ಮುದ್ದಂಡ ಕಪ್ : ಪಟ್ಟಮಾಡ, ಬೊಳೆಯಾಡಿರ, ಚಿಲ್ಲವಂಡ ತಂಡಕ್ಕೆ ಜಯ

KannadaprabhaNewsNetwork | Published : Apr 3, 2025 12:35 AM

ಸಾರಾಂಶ

ಬುಧವಾರ ನಡೆದ ಪಂದ್ಯದಲ್ಲಿ ಪಟ್ಟಮಾಡ, ಬೊಳೆಯಾಡಿರ, ಚಿಲ್ಲವಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಬುಧವಾರ ನಡೆದ ಪಂದ್ಯದಲ್ಲಿ ಪಟ್ಟಮಾಡ, ಬೊಳೆಯಾಡಿರ, ಚಿಲ್ಲವಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಪೊಂಜಂಡ ಮತ್ತು ಪಟ್ಟಮಾಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಪಟ್ಟಮಾಡ ತಂಡ ಗೆಲುವು ದಾಖಲಿಸಿತು.

ಮುದ್ದಿಯಡ ಮತ್ತು ಚಿಮ್ಮಣಮಾಡ ನಡುವಿನ ಪಂದ್ಯದಲ್ಲಿ ಮುದ್ದಿಯಡ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಬೊಳೆಯಾಡಿರ ಮತ್ತು ಪೆಮ್ಮುಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳೆಯಾಡಿರ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಕೊಂಡಿರ ಮತ್ತು ಪೇರಿಯಂಡ ನಡುವಿನ ಪಂದ್ಯದಲ್ಲಿ ಕೊಂಡಿರ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಟ್ಟಂಡ (ಕಾರ್ಮಾಡ್) ಮತ್ತು ಪಾರುವಂಗಡ ವಾಕ್‌ಓವರ್ ನಲ್ಲಿ ಕುಟ್ಟಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಚಿಲ್ಲವಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ಚಿಲ್ಲವಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.

ಕಂಜಿತಂಡ ಮತ್ತು ಪೊನ್ನಕಚ್ಚಿರ ನಡುವಿನ ಪಂದ್ಯದಲ್ಲಿ ಕಂಜಿತಂಡ 2-0 ಗೋಲು ಅಂತರದಲ್ಲಿ ಗೆಲುವು ಸಾಧಿಸಿತು. ಮೇವಡ ಮತ್ತು ಚಾರಿಮಂಡ ನಡುವಿನ ಪಂದ್ಯದಲ್ಲಿ ಮೇವಡ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ನಾಪನೆರವಂಡ ಮತ್ತು ನೆಲ್ಲಪಟ್ಟಿರ ನಡುವಿನ ಪಂದ್ಯದಲ್ಲಿ ನಾಪನೆರವಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕೊಲತಂಡ ಮತ್ತು ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಂಡ ತಂಡ 5-0 ಗೋಲು ಅಂತರದಿಂದ ಜಯ ಸಾಧಿಸಿತು. ಪಾಂಡಿರ ಮತ್ತು ಪೋರಂಗಡ ತಂಡದ ನಡುವಿನ ಪಂದ್ಯದಲ್ಲಿ ಪಾಂಡಿರ ತಂಡ ವಾಕ್ ಓವರ್‌ನಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಮಾಳೆಯಂಡ ಮತ್ತು ಬಲ್ಯಂಡ ತಂಡದ ನಡುವಿನ ಪಂದ್ಯದಲ್ಲಿ ಮಾಳೆಯಂಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಂಡಚಾಡಿರ ಮತ್ತು ಅಯ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮುಂಡಚಾಡಿರ ತಂಡ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಅಮ್ಮೆಕಂಡ ಮತ್ತು ಚೆಂಬಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೆಂಬಂಡ ಗೆಲುವು ದಾಖಲಿಸಿತು. ಬೊಟ್ಟಂಗಡ ಮತ್ತು ಉದ್ದಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಟ್ಟಂಗಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಚಿಂಡಮಾಡ ಮತ್ತು ಕೇಚೆಟ್ಟಿರ (ಬೆಂಗೂರು) ನಡುವಿನ ಪಂದ್ಯದಲ್ಲಿ ಚಿಂಡಮಾಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಅರಮಣಮಾಡ ಮತ್ತು ತಾತಿರ ವಾಕ್ ಓವರ್‌ನಲ್ಲಿ ಅರಮಣಮಾಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ತೇಲಪಂಡ ಮತ್ತು ತೀತಿರ ವಾಕ್ ಓವರ್‌ನಲ್ಲಿ ತೇಲಪಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಕಾಕಮಾಡ ಮತ್ತು ಕುಂಡ್ರಂಡ ವಾಕ್ ಓವರ್‌ನಲ್ಲಿ ಕುಂಡ್ರಂಡ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಕುಂಚೆಟ್ಟಿರ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

Share this article