ಬ್ಯಾಡಗಿ: ವಿಶ್ವದ ಬಹುತೇಕ ದೇಶಗಳು ಯುದ್ಧದ ಭೀತಿಯಲ್ಲಿವೆ, ಪರಸ್ಪರರಲ್ಲಿ ದ್ವೇಷ ಅಸೂಯೆ ತಾಂಡವಾಡುತ್ತಿದೆ. ಎಲ್ಲರ ಬಳಿಯೂ ಪ್ರೀತಿಯಿಂದ ಬದುಕಿದರೆ ನಿನ್ನ ಜೀವನ ಇನ್ನಿತರರಿಗೆ ಸಂಜೀವಿನಿಯಾಗಲಿದೆ ಎಂಬ ಜೀಸಸ್ ಕ್ರೈಸ್ತರ ಸಂದೇಶ ಪ್ರಸ್ತುತ ಅತ್ಯಂತ ಸೂಕ್ತವೆಂದು ಸೇಂಟ್ ಜಾನ್ ವಿಯಾನ್ನಿ ಚರ್ಚನ ಫಾದರ್ ಜೋಸೆಫ್ ಅಲೆಕ್ಸಾಂಡರ್ ಅಭಿಪ್ರಾಯಪಟ್ಟರು. ಯೇಸುಕ್ರಿಸ್ತನ ಜನ್ಮ ದಿನವಾದ ಗುರುವಾರ ಪಟ್ಟಣದ ಸೇಂಟ್ ಜಾನ್ ವಿಯಾನ್ನಿ ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಯೇಸುಕ್ರಿಸ್ತರ ಜನ್ಮ ದಿನಾಚರಣೆ ನೆರವೇರಿಸಿ ಅವರು ಮಾತನಾಡಿದರು.
ಮೋಟೆಬೆನ್ನೂರಿನಲ್ಲಿ ಕ್ರಿಸಮಸ್ ಸಂಭ್ರಮ: ಶಾಂತಿ ದೇವಾಲಯ ಮೋಟೆಬೆನ್ನೂರಿನಲ್ಲಿಯೂ ಜೀಸಸ್ ಕ್ರಿಸ್ತ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ರೇವೆರೆಂಡ್ ಅಶೋಕ ಬಂಡಿ ಮಾತನಾಡಿ, ಜೀಸಸ್ ಕ್ರೈಸ್ತರು ಸಂಪತ್ತಿಗಿಂತ ಸರಳತೆಗೆ ಆದ್ಯತೆ ನೀಡಿದರು. ಕ್ಷಮೆಯಲ್ಲಿ ನಿಜವಾದ ಶಕ್ತಿ ಅಡಗಿದೆ ಎಂಬುದನ್ನು ಸಾಬೀತು ಪಡಿಸಿದವರು, ದುರ್ಬಲರ ಪರನಿಂತು ಅನ್ಯಾಯ ಪ್ರಶ್ನಿಸಿದರು, ವಿಶ್ವಾದ್ಯಂತ ಶಾಂತಿ, ಸೇವೆ ಮತ್ತು ಸಾಮಾಜಿಕ ಸುಧಾರಣೆಗಾಗಿ ಅವರು ಚಳವಳಿಗಳಿಗೆ ಪ್ರೇರಣೆ ನೀಡಿದ್ದಾಗಿ ತಿಳಿಸಿದರು.ಹೆಚ್ಚು ಜನರು ಕ್ರೈಸ್ತ ಧರ್ಮ ಪರಿಧಿಗೆ: ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮವು ಸೇವಾ ಮನೋಭಾವವನ್ನು, ಸರಳತೆ, ನಾಗರಿಕ ಪ್ರಜ್ಞೆ, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗುತ್ತಿದೆ, ವಿಶ್ವದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮವು ಬೈಬಲ್ ಹುಟ್ಟಿಗೆ ಕಾರಣವಾದ ಯೇಸುಕ್ರಿಸ್ತನನ್ನು ನಾವೆಲ್ಲರೂ ನೆನೆಯುತ್ತಿದ್ದೇವೆ, ಶೋಷಿತರು ಯಾರೇ ಆಗಲಿ ಅಸಹಾಯಕರ ಸೇವೆ ಮಾತ್ರ ಧರ್ಮದ ಉದ್ದೇಶವಾಗಿದೆ, ಸಮಾನತೆ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯ ಎನ್ನುವ ಔದಾರ್ಯ ಯೇಸುಕ್ರಿಸ್ತನ ಅನುಯಾಯಿಗಳ ಕೊಡುಗೆ ಎಂದರು. ಈ ವೇಳೆ ಹೆನ್ರಿಕ್ ಗುಡುಗೂರ, ಎಲಿಜಬೆತ್ ಅಗಡಿ, ಜಾನ್ ಪುನೀತ್, ಗುರುಪುತ್ರ ಕಾಲ್ಪಲ್, ಮೋಹನಪ್ಪ ಮಾಳಗಿ, ಡಿಸೋಜಾ ಬಲ್ಮಿ, ಪ್ರಭಾಕರ ಗುಡಗೂರ, ರತ್ನಾಕರ ಪುನೀತ, ಪ್ರಕಾಶ ಮಾಳೇಕರ, ನವರಾಜ ಶಿಗ್ಗಾವಿ, ಜಾನ್ ಆಗಡಿ, ಮಾಲಾ ಗುಡಗೂರ, ಚಂದ್ರಕಾಂತ ಪುನೀತ, ಸಲೋಮವ್ವ ಕಾಲ್ಪಲ್, ಪ್ರೇಮಾ ಕಾಲ್ಪಲ್, ಪ್ರೇಮಾ ಗುಡಗೂರ, ಪ್ರಿಸ್ಕಲ್ಲ ಅರಳೀಕಟ್ಟಿ, ಲೂಸಿ ಮಾಳಗಿ ಹಾಗೂ ಇನ್ನಿತರರಿದ್ದರು.