- ಶೃಂಗೇರಿಯಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಅತಿವೃಷ್ಠಿ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗ, ಕೊಳೆರೋಗ, ಬೆಳೆಹಾನಿ ಒತ್ತುವರಿ ಸಮಸ್ಯೆ, ಜನವಿರೋಧಿ ಅರಣ್ಯ ಕಾಯ್ದೆ ಗಳಿಂದ ಮಲೆನಾಡಿನ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಗಂಭೀರವಾದ ಸಮಸ್ಯೆ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಅಂಬಳೂರು ರಾಮಕೃಷ್ಣರಾವ್ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಸೊಪ್ಪಿನ ಬೆಟ್ಟ ಮಂಜೂರಾತಿ ತಡೆ ವಿರೋಧಿಸಿ, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.ಸೊಪ್ಪಿನ ಬೆಟ್ಟ ಪ್ರದೇಶ ಬ್ರಿಟೀಷರ ಕಾಲದಿಂದಲೂ ರೈತರಿಗೆ ಸಂಬಂಧಿಸಿದ ಜಾಗ ಎಂಬ ಉಲ್ಲೇಖಗಳಿವೆ. 1867 ರಲ್ಲಿಯೇ ಬ್ರಿಟೀಷ್ ಸರ್ಕಾರ ಮೊದಲ ಬಾರಿಗೆ ಸೊಪ್ಪಿನ ಬೆಟ್ಟದಲ್ಲಿ ರೈತರಿಗೆ ಅಗತ್ಯವಿರುವ ಸೊಪ್ಪು, ದರಗು, ಮಣ್ಣು ಪಡೆಯುವ ಹಕ್ಕು ನೀಡಿತ್ತು. ಆದರೆ ಅಂದು ಬ್ರಿಟೀಷ್ ಸರ್ಕಾರ ರೈತರಿಗೆ ನೀಡಿದ್ದ ಪಕ್ಕನ್ನು ಇಂದು ನಮ್ಮದೇ ಸರ್ಕಾರಗಳು ರೈತರಿಂದ ಕಿತ್ತುಕೊಳ್ಳುತ್ತಿದೆ. 2002 ರಲ್ಲಿ ಅಂದಿನ ಜಿಲ್ಲಾಧಿಕಾರಿ 58 ಸಾವಿರ ಎಕರೆ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದರು.ಈ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜಾಗವೇ ಇಲ್ಲವಾಗಿದೆ.ಎಲ್ಲವೂ ಅರಣ್ಯಇಲಾಖೆ ಜಾಗ.
ಬೇಗಾರು ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಕೆ.ಡಿ.ಮಾತನಾಡಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ರೈತರ ಬದುಕು ರೂಪಿಸುವ ಕಾನೂನು ರೂಪಿಸುವ ಬದಲು ಮಾರಕ ಕಾಯ್ದೆ ಜಾರಿಗೊಳಿಸಿ ಬೀದಿಪಾಲು ಮಾಡಿ ಮರಣ ಶಾಸನ ಬರೆಯಲು ಹೊರಟಿವೆ. ಕೂಡಲೇ ಸೊಪ್ಪಿನಬೆಟ್ಟ ಮಂಜೂರಾತಿ ತಡೆಹಿಡಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
1 ಶ್ರೀ ಚಿತ್ರ 1-
1 ಶ್ರೀ ಚಿತ್ರ 2-ಶೃಂಗೇರಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲ ಪ್ರತಿಭಟನಾಕಾರರು ಸಮಾವೇಶಗೊಂಡಿರುವುದು.