದು ಮಕ್ಕಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆ, ಯೋಗಾಭ್ಯಾಸ ಮುಂತಾದ ಕಾರ್ಯಗಳಿಗೆ ಸ್ಥಳಾವಕಾಶ ಇಲ್ಲವಾಗಿದೆ ಎಂದು ತಿದಳಿಸಿರು.ಮೇಲ್ಮಿಚಾರಕಿ ಭಾಗ್ಯಶ್ರೀ ಕದಂ ಮಾಹಿತಿ ನೀಡಿ ಪ್ರತಿದಿನ ನಿಲಯಕ್ಕೆ ಭೇಟಿ ನೀಡುತ್ತೇನೆ, ಮಕ್ಕಳಿಗೆ ಯಾವುದೇ ತೊಂದರೆಗಳಾದಾಗ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆ ಹರಿಸಲಾಗುತ್ತದೆ. ಬೆಳಗಿನ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ. ಊರುಗಳಿಗೆ ಹೋಗಬೇಕಾದರೆ ಪಾಲಕರ ಅನುಮತಿ ಅವಶ್ಯವಾಗಿರುತ್ತದೆ. 5 ಜನ ಸಿಬ್ಬಂದಿಯಿದ್ದು 4 ಜನ ಮಹಿಳಾ ಅಡಿಗೆಯವರು, ಒಬ್ಬರು ಮಹಿಳಾ ವಾಚ್‌ಮನ್ ಇದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಬಿಜೆಪಿ ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಡಾ.ವಿಜಯ ಲಕ್ಷ್ಮೀ ತುಂಗಳ ಮಾತನಾಡಿ, ಮಹಿಳೆಯರಿಗೆ ಅನೇಕ ಆರೋಗ್ಯದ ಸಮಸ್ಯೆಗಳಿರುತ್ತದೆ ಅದಕ್ಕಾಗಿ ಕೂಡಲೇ ಆರೋಗ್ಯ ತಪಾಸಣೆ ಮಹಿಳಾ ವೈದ್ಯರಿಂದ ಮಾಡಿಸಬೇಕು ಎಂದು ತಿಳಿಸಿದರು. ಮಹಿಳಾ ಮೊರ್ಚಾದ ಗೀತಾ ಸೂರ್ಯವಂಶಿ, ಕವಿತಾ ಲಗಳಿ, ತನಿಜಾ ದೊಡಮನಿ, ಭಾರತಿ ಜಾಧವ, ರೇಖಾ ವಡೆಯರ, ಹಾಗೂ ಬಿಜೆಪಿ ಮುಖಂಡರಾದ ಮಲ್ಲು ದಾನಗೌಡ, ಅಜಯ ಕಡಪಟ್ಟಿ, ಶ್ರೀಧರ ಕಂಬಿ ಮುಂತಾದವರಿದ್ದರು.