ಕನ್ನಡಪ್ರಭ ವಾರ್ತೆ ಇಂಡಿ
ನಗರದ ಸರ್ವಜ್ಞ ವೃತ್ತದಲ್ಲಿ ಹಮ್ಮಿಕೊಂಡ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಕಷ್ಟ ಹಾಗೂ ದೌರ್ಜನ್ಯಗಳಲ್ಲಿ ಮಿಂದೆದ್ದವರಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಓರ್ವರು ಸರ್ವಜ್ಞ, ಅವರು ಸಮಾಜದಲ್ಲಿ ಮಾಡಿದ ಕ್ರಾಂತಿ ಎಲ್ಲರಿಗೂ ಆದರ್ಶ ಪ್ರಾಯವಾದುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ದೇವೇಂದ್ರ ಕುಂಬಾರ ಮಾತನಾಡಿ, ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆಯನ್ನು ತೊಡೆದು ಹಾಕುವಲ್ಲಿ ಕವಿ ಸರ್ವಜ್ಞರ ಪಾತ್ರ ಮಹತ್ತರವಾದುದು ಎಂದರು. 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ.ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.ಕುಂಬಾರ ಸಮಾಜದ ಅಧ್ಯಕ್ಷ ಸತೀಶ ಕುಂಬಾರ ಮಾತನಾಡಿ, ಕನ್ನಡದ ತ್ರಿಪದಿ ಕವಿ ಸರ್ವಜ್ಞನವರ ವೈಚಾರಿಕ ಅರಿವು, ಸಾಮಾಜಿಕ ಪ್ರಜ್ಞೆ ಅರ್ಥಪೂರ್ಣವಾಗಿದೆ. ಸಮ ಸಮಾಜ ಕಟ್ಟುವುದಕ್ಕಾಗಿ ಸರ್ವಜ್ಞ ಗ್ರಹಿಸಿದ ಸಾಮಾಜಿಕ ಕಳಕಳಿಯಿಂದಾಗಿ ಮಾರ್ಮಿಕವಾದ ತ್ರಿಪದಿ ರಚನೆ ಸಾಧ್ಯವಾಗಿದ್ದು, ಮೂರು ಸಾಲಿನ ಸುಂದರ ಸಾಲು ಸಾರ್ವಕಾಲಿಕ ಸತ್ಯ ಎನಿಸುತ್ತವೆ. ಸಮಾಜದಲ್ಲಿ ಜಾತಿಯತೆ, ಮೌಢ್ಯ, ಕಂದಾಚಾರ, ಅಸಮಾನತೆ ಎಂಬ ಅನಿಷ್ಟ ಪದ್ದತಿ ಮನೆ ಮಾಡಿದ್ದವು. ಅಂತಹ ವಿಷಮ ಪರಿಸ್ಥಿತಿಯಲ್ಲಿ ಜನಿಸಿದ ಬಂದ ಸರ್ವಜ್ಞ ಸಮಾನತೆ ಸಮಾಜ ಕಟ್ಟಬಯಸಿ ಬಂಡಾಯದ ದನಿಯಾದರು ಎಂದರು.