ದೇಶಕ್ಕೆ ಮಾಡಿದ ಅನ್ಯಾಯ ಮರೆಯಬಾರದು

KannadaprabhaNewsNetwork |  
Published : Jun 29, 2025, 01:32 AM IST
ಸಿಕೆಬಿ-2  ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿನಡೆದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 5ಂ ವರ್ಷ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು  | Kannada Prabha

ಸಾರಾಂಶ

ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ, ಜನರ ಹಕ್ಕುಗಳನ್ನು ದಮನ ಮಾಡಿ ಆಡಳಿತ ನಡೆಸಿದ ಇಂದಿರಾ ಗಾಂಧಿರವರು 1975ರ ಜೂನ್ 25ರ ಮದ್ಯರಾತ್ರಿ ಯಂದು ತುರ್ತು ಪರಿಸ್ಥಿತಿ ಹೇರಿದ್ದು, ಸಂವಿಧಾನವನ್ನು ಕಗ್ಗೊಲೆ ಮಾಡಿದ ದಿನವಾಗಿದೆ. ಇಂದಿರಾ ಗಾಂಧಿರವರು ಸಂವಿಧಾನಕ್ಕೆ ಬೀಗ ಹಾಕಿ, ರಾಷ್ಟ್ರವನ್ನು ಕತ್ತಲೆಗೆ ದೂಡಿ ಸರ್ವಾಧಿಕಾರಿ ಆಡಳಿತ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜಕಾರಣವೇ ಆಗಲಿ, ಸಾಮಾನ್ಯ ಜೀವನವೇ ಆಗಲಿ ಯಾರಾದರೂ ಅನ್ಯಾಯ ಮಾಡಿದರೆ ಕ್ಷಮಿಸಬಹುದು. ಆದರೆ ದೇಶಕ್ಕೆ ಮಾಡಿದ ಘನಘೋರ ಅನ್ಯಾಯವನ್ನು ಯಾರೂ ಮರೆಯಬಾರದು. ಅದನ್ನು ನಮ್ಮ ಮುಂದಿನ ಪೀಳಿಗೆಗೂ ತಿಳಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಶನಿವಾರ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 5ಂ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಕಗ್ಗೊಲೆ ಮಾಡಿದ ದಿನ

ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ, ಜನರ ಹಕ್ಕುಗಳನ್ನು ದಮನ ಮಾಡಿ ಆಡಳಿತ ನಡೆಸಿದ ಇಂದಿರಾ ಗಾಂಧಿರವರು 1975ರ ಜೂನ್ 25ರ ಮದ್ಯರಾತ್ರಿ ಯಂದು ತುರ್ತು ಪರಿಸ್ಥಿತಿ ಹೇರಿದ್ದು, ಸಂವಿಧಾನವನ್ನು ಕಗ್ಗೊಲೆ ಮಾಡಿದ ದಿನವಾಗಿದೆ. ಇಂದಿರಾ ಗಾಂಧಿರವರು ಸಂವಿಧಾನಕ್ಕೆ ಬೀಗ ಹಾಕಿ, ರಾಷ್ಟ್ರವನ್ನು ಕತ್ತಲೆಗೆ ದೂಡಿ ಸರ್ವಾಧಿಕಾರಿ ಆಡಳಿತ ನಡೆಸಿದ್ದರು. ಹೀಗಿರುವಾಗ ಕಾಂಗ್ರೆಸ್‌ ನಾಯಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಆ ಸಮಯದಲ್ಲಿ ಹಣಕಾಸಿನ ಮುಗ್ಗಟ್ಟು ಇರಲಿಲ್ಲ, ರಾಜ್ಯ- ರಾಜ್ಯಗಳ ನಡುವೆ ಯಾವುದೇ ವ್ಯಾಜ್ಯವೂ ಇರಲಿಲ್ಲ. ಯುದ್ದ ಪರಿಸ್ಥಿತಿ ಅಥವಾ ಬಾಹ್ಯ ಆಕ್ರಮಣವೂ ಇರಲಿಲ್ಲ. ಆದರೂ ಇಂದಿರಾರವರು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ತುರ್ತು ಪರಿಸ್ಥಿತಿ ಹೇರಿದರು. ಇಂದಿಗೂ ಕಾಂಗ್ರೆಸ್ ನಾಯಕರು ಸರ್ವಾಧಿಕಾರ ಮನಸ್ಥಿತಿಯಿಂದ ಹೊರ ಬಂದಿಲ್ಲ ಎಂದರು.

ಕಾಂಗ್ರೆಸ್‌ ಕ್ಷಮೆ ಯಾಚಿಸಲಿ

1971ರಲ್ಲಿ ನಡೆದ ಚುನಾವಣೆಯಲ್ಲಿ ರಾಯಬರೇಲಿಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲಹಾಬಾದ್ ನ್ಯಾಯಾಲಯ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ತಡೆ ನೀಡಿತು. ಆದರೂ ಸಹ ಜೂ. 25ರಂದು ತಡರಾತ್ರಿ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಆಲಿ ಅಹ್ಮದ್ ಅವರು ಮಲಗಿದ್ದರೆ ಅವರನ್ನು ನಿದ್ದೆಯಿಂದ ಎಬ್ಬಿಸಿದ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಆದೇಶಕ್ಕೆ ಅವರ ಅಂಕಿತ ಹಾಕಿಸಿ ದೇಶಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಎಂದು ತಿಳಿಸಿದರು. ಸಂವಿಧಾನದ ರಕ್ಷಕರಂತೆ ವರ್ತಿಸುತ್ತಿರುವ ಕಾಂಗ್ರೆಸಿಗರು ಇಂದಿರಾಗಾಂಧಿ ಮಾಡಿದ ತಪ್ಪಿಗೆ ಇದುವರೆಗೂ ಕ್ಷಮೆಯಾಚನೆ ಮಾಡಲ್ಲ ಎಂದರು.

ಕರಾಳ ಅಧ್ಯಾಯ ಮರೆಯಬೇಡಿ

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ತುರ್ತು ಪರಿಸ್ಥಿತಿಯನ್ನು ನಾವು ಮರೆತರೆ ಆ ಕರಾಳ ಅಧ್ಯಾಯ ಮತ್ತೊಮ್ಮೆ ಪುನರಾವರ್ತನೆಯಾಗುವ ಅಪಾಯವಿದೆ. ಕಾಂಗ್ರೆಸ್‌ನ ಅಂದಿನ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಆ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯೂ ಇಲ್ಲ, ಆದ್ದರಿಂದ ನಾವೆಲ್ಲರೂ ಜಾಗೃತರಾಗಿದ್ದರೆ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಹಾಗೂ ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಪಿ.ಎನ್.ಕೇಶವರೆಡ್ಡಿ, ಕೆ.ವಿ.ನಾಗರಾಜ್, ವೇಣುಗೋಪಾಲ್, ಡಾ.ಶಶಿಧರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ