ರಟ್ಟೀಹಳ್ಳಿ:ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಮಾನ್ಯತೆ ಪಡೆದಿದೆ. ಅದರ ಅಡಿಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯ ನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವದ ಭದ್ರ ಪೀಠಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು. ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದ ಆವರಣದಲ್ಲಿ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ನೀಡುತ್ತಿದೆ. ಇತ್ತೀಚೆಗೆ ಪ್ರಜಾಸೌಧ ನಿರ್ಮಾಣಕ್ಕೆ ₹ 8.65 ಕೋಟಿ, 24/7 ಶುದ್ಧ ಕುಡಿಯುವ ನೀರಿನ ಯೋಜನೆ, ತಾಲೂಕಿಗೆ 2 ಕೆಪಿಎಸ್‌ಸಿ ಶಾಲೆ, ಗ್ರಾಮೀಣ ಭಾಗಕ್ಕೆ 3 ಪ್ರೌಢಶಾಲೆ, ದ್ವಿ ಭಾಷಾ ನೀತಿಯಲ್ಲಿ 15 ಶಾಲೆಗಳಲ್ಲಿ ಕನ್ನಡದ ಜತೆ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಕಲಿಸುವಂತ ಕಾರ್ಯವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸರಕಾರದ ಸವಲತ್ತುಗಳನ್ನು ಪಡೆದು ಉತ್ತಮ ನಾಗರಿಕರಾಗಿ ಬಾಳಿ ಎಂದು ಮನವಿ ಮಾಡಿದರು.
ಧ್ವಜಾರೋಹಣ ನೆರವೇರಿಸಿದ ಸಹಸೀಲ್ದಾರ್ ಶ್ವೇತಾ ಅಮರಾವತಿ ಮಾತನಾಡಿ, ದೇಶದಲ್ಲಿ ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿ ಆಡಳಿತ ವ್ಯವಸ್ಥೆ ನಡೆಸಲಾಗುತ್ತಿದೆ ಎಂದರು.ವಿಶ್ವದಲ್ಲೇ ಅತೀ ದೊಡ್ಡ ಲಿಖಿತ ಸಂವಿಧಾನ ರಚನೆಯಾಗಿದ್ದು, ಭಾರತೀಯರಾದ ನಾವು ಸಂವಿಧಾನದ ಆಶಯಗಳನ್ನು ಅರಿತು ದೇಶದ ಪ್ರಗತಿಗೆ ಶ್ರಮಿಸೋಣ ಎಂದರು. ತಾಲೂಕು ಪಂಚಾಯತ್ ಇಓ ಎನ್. ರವಿಕುಮಾರ, ವೃತ್ತ ನಿರೀಕ್ಷಕ ಮಂಜುನಾಥ ಮಂಡಿತ್, ಪಿಎಸ್‌ಐ ರಮೇಶ ಪಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್., ಅಕ್ಷರ ದಾಸೋಹ ಅಧಿಕಾರಿ ಎಚ್.ಎಚ್. ಜಾಡರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಆರ್. ತೆವರಿ, ಸಿಡಿಪಿಓ ಗೀತಾ ಬಾಳಿಕಾಯಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ಸರ್ಫರಾಜ ಮಾಸೂರ, ಮಕ್ಬೂಲ್ ಮುಲ್ಲಾ, ಹರಶದ್‍ಬಾನು ಗೋಡಿಹಾಳ, ಲಲಿತಾ ಚನ್ನಗೌಡ್ರ, ಮಲ್ಲಮ್ಮ ಕಟ್ಟೆಕಾರ್, ಹಿರೇಕೆರೂರ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಹನಮಂತಗೌಡ ಭರಮಣ್ಣನವರ, ಎಸ್.ಡಿಎಂಸಿ ಅಧ್ಯಕ್ಷ ಮಂಜು ಅಸ್ವಾಲಿ, ರಮೇಶ ತಳವಾರ ಮುಂತಾದವರು ಇದ್ದರು. ನ್ಯಾಯಾಲಯದ ಆವರಣ: ಪಟ್ಟಣದ ಸಂಚಾರಿ ದಿವಾಣಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ಅಂಗವಾಗಿ ನ್ಯಾಯಾಧೀಶೆ ನಾಗರತ್ನಮ್ಮ ಧ್ವಜಾರೋಹಣ ನೆರವೇರಿಸಿದರು.ವಕೀಲರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಎಂ.ಬಿ. ಜೋಕನಾಳ, ಸರಕಾರಿ ಅಭಿಯೋಜಕ ಕೆಂಚಪ್ಪ ಬಿದರಿ, ಬಿ.ಸಿ. ಪಾಟೀಲ್, ವಿ.ಆರ್. ದ್ರೌಪಕ್ಕಳವರ, ಪಿಡಿ ಬಸನಗೌಡ್ರ, ಫಕೀರೇಶ ತುಮ್ಮಿನಕಟ್ಟಿ, ವಿ.ಎನ್. ಮಡಿವಾಳರ, ಪ್ರಕಾಶ ಬಾರ್ಕಿ, ಎಚ್ ಐ. ಮೂಲಿಮಲಿ ಇದ್ದರು.ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜ್: ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಚಪ್ಪರದಳ್ಳಿ ಗ್ರಾಮದ 103 ವರ್ಷದ ಶತಾಯುಷಿ ಬಸಮ್ಮ ಮಳಗಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಶಾಲೆಯ ಮೆಟ್ಟಿಲನ್ನು ಹತ್ತದ ನನ್ನನ್ನು ಪ್ರತಿಷ್ಠಿತ ಕಾಲೇಜ್ ಸಂಸ್ಥೆಯವರು ನನ್ನನ್ನು ಕರೆಸಿ ಧ್ವಜಾರೋಹಣ ನೆರವೇರಿಸಲು ಅನುವು ಮಾಡಿಕೊಟ್ಟಿದ್ದು ನನ್ನ ಜೀವಿತಾವಧಿಯ ಅತ್ಯಂತ ಹೆಮ್ಮೆಯ ದಿನ ಎಂದು ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಅಧ್ಯಕ್ಷ ಡಿ.ಎಂ. ಸಾಲಿ, ಯು.ಎಂ. ಸಾಲಿ, ಅಶೋಕ ಹೆಡಿಯಾಲ, ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಜಗದೀಶ ಮಾಳಗಿ, ಡಾ. ಎಚ್.ಬಿ. ಕೆಂಚಳ್ಳಿ, ಸಿ.ಎಸ್. ಕಮ್ಮಾರ, ಬಿ.ಸಿ. ತಿಮ್ಮೇನಹಳ್ಳಿ, ಶಾಂತಮ್ಮ ಎಚ್., ಡಾ. ವೈ.ವೈ ಮರಳಿಹಳ್ಳಿ, ಸಿ.ಆರ್. ಹಿತ್ತಲಮನಿ, ರವಿ ಲಕ್ಕೋಳ್ಳಿ, ರಮೇಶ ಕಮತಳ್ಳಿ, ರೋಜಾ ಗುತ್ಯಾಲರ, ಯಲ್ಲಪ್ಪ ಸುರಗಿಹಳ್ಳಿ, ಸಿ.ಎನ್. ಸೊರಟೂರ ಇದ್ದರು.