ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಗವಾಯಿಗಳು: ಕೆ.ಎಂ. ಹೇಮಯ್ಯಸ್ವಾಮಿ

KannadaprabhaNewsNetwork |  
Published : Oct 11, 2026, 03:30 AM IST
ಹೊಸಪೇಟೆ ನಗರದಲ್ಲಿ ಗಾನಗಂಗಾ ಕಲಾ ಪ್ರತಿಷ್ಠಾನದ ವತಿಯಿಂದ ಸಂಗೀತ ನಮನ ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಪಂ. ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳು ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಕಟ್ಟಿ, ಈ ಆಶ್ರಮದಲ್ಲಿ ಸಾವಿರಾರು ಅಂಧರು, ಅಂಗವಿಕಲರು, ಅನಾಥರು, ಬಡ ಮಕ್ಕಳಿಗೆ ಉಚಿತವಾಗಿ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ ಕಲಿಸುತ್ತಾ, ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿದ್ದಾರೆ.

ಪುಟ್ಟರಾಜ ಕವಿ ಗವಾಯಿಯವರ ಪುಣ್ಯಸ್ಮರಣೆ, ಸಂಗೀತ ನಮನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪಂ. ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳು ಗದಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಕಟ್ಟಿ, ಈ ಆಶ್ರಮದಲ್ಲಿ ಸಾವಿರಾರು ಅಂಧರು, ಅಂಗವಿಕಲರು, ಅನಾಥರು, ಬಡ ಮಕ್ಕಳಿಗೆ ಉಚಿತವಾಗಿ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ ಕಲಿಸುತ್ತಾ, ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿದ್ದಾರೆ ಎಂದು ಕಂಪ್ಲಿಯ ಉದ್ಯಮಿ ಹಾಗೂ ಸಮಾಜ ಸೇವಕ ಕೆ.ಎಂ. ಹೇಮಯ್ಯಸ್ವಾಮಿ ಹೇಳಿದರು.

ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ಗಾನಗಂಗಾ ಕಲಾ ಪ್ರತಿಷ್ಠಾನದ ವತಿಯಿಂದ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಯವರ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪುಟ್ಟರಾಜ ಗವಾಯಿಗಳ ಮಠದಲ್ಲಿ ಸಂಗೀತ ಪಾಠ ಕಲಿತ ಎಷ್ಟೋ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡು ಮಠಕ್ಕೆ ಕೀರ್ತಿ ತಂದಿದ್ದಾರೆ ಎಂದು ಅವರು ಹೇಳಿದರು.

ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ, ವಕೀಲ ಪಿ. ವೆಂಕಟೇಶ್ ಹಾಗೂ ಉಪಾಧ್ಯಕ್ಷ ಗುಜ್ಜಲ್ ಗಣೇಶ್, ಸ್ಥಳೀಯ ಮುಖಂಡರಾದ ಮಾರೆಣ್ಣ, ಹಲೋ ಜೋಶಿ, ತುರುವನೂರು ಮಲ್ಲಿಕಾರ್ಜುನ, ಗಂಟೆ ಸೋಮಶೇಖರ, ಚಿದಾನಂದ ರಾರಾವಿ, ಚಲನಚಿತ್ರದ ನಿರ್ದೇಶಕ ಜೋಗಿ ತಾಯಪ್ಪ, ಗಾಯಕಿಯರಾದ ಕಮಲಾ ಕುಲಕರ್ಣಿ ಭಾಗವಹಿಸಿದ್ದರು.

ಗಾನಗಂಗಾ ಸಂಗೀತರತ್ನ ಪ್ರಶಸ್ತಿಯನ್ನು ಹೊಸಪೇಟೆಯ ಸಂಗೀತ ಶಿಕ್ಷಕಿ ಪುಷ್ಪಾವತಿ ಅವರಿಗೆ ಹಾಗೂ ಸಿರುಗುಪ್ಪದ ಚಿದಾನಂದ ರಾರಾವಿ ಅವರಿಗೆ ನೀಡಲಾಯಿತು.

ಜೋಗಿ ತಾಯಪ್ಪ ಅವರಿಗೆ ವಿಜಯನಗರ ಕಲಾರತ್ನ ಪ್ರಶಸ್ತಿ, ಕಮಲಾ ಕುಲಕರ್ಣಿ ಅವರಿಗೆ ಪುಟ್ಟರಾಜ ಅನುಗ್ರಹ ಪ್ರಶಸ್ತಿ, ಪಿ. ವೆಂಕಟೇಶ್ ಹಾಗೂ ಗುಜ್ಜಲ್ ಗಣೇಶ್ ಅವರಿಗೆ ವಿಜಯನಗರ ಕಲಾಪೋಷಕ ಪ್ರಶಸ್ತಿ, ಪ್ರಿಯಾ ಅವರಿಗೆ ವಿಜಯನಗರ ಉದಯೋನ್ಮುಖಿ ಯುವನಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಗಾಯಕ ಯಲ್ಲಪ್ಪ ಭಂಡಾರ್‌ಧಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲೂ ದೋಸ್ತಿ ಮುಂದುವರಿಯಲಿ!
ಸಂಕಷ್ಟಕ್ಕೆ ಅಂಜದೇ ಆತ್ಮವಿಶ್ವಾಸದಿಂದ ಬದುಕು ಸಾಗಿಸಿ: ಮುರುಳೀಧರ ಹೆಗಡೆ