ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಹಳೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೊಠಡಿಗೆ ಸ್ಥಳಾಂತರಗೊಂಡಿದ್ದ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಒಳ್ಳೆ ಗ್ರಂಥಾಲಯ ಬೇಕಿದೆ ಎಂದರು. ಗ್ರಂಥಾಲಯದ ಆವರಣದಲ್ಲಿ ಕಸ ಹಾಕದಂತೆ ಪುರಸಭೆ ಮಾಡಬೇಕು. ಅಲ್ಲದೆ ವಿಶೇಷ ಅನುದಾನ ತಂದು ಸದ್ಯಕ್ಕೆ ಸುತ್ತುಗೋಡೆ, ಗೇಟ್ ಅಳವಡಿಸಲು ಮುಂದಾಗುವೆ ಎಂದು ಭರವಸೆ ನೀಡಿದರು.
ಕನ್ನಡಪ್ರಭ ನಿರಂತರ ವರದಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶೈಲೇಶ್ ಪ್ರತಿ ನಿತ್ಯ ನನ್ನ ಮೇಲೆ ಒತ್ತಡ ಹಾಕಿ ಕಿಷ್ಕಿಂಧೆಯಂತಿದ್ದ ಗ್ರಂಥಾಲಯ ಬದಲಿಸಲು ಪ್ರಯತ್ನಿಸಿದರು ಎಂದರು. ಶಿಕ್ಷಣಕ್ಕೆ ಮಹತ್ವ ಇರುವ ಕಾರಣ ಗ್ರಂಥಾಲಯ ಪಟ್ಟಣದಲ್ಲಿ ಅತ್ಯವಶ್ಯಕವಾಗಿದೆ. ಗ್ರಂಥಾಲಯಕ್ಕೆ ಜಾಗ ಹಾಗೂ ಕಟ್ಟಡ ನಿರ್ಮಿಸಲು ಕ್ರಮ ಹಾಗೂ ಗ್ರಂಥಾಲಯಕ್ಕೆ ಮತ್ತೊಂದು ಕೊಠಡಿ ನೀಡುವಂತೆ ಬಿಇಒಗೆ ಹೇಳುವುದಾಗಿ ಭರವಸೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್), ಮುಖ್ಯ ಗ್ರಂಥಾಲಯ ಅಧಿಕಾರಿ ವಡ್ಡಗೆರೆ ಶಿವಸ್ವಾಮಿ ಮಾತನಾಡಿ, ಗ್ರಂಥಾಲಯಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್,ಪುರಸಭೆ ಸದಸ್ಯರಾದ ಎನ್.ಕುಮಾರ್,ಗೌಡ್ರ ಮಧು,ಪುತ್ತನಪುರ ಸಾಹುಕಾರ್ ಚಿಕ್ಕಮಲ್ಲಪ್ಪ ಚಂದ್ರಶೇಖರ್,ಕಸಾಪ ತಾಲೂಕು ಮಾಜಿ ಅಧ್ಯಕ್ಷ ಚಿದಾನಂದ,ಮುಖಂಡರಾದ ಲಕ್ಕೂರು ರಾಜಣ್ಣ,ವೀರನಪುರ ಗುರು,ಶಂಕರ್ ಮಾದಿಗ್,ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ,ಗ್ರಂಥಾಲಯದ ಜಯಶಂಕರ್ ಸೇರಿದಂತೆ ಹಲವರಿದ್ದರು.
ಗುಂಡ್ಲುಪೇಟೆ: ಹಳೇ ಆಸ್ಪತ್ರೆಯ ರಸ್ತೆಯಲ್ಲಿ ಖಾಸಗಿ ಮನೆಯಲ್ಲಿದ್ದ ಕಿಷ್ಕಿಂಧೆ ಗ್ರಂಥಾಲಯ ಸ್ಥಳಾಂತರವಾಗಬೇಕು ಎಂದು ಕನ್ನಡಪ್ರಭ ಹತ್ತಾರು ವರದಿಗಳನ್ನು ಪ್ರಕಟಿಸಿ ಶಾಸಕರ ಗಮನ ಸೆಳೆದಿತ್ತು.
ಮೆಚ್ಚುಗೆ: ಗ್ರಂಥಾಲಯ ಅಧಿಕೃತವಾಗಿ ಚಾಲನೆ ನೀಡಿದ ಸಮಯದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ವಡ್ಡಗೆರೆ ಶಿವಸ್ವಾಮಿ ಕನ್ನಡಪ್ರಭ ವರದಿ ಬಳಿಕ ಗ್ರಂಥಾಲಯ ಸ್ಥಳಾಂತರವಾಯಿತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.