ಸಾಧಕರ ಜೀವನವೇ ನಮಗೆ ಆದರ್ಶಪ್ರಾಯ

KannadaprabhaNewsNetwork |  
Published : Sep 17, 2026, 02:00 AM IST
ಮಧುಗಿರಿ ತಾಲೂಕು ನೇರಳೆಕೆರೆಯಲ್ಲಿ   ಶ್ರೀವೀರಬಾಲಮ್ಮ ದೇವಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ್ ಶ್ರೀನಾಗರ ಪೂಜೆ ,,ಶ್ರೀವಿರಬಾಲಮ್ಮ ದೇವಿ ಉತ್ಸವ  ಸನ್ಮಾನ ಕಾರ್ಯಕ್ರಮವನ್ನು ಚಿನ್ನೇನಹಳ್ಳಿ ಶ್ರೀಬಸವಲಿಂಗಮೂರ್ತಿ ಶರಣರು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಮಾಜ ಸೇವೆ ಮನುಷ್ಯನ ಉದಾರತೆ ತೋರಿಸುತ್ತದೆ. ಆ ನಿಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರ ಜೀವನವೇ ನಮಗೆ ಆದರ್ಶಪ್ರಾಯ ಎಂದು ಚಿನ್ನೇನಹಳ್ಳಿ ಶ್ರೀಬಸವಲಿಂಗಮೂರ್ತಿ ಶರಣರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸಮಾಜ ಸೇವೆ ಮನುಷ್ಯನ ಉದಾರತೆ ತೋರಿಸುತ್ತದೆ. ಆ ನಿಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರ ಜೀವನವೇ ನಮಗೆ ಆದರ್ಶಪ್ರಾಯ ಎಂದು ಚಿನ್ನೇನಹಳ್ಳಿ ಶ್ರೀಬಸವಲಿಂಗಮೂರ್ತಿ ಶರಣರು ಕರೆ ನೀಡಿದರು.

ತಾಲೂಕಿನ ಮಿಡಿಗೇಶಿ ಹೋಬಳಿ ನೇರಳೆಕೆರೆಯಲ್ಲಿ ಸೋಮವಾರ ಶ್ರೀ ವೀರಬಾಲಮ್ಮದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ನಾಗರ ಪೂಜೆ, ಶ್ರೀ ವೀರಬಾಲಮ್ಮ ದೇವಿ ಉತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿಭೆ ವ್ಯಕ್ತಿಗತ ಪ್ರೋತ್ಸಾಹಿಸಿದರೆ ಅದು ಅರಳಿ ಪ್ರಯೋಜನವಾಗಲಿದೆ. ಆ ಮೂಲಕ ಎಲ್ಲರಂತೆ ನಮ್ಮ ಜನಾಂಗದಲ್ಲೂ ಮಾನವೀಯತೆಯಿಂದ ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ನಮ್ಮ ಸಮಾಜದ ಹಿತೈಷಿಗಳಾಗಿ ಹೊರ ಹೊಮ್ಮವರು ಎಂದರು.

ಶ್ರೀವೀರಬಾಲಮ್ಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೇರಳೆಕೆರೆ ಶಿವಣ್ಣ ಮಾತನಾಡಿ, ಪ್ರತಿಭೆ ಯಾರ ಸ್ವತ್ತು ಅಲ್ಲ, ಅದು ಸಾಧಕನ ಸ್ವತ್ತು ಆ ನಿಟ್ಟಿನಲ್ಲಿ ನಮ್ಮ ಛಲವಾದಿ ಬಂಧುಗಳು ಸಮಾಜದಲ್ಲಿ ತಪ್ಪು ಹೆಜ್ಜೆ ಇಡದಂತೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಪ್ರಗತಿಯ ಹಾದಿಯಲ್ಲಿ ನಡೆಸಲು ಎಲ್ಲರೂ ಪ್ರೋತ್ಸಾಹಿಸಿ ಸಹಕರಿಸಬೇಕು ಎಂದರು.

ಸಮಾರಂಭದಲ್ಲಿ ಶ್ರೀ ವೀರಬಾಲಮ್ಮದೇವಿ ದೇವಸ್ಥಾನ ಸಮಿತಿ ಟ್ರಸ್ಟ್ ಅಧ್ಯಕ್ಷ ಶಾಂತರಾಜು , ಶಿವಣ್ಣ ನೇರಳೆಕೆರೆ, ಲಕ್ಷ್ಮಿ ಪುತ್ರ ವೀರಾಪುರ, ಬಿ. ರಂಗನಾಥ್, ಎನ್‌.ಆರ್‌.ಅಂಬೇಡ್ಕರ್ ,ನೇರಂ .ನಾಗರಾಜು ಡಾ.ರವೀಶ್, ರಂಗನಾಥ ಎನ್‌.ಜೆ. ,ತಿಪ್ಪೇಸ್ವಾಮಿ,ಉಮಾದೇವಿ ನಾಗರಾಜು, ರಾಘವೇಂದ್ರ, ರಮೇಶ್,ಪವಿತ್ರ , ರಜನಿ , ಮಲ್ಲಿಕಾರ್ಜುನ್ ಲಕ್ಷ್ಮಮ್ಮ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಎಸ್‌ಎಸ್‌ ಎಂದರೆ ಗೃಹಮಂತ್ರಿಗೆ ಚೇಳು ಕಡಿದಂಗಾಗುತ್ತೆ
ಮಳೆಗಾಲದಲ್ಲೇ ಬರಿದಾಗುತ್ತಿದೆ ಐತಿಹಾಸಿಕ ಭೀಷ್ಮ ಕೆರೆ!