ಲಕ್ಷ್ಮೀನಾರಾಯಣಸ್ವಾಮಿ-ಆಂಜನೇಯಸ್ವಾಮಿ ಜೋಡಿ ರಥಗಳ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ನವೀಕರಣದ ಶುದ್ಧೀಕರಣ ಹಾಗೂ ನೂತನ ಜೋಡಿ ರಥಗಳ ಲೋಕಾರ್ಪಣೆಯ ಅಂಗವಾಗಿ ಉಭಯಸ್ವಾಮಿಗಳಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.
ದೇವರ ಮೇಲಿನ ಭಕ್ತಿಯಿಂದ ಸುಂದರವಾಗಿ ಮತ್ತು ಭಕ್ತಿಯಿಂದ ರಥಗಳನ್ನುನಿರ್ಮಿಸಿರುವಂಥ ರಥದಲ್ಲಿ ದೇವರನ್ನು ಕಾಣಬೇಕು. ಈ ಊರಿನ ಭಕ್ತರು ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳನ್ನು ಶಾಸ್ತ್ರೋಕ್ತವಾಗಿ ನವೀಕರಣಗೊಳಿಸಿರುವುದು ಪುರಾತನ ದೇಗುಲದಂತಿದೆ. ವೈಭವಿಯುತ ಜೋಡಿ ರಥಗಳನ್ನು ನಿರ್ಮಿಸಿ ದೇವರನ್ನು ಅತ್ಯಂತ ಎತ್ತರ ಸ್ಥಾನದಲ್ಲಿ ಕೂಡಿಸಿ ರಥೋತ್ಸವದಲ್ಲಿ ಜನರಿಗೆ ದರ್ಶನ ನೀಡುವ ಭಾಗ್ಯ ಒದಗಿಸಿದಂದಾಗಿದೆ ಎಂದರು.ನಂತರ ಶ್ರೀಗಳು ನೂತನ ಜೋಡಿ ರಥಗಳಲ್ಲಿ ಮೂಲ ರಾಮದೇವರು, ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚಾನೆ ಗೈದರು. ದೇವಸ್ಥಾನದಲ್ಲಿ ನಡೆದ ಹೋಮ ಹವಣಗಳಿಂದ ಆಹ್ವಾನಿತ ದೇವರನ್ನು ನೂತನ ಜೋಡಿ ರಥದಲ್ಲಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಿದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಚಿದ್ರಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಾಣಿಗಳಾದ ಶ್ಯಾಮರಾಜ ಸಿಂಗ್, ಜಯರಾಜ ಸಿಂಗ್ ಕುಟುಂದದವರು, ಕಿನ್ನಾಳದ ವೇದವಾಸ ಜೋಶಿ ಮತ್ತು ದೇವಸ್ಥಾನ ಅಭಿವೃದ್ದಿ ಸಮಿತಿ ಸದಸ್ಯರು, ಸ್ಥಳೀಯ ಮುಖಂಡರಿದ್ದರು.