ಕುಂಟುತ್ತಿರುವ ‘ಜಲ ಜೀವನ್‌’ ಯೋಜನೆ

KannadaprabhaNewsNetwork |  
Published : Sep 21, 2025, 02:00 AM IST
19ಕೆಜಿಎಫ್‌1 | Kannada Prabha

ಸಾರಾಂಶ

ತಾಲೂಕುಗಳಲ್ಲಿ ‘ಜಲ್ ಜೀವನ್ ಮಿಷನ್ ಅಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಹಲವೆಡೆ ಬಳಸಿರುವ ಪೈಪ್, ನಳದ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಪೈಪ್‌ಗಳನ್ನು ನಿಗದಿತ ಆಳದಲ್ಲಿ ಹಾಕದೇ ಇರುವುದರಿಂದ ದೊಡ್ಡ ವಾಹನ ಚಲಿಸಿದರೆ ಪೈಪ್ ನೆಲದಲ್ಲೇ ಅಪ್ಪಚ್ಚಿ ಆಗುವ ಆತಂಕವೂ ಇದೆ. ಜತೆಗೆ ಪೈಪಿನ ಗಾತ್ರವೂ ಕಿರಿದಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಹೇಳಿಕೊಳ್ಳಲು ಬಹುದೊಡ್ಡ ಹೆಸರು. ಉದ್ದೇಶಗಳೂ ಅಷ್ಟೇ ಮಹತ್ವಾಕ್ಷಾಂಕ್ಷೆಯಿಂದ ಕೂಡಿವೆ. ಆದರೆ, ಪ್ರಗತಿ ಮತ್ತು ಕಾರ್ಯಗತದ ವಿಚಾರಕ್ಕೆ ಬಂದರೆ, ಇದುವರೆಗೆ ತಾಲೂಕಿನಲ್ಲಿ ೨೮ ಗ್ರಾಮಗಳಲ್ಲಿ ಮಾತ್ರ ನಲ್ಲಿಗಳಲ್ಲಿ ನೀರನ್ನು ಕೊಡಲಾಗಿದೆ, ೧೭೦ ಗ್ರಾಮಗಳ ಕಾಮಗಾರಿಗಳು ಪ್ರಗತಿಯಲ್ಲಿರುವುದಾಗಿ ಪಿಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದು ಅದಷ್ಟು ಬೇಗ ಕಾಮಗಾರಿಗಳನ್ನುಪೂರ್ಣಗೊಳಿಸಿ ಎಂದು ಶಾಸಕಿ ರೂಪಕಲಾಶಶಿಧರ್ ಸೂಚಿಸಿದರು.

ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಲ್‌ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಕೇಂದ್ರ ಮತ್ತು ರಾಜ್ಯದ ಸರಕಾರದ ಶೇ.೫೦ - 50 ಅನುಪಾತದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಕಳಪೆ ಕಾಮಗಾರಿ ಆರೋಪ ತಾಲೂಕುಗಳಲ್ಲಿ ‘ಜಲ್ ಜೀವನ್ ಮಿಷನ್ ಅಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಹಲವೆಡೆ ಬಳಸಿರುವ ಪೈಪ್, ನಳದ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಪೈಪ್‌ಗಳನ್ನು ನಿಗದಿತ ಆಳದಲ್ಲಿ ಹಾಕದೇ ಇರುವುದರಿಂದ ದೊಡ್ಡ ವಾಹನ ಚಲಿಸಿದರೆ ಪೈಪ್ ನೆಲದಲ್ಲೇ ಅಪ್ಪಚ್ಚಿ ಆಗುವ ಆತಂಕವೂ ಇದೆ. ಜತೆಗೆ ಪೈಪಿನ ಗಾತ್ರವೂ ಕಿರಿದಾಗಿದೆ ಎಂಬ ಆರೋಪಗಳೂ ಇವೆ ಎಂದರು.

ಎರಡು ವರ್ಷಳಿಂದ ಕಾಮಗಾರಿ ಮಾಡುತ್ತಲೇ ಇದ್ದಾರೆ. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಜತೆಗೆ, ಕೆಲಸದಲ್ಲೂ ಸಾಕಷ್ಟು ಲೋಪಗಳಿವೆ ಎನಿಸುತ್ತಿದೆ. ಹಾಕಿರುವ ಪೈಪ್ ಗುಣಮಟ್ಟದ ಬಗ್ಗೆಯೂ ಅನುಮಾನಗಳಿವೆ. ಪ್ರತಿ ಮನೆಗೆ ೫೫ ಲೀಟರ್ ನೀರು ಪೂರೈಸಲು ನೀರಿನ ಮೀಟರ್ ಅಳವಡಿಸಲಾಗುವುದು, ಮೀಟರ್ ಅಳವಡಿಸಿರುವುದು ನೀರಿನ ಅಳತೆ ತಿಳಿಯವುದಕಷ್ಟೇ ಹೊರತು ಕುಡಿವ ನೀರಿಗೆ ಕರವನ್ನು ವಿಧಿಸುವುದಕ್ಕಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು. ಮನೆ ಮನೆಗೆ ನಲ್ಲಿ ಅಳವಡಿಸಿಲು ರಸ್ತೆಗಳನ್ನು ಅಗೆಯಲಾಗಿದೆ, ಒಂದು ತಿಂಗಳ ಒಳಗೆ ರಸ್ತೆಗಳ ದುರಸ್ತಿ ಮಾಡಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಇಒ ವೆಂಕಟೇಶಪ್ಪ, ಇಇ ಎನ್.ರಘು, ಎಇಇ, ಪ್ರಸಾದ್ ಎಇ.ಶೈಲಜಾ ಹಾಗೂ ೧೫ ಗ್ರಾಮ ಪಂ, ಪಿಡಿಓಗಳು, ಗುತ್ತಿಗೆದಾರರು ಸಭೆಯಲ್ಲಿ ಬಾಗವಹಸಿದ್ದರು.

..

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌