ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಈಗಾಗಲೇ ಸಿಬಿಐ ತನಿಖೆಗಾಗಿ ಬರೋಬ್ಬರಿ ಕೋಟ್ಯಂತರ ರು.ಗಳಿಗೂ ಹೆಚ್ಚು ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದೆ. ಈಗ ಮತ್ತೆ ಮರುತನಿಖೆಗಾಗಿ ಹೊಸ ಎಸ್‌ಐಟಿ ರಚಿಸಿರುವುದರಿಂದ ಯಾವುದೇ ಹೊಸ ಸತ್ಯ ಹೊರಬರುವುದಿಲ್ಲ. ಇದು ಕೇವಲ ಸಾರ್ವಜನಿಕರ ಹಣದ ಮತ್ತೊಂದು ಪೋಲು ಎಂದೂ ಅವರು ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗಾಗಿ ರಚಿಸುವ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ಈ ಹಿಂದೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಸೇರಿಸಬಾರದು. ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲು:
ಸೌಜನ್ಯ ಹತ್ಯೆ ಘಟನೆ ನಡೆದು 14 ವರ್ಷಗಳೇ ಕಳೆದರೂ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ವರ್ಗದ ಜನ ಮಠ ಮಾನ್ಯಗಳು, ದೇವಸ್ಥಾನಗಳು, ಹಿಂದೂ ಗುರುಗಳನ್ನು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಮಹಾ ಅಭಿಯಾನ ನಡೆಸುತ್ತಿದ್ದಾರೆ. ಅವುಗಳ ಘನತೆಗೆ ಧಕ್ಕೆ ತರುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣ ನಡೆದ ಕೆಲ ವಾರಗಳಲ್ಲಿ ಸೌಜನ್ಯ ಅವರ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ ಹಾಗೂ ಮಾವ ವಿಠಲ್ ಗೌಡ ನಡೆಸಿದ್ದ ಸುದ್ದಿಗೋಷ್ಠಿಯ ವಿಡಿಯೋವನ್ನು ಪ್ರದರ್ಶಿಸಿದ ಅಮೃತೇಶ ಅವರು, ಧರ್ಮಸ್ಥಳದ ಅಧಿಕಾರಿಗಳಾಗಲಿ, ಆ ಕ್ಷೇತ್ರದವರಾಗಲಿ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಲು ಬಂದಿಲ್ಲ ಎಂದು ಕುಟುಂಬಸ್ಥರು ಅಂದು ಸ್ಪಷ್ಟಪಡಿಸಿದ್ದರು. ಆದರೆ, ಇಂದು ಅದೇ ಕುಟುಂಬಸ್ಥರನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್‌ನನ್ನು ಪೊಲೀಸರು ಬಲವಂತವಾಗಿ ಹಿಡಿದು ತಂದಿರಲಿಲ್ಲ. ಬದಲಾಗಿ, ಸೌಜನ್ಯಳ ಮಾವ ವಿಠಲ್ ಗೌಡ ಹಾಗೂ ಅವರ ಗುಂಪೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅಮೃತೇಶ್ ಹೊರಹಾಕಿದರು. ಸಿಬಿಐ ವಿಚಾರಣೆ ಎದುರಿಸಿದ ಬಳಿಕ ಸಂತೋಷ್ ರಾವ್ ದೋಷಮುಕ್ತನಾಗಿ ಹೊರಬಂದಿದ್ದಾನೆ.
ಘಟನೆ ನಡೆದ 20-25 ದಿನಗಳ ನಂತರ ಬೆಳ್ತಂಗಡಿಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ ಹಾಗೂ ಸೋದರ ಮಾವ ವಿಠಲ್ ಗೌಡ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ಕುಟುಂಬಸ್ಥರು ಸ್ವತಃ ಧರ್ಮಸ್ಥಳದ ಪರವಾಗಿ ಮಾತನಾಡಿದ್ದರು. ಧರ್ಮಸ್ಥಳದ ಅಧಿಕಾರಿಗಳಾಗಲಿ, ಆ ಕ್ಷೇತ್ರದವರಾಗಲಿ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಲು ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಅವರು ನಮ್ಮ ಯಾವುದೇ ಆಸ್ತಿ ಕಬಳಿಸಲು ಬಂದಿಲ್ಲ ಮತ್ತು ನಮಗೆ ಅವರಿಂದ ಯಾವುದೇ ಬೆದರಿಕೆ ಇಲ್ಲ ಎಂಬ ಸತ್ಯವನ್ನು ಅಂದು ಸೌಜನ್ಯಳ ತಾಯಿ ಹಾಗೂ ಮಾವ ವಿಠಲ್ ಗೌಡ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಆದರೆ, ಇಂದು ಅದೇ ಕುಟುಂಬಸ್ಥರನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಮೃತೇಶ್ ದೂರಿದರು.