ಆನಂದಪುರ: ಇಡೀ ಸಮಾಜಕ್ಕೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ಕೊಟ್ಟಿರುವಂತಹ ಧರ್ಮವೆಂದರೆ ವೀರಶೈವ ಲಿಂಗಾಯತ ಧರ್ಮ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿ ಹೇಳಿದರು.
1904ರಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ಆರಂಭಗೊಂಡಿದ್ದು. ವೀರಶೈವ ಲಿಂಗಾಯತ ಧರ್ಮ ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಕೊಟ್ಟಂತಹ ಧರ್ಮವಾಗಿದೆ. ಸಮಾನತೆಯ ಕನಸನ್ನು ಕಂಡ ಬಸವಣ್ಣನವರ ಪರಂಪರೆಯ ವೀರಶೈವ ಲಿಂಗಾಯಿತ ಮಹಾಸಭಾ, ಸಮಾಜದ ಸೌಹಾರ್ದ ಹಾಗೂ ಕಾಯಕ ನಿಷ್ಠೆಯನ್ನು ಪ್ರತಿಪಾದಿಸುತ್ತದೆ ಎಂದರು.
ನಾವು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿದಾಗ ಮಾತ್ರ ನಮ್ಮ ಧರ್ಮ ಉಳಿಯಲು ಸಾಧ್ಯ. ಮುಂದಿನ ಯುವ ಪೀಳಿಗೆಗೆ ವಚನ ಸಾಹಿತ್ಯದ ಬಗ್ಗೆ ಹೇಳಬೇಕು. ಅಣ್ಣ ಬಸವಣ್ಣ ಅಲ್ಲಮಪ್ರಭು ಅನುಭವ ಮಂಟಪದ ಮೂಲಕ ವಚನಗಳನ್ನು ಸಮಾಜದಲ್ಲಿ ಬಿತ್ತಿದರು. ಶರಣರು ಸಾರಿದ ಜೀವನ ನಮ್ಮೆಲ್ಲರಿಗೂ ಮಾದರಿ ಎಂದರು.ಜಾತ್ರಾ ಮಹೋತ್ಸವಗಳಲ್ಲಿ ಭಕ್ತರು ಭಗವಂತನ ಆರಾಧನೆಯನ್ನು ಮಾಡುವುದರಿಂದ ಸಕಲವೂ ಸಿದ್ಧಿಯಾಗಲಿದೆ ಎಂದರು.ಶಿಕ್ಷಕ ಬಿ.ಎಸ್ ಯೋಗರಾಜಪ್ಪ ಉಪನ್ಯಾಸ ನೀಡಿ, ಬಸವಾದಿ ಶರಣರು ವೀರಶೈವ ಲಿಂಗಾಯತ ಸಮಾಜಕ್ಕೆ ನೀಡಿದಂಥ ಕೊಡುಗೆ ಅಪಾರವಾದದ್ದು, ಬಸವಣ್ಣನವರ ಆದರ್ಶ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಗುತ್ತಲದ ಪ್ರಭು ಸ್ವಾಮಿ, ಹಾಲಸ್ವಾಮಿ ಗೌಡ್ರು, ಶಾಂತಪ್ಪ ಗೌಡ್ರು, ಗಂಗಾಧರಪ್ಪ, ರಾಜು.ಕೆ, ಪ್ರವೀಣ್ ಕುಮಾರ್, ಶಿವಪ್ಪ ಗೌಡ್ರು, ಪ್ರಮೀಳಾ , ಪ್ರವೀಣ್ ಇತರರಿದ್ದರು.