ದೇವಿಯ ವಿಸರ್ಜನೆ ಅ.2ರ ಗುರುವಾರ ನಡೆಯಲಿದೆ
ಪಟ್ಟಣದ ಶ್ರೀ ವಿದ್ಯಾಗಣಪತಿ ಪೆಂಡಾಲ್‌ನಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ದೇವಿ ಸನ್ನಿಧಿಯಲ್ಲಿ ಮಂಗಳವಾರ ಪುರೋಹಿತ ಜಗದೀಶ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ದುರ್ಗಾ ಹೋಮ ನಡೆಯಿತು.
ಮಧ್ಯಾಹ್ನ 1 ಗಂಟೆಗೆ ಹೋಮದ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ಎಲ್ಲಾ ಭಕ್ತಾಧಿಗಳಿಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಸ್.ಎಸ್. ಶೇಷಗಿರಿ,ಕಾರ್ಯದರ್ಶಿ ಎನ್.ಎಂ.ಕಾರ್ತಿಕ್, ಖಜಾಂಚಿ ಎಂ.ಸಿ.ಗುರುಶಾಂತಪ್ಪ, ಪದಾಧಿಕಾರಿಗಳಾದ ಎಚ್.ಕೆ.ರವಿ, ಜಿ.ದಿವಾಕರ,ಕೆ.ಪ್ರಶಾಂತ್.ಎಲ್.ಶೆಟ್ಟಿ,ಎಸ್.ಸತೋಷ್,ಕಮ್ತಿವಾಸಪ್ಪಗೌಡ,ಮಾವಿನಮನೆ ಮಂಜುನಾಥ್, ಎಸ್.ಎಸ್.ಜಗದೀಶ್, ಜಾನಕೀರಾಂರೆಡ್ಡಿ, ಮಧುಶೆಟ್ಟಿ,ವೈ.ಎಸ್.ರವಿ,ಡಿ.ಜಿ.ಕುಮಾರ, ನರೇಶ್‌ಲಾಡ್, ಟಿ.ಎಂ.ನಾಗರಾಜ್,ಸುರಭಿರಾಜೇಂದ್ರ, ನಾಗಾರ್ಜುನ, ಶಶಿಧರ,ಜಯಂತ್,ನಾಗೇಂದ್ರ,ಚಿನ್ಮಯ್,ನವೀನ,ಸತೀಶ ಹಾಗೂ ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.ಗುರುವಾರ ವಿಸರ್ಜನೆ: ದೇವಿಯ ವಿಸರ್ಜನಾ ಕಾರ್ಯಕ್ರಮ ಅ.2 ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮೇದರ ಬೀದಿ ಶ್ರೀ ಅಂತರಘಟ್ಟಮ್ಮ ದೇವಿ, ಹಳೇಪೇಟೆ ಶ್ರೀ ಗುತ್ಯಮ್ಮ ದೇವಿ, ಕೊಟ್ಟೂರು ಬಸವೇಶ್ವರ ದೇವರೊಂದಿಗೆ ಮಾರನವಮಿ ಬಯಲಿಗೆ ತೆರಳಿ ಅಲ್ಲಿ ಅಂಬು ಹೊಡೆಯುವ, ಬನ್ನಿ ಮುರಿಯುವ ಕಾರ್ಯಕ್ರಮ ಮುಗಿಸಿಕೊಂಡು, ಮೆರವಣಿಗೆ ಯಲ್ಲಿ ಮೆಣಸೂರು ಭದ್ರಾ ಹಿನ್ನೀರಿಗೆ ತರಲಾಗುವುದು.