- ಮಠದಲ್ಲಿ ನೆರವೇರಿದ ಪೂಜೆ, ಧಾರ್ಮಿಕ ವಿಧಿವಧಾನ
ತಾಲೂಕಿನ ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರ ಮಠದ ಲಿಂಗೈಕ್ಯ ಶ್ರೀ ರುದ್ರಮುನಿ ಮಹಾಶಿವಯೋಗಿಗಳ 98ನೇ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಸಂಭ್ರಮದಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಹಲವಿ ಮಠದ ಶ್ರೀಗಳು ಧ್ವಜಾರೋಹಣ ನೆರವೇರಿಸಿ ಧರ್ಮ ಸಂದೇಶ ನೀಡಿದರು. ಬಳಿಕ ಗ್ರಾಮದಲ್ಲಿ ನಡೆದ ಶ್ರೀಗಳ ಪಲ್ಲಕ್ಕಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕಳಶಗಳ ಹಿಡಿದು ಪಾಲ್ಗೊಂಡರು. ಕೋಲು ಕುಣಿತ, ನಂದಿಕೋಲು ಕುಣಿತ ಸಹಿತ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.ವಾದ್ಯಮೇಳಗಳ ನಾದ, ಭಕ್ತರ ಜಯಘೋಷ ಹಾಗೂ ಜಾನಪದ ಕಲಾವಿದರ ಪ್ರದರ್ಶನಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಪಲ್ಲಕ್ಕಿ ಮೆರವಣಿಗೆ ಜಾತ್ರಾ ಮಹೋತ್ಸವಕ್ಕೆ ವಿಶೇಷ ಕಳೆ ತಂದಿತು. ಮೆರವಣಿಗೆಯ ಬಳಿಕ ಶ್ರೀ ರುದ್ರಮುನೀಶ್ವರ ಮಠದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಮಠದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸ ಲಾಗಿತ್ತು. ಭಕ್ತರು ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭ ನೂರಾರು ಜಂಗಮರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಸಂಜೆ ಅದ್ಧೂರಿಯಾಗಿ ಉಚ್ಛಾಯ ನಡೆಯಿತು. ಸಾವಿರಾರು ಭಕ್ತರು ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಶ್ರೀ ರುದ್ರಮುನೀಶ್ವರರ ಆಶೀರ್ವಾದ ಪಡೆದರು.
15ಕೆಪಿಎಂಎನ್ವಿ01: