ಶಾಸಕಾಂಗ, ಕಾರ್ಯಾಂಗ ಸರ್ಕಾರದ ಎರಡು ಕೈಗಳಿದ್ದಂತೆ: ಸವದಿ

KannadaprabhaNewsNetwork |  
Published : Aug 09, 2026, 02:30 AM IST
ತಾಲೂಕಾಡಳಿತ ಸೌಧದಲ್ಲಿ ಸಚಿವ ಸವದಿ ಅಧಿಕಾರಿಗಳ ಸಭೆನಡೆಸಿದರು. | Kannada Prabha

ಸಾರಾಂಶ

ಶಾಸಕಾಂಗ ಮತ್ತು ಕಾರ್ಯಾಂಗಗಳು ಸರ್ಕಾರದ ಎರಡು ಕೈಗಳಿದ್ದಂತೆ, ಶಾಸಕಾಂಗ ಮತ್ತು ಕಾರ್ಯಾಂಗ ಕೂಡಿ ಕೆಲಸ ಮಾಡಿದರೇ ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ, ಅವರ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.

ತಾಲೂಕಾಡಳಿತ ಸೌಧದಲ್ಲಿ ಅತಿವೃಷ್ಟಿ-ಅನಾವೃಷ್ಟಿಯ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ ಹಳಿಯಾಳ

ಶಾಸಕಾಂಗ ಮತ್ತು ಕಾರ್ಯಾಂಗಗಳು ಸರ್ಕಾರದ ಎರಡು ಕೈಗಳಿದ್ದಂತೆ, ಶಾಸಕಾಂಗ ಮತ್ತು ಕಾರ್ಯಾಂಗ ಕೂಡಿ ಕೆಲಸ ಮಾಡಿದರೇ ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ, ಅವರ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಶುಕ್ರವಾರ ಸಂಜೆ ಬರಪರಿಸ್ಥಿತಿ ಅಧ್ಯಯನ ಮಾಡಲು ಹಳಿಯಾಳ ತಾಲೂಕಿಗೆ ಆಗಮಿಸಿದ ಅವರು ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಅತಿವೃಷ್ಟಿ-ಅನಾವೃಷ್ಟಿಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎರಡೂ ದಿನಗಳಿಂದ ನಾನು ಜಿಲ್ಲೆಯಲ್ಲಿ ಬರ ಅಧ್ಯಯನದ ಭೇಟಿಯನ್ನು ಆರಂಭಿಸಿದ್ದು, ಹಳಿಯಾಳದಲ್ಲಿ ಈ ಅಧ್ಯಯನದ ಭೇಟಿಯು ಕೊನೆಗೊಳ್ಳಲಿದೆ. ಈ ಭೇಟಿಯ ಸಂದರ್ಭ ಜಿಲ್ಲೆಯ ಎಲ್ಲಾ ಆಡಳಿತ ವರ್ಗ ಹಾಗೂ ಶಾಸಕರು ನನ್ನೊಂದಿಗೆ ಪ್ರವಾಸ ಮಾಡಿ ಜಿಲ್ಲೆಯ ಹಾಗೂ ತಮ್ಮ ಕ್ಷೇತ್ರದ ನೈಜ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಭೇಟಿಯ ಸಮಯದಲ್ಲಿ ಅವಲೋಕಿಸಿದ ಮಾಹಿತಿಯನ್ನು ಮುಖ್ಯಮಂತ್ರಿಗೆ ತಿಳಿಸುತ್ತೇನೆ ಎಂದರು. ಮುಂದುವರೆದು ಮಾತನಾಡಿದ ಅವರು ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ಪ್ರಜಾಸೇವೆ ಅಭಿಯಾನದ ಬಗ್ಗೆ ವಿವರಿಸಿದರು.

ಹಳಿಯಾಳ ತಾಲೂಕಿನ ಕೃಷಿ ಪರಿಸ್ಥಿತಿಯ ಅವಲೋಕನ ಸಮಯದಲ್ಲಿ ಕಬ್ಬಿನ ಬೆಳೆಯಲ್ಲಿ ಕಂಡು ಬರುತ್ತಿರುವ ರೋಗದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕೃಷಿ ತಜ್ಞರು ಅಥವಾ ಕಬ್ಬು ಸಂಶೋಧನಾ ಪರಿಣತರ ಅಧ್ಯಯನ ತಂಡವನ್ನು ಹಳಿಯಾಳಕ್ಕೆ ಕರೆಯಿಸಿ ಈ ಬೆಳೆಗೆ ತಾಗಿರುವ ರೋಗಬಾಧೆಯ ಪರಿಶೀಲನೆ ನಡೆಸಿ, ತಂಡವು ನೀಡಿದ ಪರಿಶೀಲನಾ ವರದಿಯನ್ನು ಆಧರಿಸಿಕೊಂಡು ರೋಗನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕಾಳಿನದಿ ನೀರಾವರಿ ಯೋಜನೆಯ ಮಾಹಿತಿಯನ್ನು ಪಡೆದ ಸಚಿವರು, ಆದಷ್ಟು ಬೇಗನೆ ಯೋಜನೆ ಕಾರ್ಯಾರಂಭಿಸಬೇಕು, ಈಗಾಗಲೇ ತಾಲೂಕಿನ ರೈತ ಸಮುದಾಯವು ಯೋಜನೆಯ ವಿಳಂಬವಾಗುತ್ತಿರುವುದರ ಕುರಿತು ಮನವಿ ನೀಡಿದೆ ಎಂದರು.

ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸಚಿವ ಸವದಿ ಅನುಭವಿ ರಾಜಕಾರಣಿಯಾಗಿದ್ದು, ಅವರಿಗೆ ಸಂಘಟನೆ ಮತ್ತು ಆಡಳಿತ ಚೆನ್ನಾಗಿ ಗೊತ್ತಿದೆ. ಅವರ ಅನುಭವದ ಲಾಭವು ರಾಜ್ಯಕ್ಕೂ ಹಾಗೂ ಜಿಲ್ಲೆಗೂ ಲಭಿಸಲಿ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಸವದಿ, ನನ್ನ ಹಾಗೂ ದೇಶಪಾಂಡೆಯವರ ರಾಜಕೀಯ ಬಾಂಧವ್ಯವು 35 ವರ್ಷಕ್ಕಿಂತ ಹಳೆಯದು. ಆರಂಭದಲ್ಲಿ ಒಂದೇ ಪಕ್ಷದಲ್ಲಿದ್ದ ನಾವುಗಳು ಕಾರಣಾಂತರಗಳಿಂದ ಬೇರೆ ಬೇರೆ ಪಕ್ಷ ಸೇರ್ಪಡೆಯಾಗಿದ್ದೆವು, ಈಗ ಮತ್ತೇ ಒಂದೇ ಪಕ್ಷದಲ್ಲಿ ಜೊತೆಗೂಡಿದ್ದೆವೆ. ಯಾವತ್ತೂ ನಾನು ಅವರನ್ನು ಗುರುವಿನ ಸ್ಥಾನದಲ್ಲಿ ನೋಡಿದ್ದು, ಈಗಲೂ ಅವರ ಮಾರ್ಗದರ್ಶನ, ಆಶೀರ್ವಾದ ಬಯಸುತ್ತೇನೆ ಎಂದರು.

ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಶ್ ಶಶಿ, ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಮೂರು ತಾಲೂಕಿನ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ನಾಡು-ನುಡಿ ನಮ್ಮ ಅಸ್ಮಿತೆಯ ಪ್ರತೀಕ: ಬಿ.ಎನ್. ವಾಸರೆ
ಭಾರತ ಸೇವಾದಳದಿಂದ ಉತ್ತಮ ನಾಗರಿಕರ ಸೃಷ್ಟಿ: ಎಂ.ಬಿ. ಪೈ