- ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಸಚಿವ ಮಲ್ಲಿಕಾರ್ಜುನ ಕುಟುಂಬ ಪುಣ್ಯಸ್ನಾನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿರುವ ಮಹಾಕುಂಭ ಮೇಳದಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕುಟುಂಬ ಸಮೇತರಾಗಿ ತೆರಳಿ, ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದು, ಪುಣ್ಯ ಲಭಿಸಿದ ಭಾವ ಆವರಿಸಿತು. ಸಾವಿರಾರು ಭಕ್ತರ ಮಧ್ಯೆ ಪವಿತ್ರ ಸಂಗಮ ಸ್ಥಳದ ನೀರಿನ ಸ್ಪರ್ಶದಿಂದ ಮನಸ್ಸು ಚೈತನ್ಯಗೊಂಡಿತು ಎಂಬುದಾಗಿ ಸಂಸದೆ ಡಾ.ಪ್ರಭಾ ಬಣ್ಣಿಸಿದ್ದಾರೆ.
ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರದಲ್ಲಿ ನಾನು ಕಂಡ ನೋಟಗಳೆಲ್ಲಾ ಅಪರೂಪವಾದವು. ನಾಗಾ ಸನ್ಯಾಸಿಗಳ ಅದ್ಭುತ ಸನ್ನಿಧಾನ, ಗಂಗಾರತಿಯ ಪವಿತ್ರ ಜ್ಯೋತಿ, ಸನ್ಯಾಸಿಗಳು ಮತ್ತು ಭಕ್ತರ ಜಪತಪ, ಆಧ್ಯಾತ್ಮಿಕ ಶಕ್ತಿಯು ಅಲ್ಲಿ ಕಂಡುಬಂದಿತು. ಸಂಗಮದ ತೀರದಲ್ಲಿ ಹೋಮ, ಯಜ್ಞ ಮತ್ತು ಪ್ರವಚನಗಳ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು ಎಂದಿದ್ದಾರೆ.ಶ್ರೀ ಕ್ಷೇತ್ರದಲ್ಲಿ ಕಳೆದ ಪ್ರತಿ ಕ್ಷಣವೂ ಸಹ ಭಗವಂತನ ಅನುಗ್ರಹ ಅನುಭವಿಸಿದೆ. ಭಕ್ತಿ, ಶ್ರದ್ಧೆ, ನಂಬಿಕೆಯಿಂದ ತುಂಬಿದ ಆ ಕ್ಷಣಗಳು ನನ್ನ ಮನಸ್ಸಿಗೆ ಶಾಂತಿ, ಸಂತೋಷವನ್ನು ತಂದವು. ಸುಮಾರು 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ. ನಮ್ಮೆಲ್ಲಾ ಕುಟುಂಬ ಸದಸ್ಯರು ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ಪುಳಕಿತರಾದೆವು ಎಂದು ಹೇಳಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪುತ್ರ ಸಮರ್ಥ ಎಂ.ಶಾಮನೂರು, ಪುತ್ರಿ ಡಾ.ಶ್ರೇಷ್ಠ ಎಂ.ಶಾಮನೂರು, ಕುಟುಂಬ ಸದಸ್ಯರು ಇದ್ದರು.- - --24ಕೆಡಿವಿಜಿ8:
ಉತ್ತರ ಪ್ರದೇಶದ ಪ್ರಯಾಗರಾಜ್ ಪವಿತ್ರ ತ್ರಿವೇಣಿ ಸಂಗಮದಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ, ಡಾ.ಶ್ರೇಷ್ಠ ಮತ್ತು ಕುಟುಂಬ ಪುಣ್ಯಸ್ನಾನಗೈದು ಭಕ್ತಿ ಮೆರೆದರು.