ಕನ್ನಡಪ್ರಭ ವಾರ್ತೆ ನರಗುಂದ
ಗುರುವಾರ ಪಟ್ಟಣದ ಐಟಿಐ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿನ ಪ್ರತಿ ನಾಗರಿಕರಿಗೂ ಕಾನೂನು ಸಮಾನವಾಗಿದೆ. ಬಡತನ, ಅನಕ್ಷರತೆ, ಜಾತಿ ಆಧಾರದ ಮೇಲೆ ಅನ್ಯಾಯಕ್ಕೆ ಒಳಗಾಗಬಾರದು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಬಡವರು, ಮಹಿಳೆಯರು, ಮಕ್ಕಳಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಹಿರಿಯ ನಾಗರಿಕರಿಗೆ ದೇಶದ ಪ್ರತಿಯೊಂದು ನ್ಯಾಯಾಲಯದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ತೆರೆದಿದೆ. ಪ್ರತಿಯೊಬ್ಬರು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಉಚಿತ ಕಾನೂನು ಸಲಹೆಯನ್ನು ನ್ಯಾಯಾಲಯದ ಆವರಣದಲ್ಲಿ ವಾರದಲ್ಲಿ ಒಂದು ದಿನ ತಹಶೀಲ್ದಾರ ಕಚೇರಿ, ತಿಂಗಳಿನ ಎರಡು ದಿನದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು. ಇದಕ್ಕೆ ಯಾವುದೇ ಹಣ ಪಾವತಿ ಮಾಡುವಂತಿಲ್ಲ. ವಾರ್ಷಿಕ ಆದಾಯ ₹2 ಲಕ್ಷ 50 ಸಾವಿರಕ್ಕಿಂತ ಕಡಿಮೆ ಇರುವಂತವರು ತಮ್ಮ ಪ್ರಕರಣದ ಸಲುವಾಗಿ ನ್ಯಾಯವಾದಿಗಳ ಫೀಯನ್ನು ಕೊಡದೇ ನಮ್ಮ ಕಾನೂನು ಸೇವೆಗಳ ಪ್ರಾಧಿಕಾರದವರು ಉಚಿತವಾಗಿ ನ್ಯಾಯವಾದಿಗಳನ್ನು ನೇಮಕ ಮಾಡಿ ಸರ್ಕಾರವೇ ನ್ಯಾಯವಾದಿಗಳ ಫೀಯನ್ನು ಭರಣ ಮಾಡುತ್ತದೆ ಎಂದರು.
ನ್ಯಾಯವಾದಿ ಆರ್.ಟಿ. ಪಾಟೀಲ ಬಾಲ್ಯ ವಿವಾಹ, ಬಾಲಕಾರ್ಮಿಕ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು.