ವಾಸ್ತವಿಕ ನೆಲೆಗಟ್ಟಿನ ಮೇಲೆ ಈ ನೆಲದ ನ್ಯಾಯ ಅನುಸರಿಸಬೇಕುಃ ಕೆ.ಟಿ.ಗಂಗಾಧರ್

KannadaprabhaNewsNetwork |  
Published : Jun 05, 2025, 02:12 AM IST
ನೊಂದ 22 ಜನ ಶ್ರೀಗಂಧ ಬೆಳೆಗಾರರ ಪರವಾಗಿ ಅನಿರ್ಧಿಷ್ಠಾವಧಿ ಪ್ರತಿಭಟನೆ | Kannada Prabha

ಸಾರಾಂಶ

ತರೀಕೆರೆ, ವಾಸ್ತವಿಕ ನೆಲಗಟ್ಟಿನ ಮೇಲೆ ಈ ನೆಲದ ನ್ಯಾಯ ಅನುಸರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ.ಗಂಗಾಧರ್ ಹೇಳಿದ್ದಾರೆ.

ನೊಂದ 22 ಜನ ಶ್ರೀಗಂಧ ಬೆಳೆಗಾರರ ಪರವಾಗಿ ಅನಿರ್ಧಿಷ್ಠಾವಧಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ವಾಸ್ತವಿಕ ನೆಲಗಟ್ಟಿನ ಮೇಲೆ ಈ ನೆಲದ ನ್ಯಾಯ ಅನುಸರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ.ಗಂಗಾಧರ್ ಹೇಳಿದ್ದಾರೆ.

ಬುಧವಾರ ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್ ಮತ್ತಿತರರು ಪಟ್ಟಣದ ಸಮೀಪದ ಹಳಿಯೂರು ಗಂಧದಗುಡಿ-2 ರಾಷ್ಟ್ರೀಯ ಹೆದ್ದಾರಿ ಬೈಪಾಸ್ 206 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನ್ಯಾಯಕ್ಕೊಳಗಾದ ನೊಂದ 22 ಜನ ಶ್ರೀಗಂಧ ಬೆಳೆಗಾರರ ಪರವಾಗಿ ನಡೆದ ಅನಿರ್ಧಿಷ್ಠಾವಧಿ ಪ್ರತಿಭಟನೆಯಲ್ಲಿ ಮಾತನಾಡಿದರು.

2013ನೇ ಇಸವಿ ಭೂ ಸ್ವಾಧೀನ ಕಾಯಿದೆ ಅನುಸರಿಸಬೇಕು. ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ದೇಶದ ಉದ್ದಗಲಕ್ಕೆ ಅಗುತ್ತಿದೆ. ಪ್ರಗತಿಯ ಒಂದು ಹೆಜ್ಜೆ, ಅಭಿವೃದ್ಧಿಗೆ ಕೈಜೋಡಿಸಬೇಕಾದುದು ನಮ್ಮ ಕರ್ತವ್ಯ. ಭೂಸ್ವಾದೀನ ಕ್ರಿಯೆ ಎಲ್ಲ ಕಡೆ ನಡೆಯುತ್ತಿದೆ, ಶ್ರೀಗಂಧ ಬೆಳೆಗಾರರ ಮತ್ತು ರೈತರ ಪರಿಸ್ಥಿತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅರ್ಥ ಮಾಡಿ ಕೊಂಡು ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮಾತನಾಡಿ 20 ವರ್ಷಗಳಿಂದ ನಾನು ಶ್ರೀಗಂಧ ಬೆಳೆಯನ್ನು ಬಹಳ ಕಷ್ಟಪಟ್ಟು ಬೆಳೆಸಿದ್ದೇನೆ. ಶ್ರೀಗಂಧ ಬೆಳೆ ಕುರಿತು ನಾನು ಅನೇಕ ಕಡೆ ವಿವರವಾದ ಮಾಹಿತಿ ಕೊಟ್ಟಿದ್ದೇನೆ. ಹಳಿಯೂರು ಗಂದದ ಗುಡಿ-2ರಲ್ಲಿ 22 ಜನ ರೈತರು ಶ್ರೀಗಂಧವನ್ನು ಬೆಳೆದಿದ್ದಾರೆ. ರಾಷ್ಚ್ರೀಯ ಹೆದ್ದಾರಿ 206ರಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಶ್ರೀಗಂಧ ಬೆಳೆಗೆ ಕೇವಲ ₹420 ರು.ಪರಿಹಾರ ಘೋಷಿಸಿದೆ, ಶ್ರೀಗಂಧ ಬೆಳೆಗಾರರಿಗೆ ನ್ಯಾಯಯುತವಾದ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು. ಸೂಕ್ತ ಪರಿಹಾರ ಕೊಡುವವರೆಗೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ನಮ್ಮ ಕರ್ನಾಟಕ ಜನನೈನ್ಯ ರಾಜ್ಯಾಧ್ಯಕ್ಷ ನರಸಿಂಹಯ್ಯ ಬಿ.ಮಾತನಾಡಿ ಶ್ರೀಗಂಧ ಕರ್ನಾಟಕದ ಅಸ್ತಿ, ಬಹಳ ಹಿಂದಿ ನಿಂದಲೂ ಶ್ರೀಗಂಧ ಬೆಳೆಯಲಾಗುತ್ತಿದೆ ಎಂದರು.ಪುರಸಭಾ ಸದಸ್ಯ ಕುಮಾರಪ್ಪ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಾಧ್ಯಕ್ಷ ಎಂ. ಓಂಕಾರಪ್ಪ, ಮಾಜಿ ಪುರಸಭಾಧ್ಯಕ್ಷೆ ಗಿರಿಜಮ್ಮ, ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.--4ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಹಳಿಯೂರು ಗಂಧದಗುಡಿ-2 ರಲ್ಲಿ ನಡೆದ ಅನಿರ್ಧಿಷ್ಠಾವಧಿ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ.ಗಂಗಾಧರ್, ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಾಧ್ಯಕ್ಷ ಎಂ. ಓಂಕಾರಪ್ಪ, ಪುರಸಭೆ ಸದಸ್ಯ ಕುಮಾರಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ