ಲಕ್ಷ್ಮೇಶ್ವರ: ಕತ್ತಲೆ ಕಳೆದು ಬೆಳಕು ನೀಡುವುದು ದೀಪದ ಗುಣ. ಮನಷ್ಯನು ತನ್ನ ಜ್ಞಾನ ಹಾಗೂ ನಡತೆಯಿಂದ ಇತರರಿಗೆ ಬೆಳಕು ನೀಡುವ ಕಾರ್ಯ ಮಾಡಬೇಕು ಎಂದು ಹಾಲಸ್ವಾಮಿ ಮಠ ಸಂಕದಾಳ ಸದ್ಗುರು ಶಿವಯೋಗಿ ವಾಗೀಶ ಪಂಡಿತಾರಾಧ್ಯ ಹಾಲಶಿವಯೋಗಿಗಳು ತಿಳಿಸಿದರು.
ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವೆಂದರು.
ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ ಒತ್ತಡ ಎಲ್ಲರಿಗೂ ಇರುತ್ತದೆ. ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ ಸಂಪನ್ನತೆ, ಧ್ಯಾನ ಇವುಗಳನ್ನು ಆಳವಡಿಸಿಕೊಂಡು ಬಾಳಿದರೆ ಸುಖ, ಶಾಂತಿ, ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ ಎಂದರು.ಮನುಷ್ಯ ಆಸೆ ಕಳೆದುಕೊಂಡು ಬದುಕಬಹುದು, ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಕಷ್ಟಕಾಲದಲ್ಲಿ ಕೈಬಿಡದೇ ಕಾಪಾಡುವವರನ್ನು ಕಷ್ಟಕ್ಕೆ ದೂಡಿದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಂದು ಚಿಕ್ಕ ಪಯಣಕ್ಕೂ ಒಂದು ಮಾರ್ಗಸೂಚಿ ಇರುವಂತೆ ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ ಎಂದರು.
ಗದಗ: ಭಾವಸಾರ ಕ್ಷತ್ರೀಯ ಸಮಾಜದಿಂದ ಸಂತ ಜ್ಞಾನೇಶ್ವರ ಮಹಾರಾಜರ 729ನೇ ಸಂಜೀವಿನಿ ಸಮಾಧಿ ನಿಮಿತ್ಯ ದಿಂಡಿ ಸೋಹಳಾ ಉತ್ಸವದ ಅಂಗವಾಗಿ ನ. 18ರಂದು ವಿವಿಧ ಕಾರ್ಯಕ್ರಮಗಳು ನಗರದ ಜವಳಿ ಬಜಾರದ ವಿಠ್ಠಲ ಮಂದಿರದಲ್ಲಿ ಜರುಗಲಿವೆ.ನ. 18ರಂದು ಬೆಳಗ್ಗೆ 4ರಿಂದ 6ರ ವರೆಗೆ ಕಾಕಡಾರತಿ, ಮಧ್ಯಾಹ್ನ 12ರಿಂದ 1ರ ವರೆಗೆ ಪ್ರಭಾಕರ(ದಾದಾ) ಬೋಧಲೆ ಮಹಾರಾಜರಿಂದ ಕಾಲಾ ಕೀರ್ತನೆ ಜರುಗುವುದು. ನಂತರ ಆರತಿ ಮಹಾಪ್ರಸಾದ ನಡೆಯಲಿದೆ. ಸಂಜೆ 7ರಿಂದ 9ರ ವರೆಗೆ ದಿಂಡಿಯು ನಗರ ಪ್ರದಕ್ಷಿಣೆ ಸಂಚರಿಸಿ ದೇವಸ್ಥಾನಕ್ಕೆ ಮರಳಿದ ನಂತರ ಆರತಿ ಮಹಾಪ್ರಸಾದ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.