- ಜಗಳೂರಿನ ವಾಲ್ಮೀಕಿ ಭವನದಲ್ಲಿ ಡಿ.ದೇವರಾಜ ಅರಸು ಜನ್ಮದಿನಾಚರಣೆ - - -
ಕನ್ನಡಪ್ರಭ ವಾರ್ತೆ ಜಗಳೂರುಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ತಮ್ಮ ಆಡಳಿತ ಸಂದರ್ಭದಲ್ಲಿ ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಕೊಂಡು ಜಾರಿಗೊಳಿಸಿದ ಯೋಜನೆಗಳು ಇಂದಿಗೂ ಫಲ ನೀಡುತ್ತಿವೆ. ಅವರ ಯೋಜನೆಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಭಿವೃದ್ಧಿ, ಸಮಸಮಾಜದ ದ್ಯೋತಕವಾಗಿವೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಬುಧವಾರ ಡಿ.ದೇವರಾಜ ಅರಸು 110ನೇ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ವಿಶೇಷ ಉಪನ್ಯಾಸ ನೀಡಿ, 1915, ಆ.20ರಂದು ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಜನಿಸಿದ ಡಿ.ದೇವರಾಜ ಅರಸು ಮೈಸೂರು ಸಾಮ್ರಾಜ್ಯದ ಗಣ್ಯರಾದ ಶ್ರೀಮಂತ ಅರಸು ಸಮುದಾಯಕ್ಕೆ ಸೇರಿದವರು. ಒಡೆಯರ ರಾಜ ಮನೆತನಕ್ಕೆ ದೂರದ ಸಂಬಂಧಿ ಆಗಿದ್ದವರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದು, ಮಹಾರಾಜ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿ.ಎ. ಪದವಿ ಪಡೆದಿದ್ದರು. ವಲಸೆ ಕಾರ್ಮಿಕರಿಗೆ ಆಶ್ರಯ ಕಟ್ಟಡಗಳ ನಿರ್ಮಾಣ, ಸಾಲಮನ್ನಾ, ವಿದ್ಯಾರ್ಥಿಳಿಗೆ ಶಿಕ್ಷಣ, ವಿದ್ಯಾರ್ಥಿ ವೇತನ, ಉಳುವವನೆ ಭೂಮಿಯ ಒಡೆಯ ಹೀಗೆ ಹಿಂದುಳಿದ ವರ್ಗದ ಜನರಿಗಾಗಿ ಸಾಕಷ್ಟು ಜನಪರ ಯೋಜನೆಗಳು ಜಾರಿಗೊಳಿಸಿದ್ದರು ಎಂದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ ಮಾತನಾಡಿದರು. ತಾಪಂ ಇಒ ಕೆಂಚಪ್ಪ, ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿದರು. ಪಪಂ ಅಧ್ಯಕ್ಷ ಕೆ.ಎಸ್. ನವೀನಕುಮಾರ್, ಪ.ಪಂ. ಚೀಫ್ ಆಫೀಸರ್ ಸಿ.ಲೋಕಾನಾಯ್ಕ್, ಸಿಡಿಪಿಒ ಬೀರೇಂದ್ರಕುಮಾರ್, ಬಿಸಿಎಂ ಇಲಾಖೆಯ ವಾರ್ಡನ್ ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಅಶೋಕ, ಬಿಸಿಎಂ ಅಧಿಕಾರಿ ಆಸ್ಮಾ ಬಾನು, ಸಮಾಜ ಕಲ್ಯಾಣ ಇಲಾಖೆ ಎಸ್ಟಿ ಅಧಿಕಾರಿ ಮಂಜುನಾಥ್, ಅರಣ್ಯ ಇಲಾಖೆ ಆರ್‌ಎಫ್ಒ ಮಹೇಶ್ವರಪ್ಪ, ಉಪನ್ಯಾಸಕ ಕೊಟ್ರೇಶ್, ಎಸ್ಎಡಿಎಚ್ ಪ್ರಭುಶಂಕರ್, ತಮಲೇಹಳ್ಳಿ ಮಾರುತಿ, ಬಸವರಾಜು ಮತ್ತಿತರರು ಇದ್ದರು.
- - --20ಜೆಎಲ್ಆರ್1:
ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನವನ್ನು ತಹಸೀಲ್ದಾರ್ ಸಯೀದ್ ಕಲೀಂ ಉಲ್ಲಾ ಉದ್ಘಾಟಿಸಿದರು.