ಮಹರ್ಷಿ ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಸ್ಫೂರ್ತಿ: ತಹಸೀಲ್ದಾರ್‌ ಬಿ.ವಿ. ಗಿರೀಶಬಾಬು

KannadaprabhaNewsNetwork |  
Published : Oct 27, 2026, 02:45 AM IST
ಹರಪನಹಳ್ಳಿಯ ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್‌ ಬಿ.ವಿ. ಗಿರೀಶಬಾಬು ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು, ಸತ್ಯ, ಧರ್ಮ ಹಾಗೂ ಆದರ್ಶ ಜೀವನಕ್ಕೆ ಮಾರ್ಗದರ್ಶನ ನೀಡುವ ಮಹಾನ್ ಗ್ರಂಥವಾಗಿದೆ.

ಹರಪನಹಳ್ಳಿ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸತ್ಯ, ಧರ್ಮ ಹಾಗೂ ಆದರ್ಶ ಜೀವನದ ಮಹತ್ವ ಸಾರಿದ್ದಾರೆ. ಅವರ ಆದರ್ಶ ಸಮಾಜಕ್ಕೆ ಇಂದಿಗೂ ಸ್ಫೂರ್ತಿ ಎಂದು ತಹಸೀಲ್ದಾರ್‌ ಬಿ.ವಿ. ಗಿರೀಶಬಾಬು ತಿಳಿಸಿದ್ದಾರೆ.

ನಗರದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು, ಸತ್ಯ, ಧರ್ಮ ಹಾಗೂ ಆದರ್ಶ ಜೀವನಕ್ಕೆ ಮಾರ್ಗದರ್ಶನ ನೀಡುವ ಮಹಾನ್ ಗ್ರಂಥವಾಗಿದೆ ಎಂದರು.

ತಾಪಂ ಕಾರ್ಯನಿರ್ವಾಹಕಾಧಿಕಾರಿ ವೈ.ಎಚ್. ಚಂದ್ರಶೇಖರ, ಪರಿಶಿಷ್ಟ ಪಂಗಡದ ತಾಲೂಕು ವಿಸ್ತರಣಾಧಿಕಾರಿ ಇಬ್ರಾಹಿಂ, ಬಿಸಿಎಂ ತಾಲೂಕು ವಿಸ್ತರಣಾಧಿಕಾರಿ ಕೊಳಚಿ ಭೀಮಪ್ಪ, ಎಇಇ ಮಂಜ್ಯಾನಾಯ್ಕ್, ನಗರಸಭೆ ಆರೋಗ್ಯಾಧಿಕಾರಿ ಶೋಭಾ, ಪಿಎಸ್‌ಐ ಮೀನಾಕ್ಷಿ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಕೆ. ಷಣ್ಮುಖಪ್ಪ, ಕಸಬಾ ಗ್ರಾಮ ಲೆಕ್ಕಿಗ ಚೌಡಪ್ಪ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎಂ.ಬಿ. ಅಂಜಿನಪ್ಪ, ಛಲವಾದಿ ಸಮಾಜದ ಅಧ್ಯಕ್ಷ ಗುಂಡಗತ್ತಿ ಕೊಟ್ರಪ್ಪ, ನಿಚ್ಚವನಹಳ್ಳಿ ಭೀಮಪ್ಪ, ವಾಲ್ಮೀಕಿ ಸಮಾಜದ ಮುಖಂಡ ಎಚ್.ಕೆ. ಹಾಲೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕಮ್ಮಾರ ಮಂಜುನಾಥ, ಚಿಕ್ಕೇರಿ ಬಸಪ್ಪ, ಗಿಡ್ಡಳ್ಳಿ ನಾಗರಾಜ್, ನೀಲಗುಂದ ವಾಗೀಶ್, ವಕೀಲ ಪ್ರಾಣೇಶ್, ರೇವಣಸಿದ್ಧಪ್ಪ, ಲಕ್ಷ್ಮಿ ಚಂದ್ರಶೇಖರ, ಮಂಡಕ್ಕಿ ಸುರೇಶ್, ಟಿ.ಬಿ. ರಾಜು, ಸಣ್ಣ ಅಜ್ಜಯ್ಯ ಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!