ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಜ್ಞಾನ, ತಪಸ್ಸು, ಕಾವ್ಯ, ಮತ್ತು ಮಾನವೀಯ ಮೌಲ್ಯಗಳಿಗೆ ಅತ್ಯುನ್ನತ ಸ್ಥಾನವಿದೆ. ಈ ಪರಂಪರೆಯ ಬೇರುಗಳನ್ನು ಆಳವಾಗಿ ಬಿತ್ತಿದ ಮಹಾನ್ ಋಷಿಗಳಲ್ಲಿ ವಾಲ್ಮೀಕಿ ಅಗ್ರಗಣ್ಯರು ಎಂದು ಬಣ್ಣಿಸಿದರು.
ವಾಲ್ಮೀಕಿ ರಚಿಸಿದ ರಾಮಾಯಣದ ಪ್ರತಿಯೊಂದು ಶ್ಲೋಕವು ಮನುಕುಲಕ್ಕೆ ಸನ್ಮಾರ್ಗವನ್ನು ತೋರಿಸುವ ದೀವಿಗೆ ಯಾಗಿದೆ. ಅವರ ಜೀವನ ಚರಿತ್ರೆ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನೂ ಸದಾಸ್ಮರಣೀಯ ಮತ್ತು ಪ್ರೇರಣದಾಯಕವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಮಾತನಾಡಿ, ವಾಲ್ಮೀಕಿ ಮಹರ್ಷಿಯವರ ಸಾಹಿತ್ಯ ಮತ್ತು ಸಂಸ್ಕೃತಿ ಅನನ್ಯ ರತ್ನವಾಗಿದೆ. ತ್ರೇತಾ ಯುಗದಲ್ಲಿ ರಾಮಾಯಣ ಮಹಾಕಾವ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಅವರ ಮೌಲ್ಯಗಳಿಂದ ಜೀವನದಲ್ಲಿ ನಾವು ಹೇಗೆ ಬದುಕು ನಡೆಸಬೇಕು ಎನ್ನುವುದನ್ನು ವಾಲ್ಮೀಕಿ ಅವರು ತಮ್ಮ ಕಾವ್ಯಗಳ ಮೂಲಕ ಪ್ರಚುರ ಪಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೈ.ಸಿ. ಮನುಜಶ್ರೀ, ನಗರಸಭೆ ಪೌರಾಯುಕ್ತೆ ಎಸ್. ಎನ್. ರಾಧಿಕಾ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅರುಣ್ ಕುಮಾರ್, ಕೃಷಿ ಅಧಿಕಾರಿ ಪರಮೇಶ್, ಸಿಪಿಐ ನವೀನ್, ದಲಿತ ಮುಖಂಡ ಆತಗೂರು ವೆಂಕಟಾಚಲಯ್ಯ, ಸನ್ಮಾನ ಸಮಿತಿ ಅಧ್ಯಕ್ಷ ಡಾ.ಬಿ. ಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.