ಕನ್ನಡಪ್ರಭ ವಾರ್ತೆ ಇಂಡಿ
ಈ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಜಟ್ಟೆಪ್ಪ ರವಳಿ, ಜಾವೇದ ಮೋಮಿನ, ಬಿ.ಸಿ.ಸಾಹುಕಾರ, ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಪ್ರತಿನಿಧಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಹಾಗೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದುವ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಜನರ ಸೇವೆಯೇ ನಿಜವಾದ ರಾಜಕೀಯದ ಉದ್ದೇಶ ಎಂಬ ಆಶಯದೊಂದಿಗೆ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ. ಬಡವರು, ರೈತರು, ಯುವಕರು ಹಾಗೂ ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸಿ, ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಿ ಎಂದು ಶುಭ ಹಾರೈಸಿದರು.ಶಾಸಕರ ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಉಚಿತ ಆರೋಗ್ಯ ತಪಾಸಣೆ, ಬಡರೋಗಿಗಳಿಗೆ ಹಣ್ಣು- ಹಂಪಲು ವಿತರಣೆ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳು ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವುದು ಉತ್ತಮ ಕಾರ್ಯ ಎಂದರು. ರಾಜ್ಯದಲ್ಲಿ ತೀವ್ರ ಬರದ ಹಿನ್ನಲೆಯಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳು ಸ್ವಂತ ಖರ್ಚಿನಿಂದ ಒಬ್ಬ ಜನನಾಯಕನ ಜನ್ಮದಿನ ಆಚರಣೆ ಮಾಡಿದ್ದು, ನಿಜವಾದ ಅಭಿಮಾನದ ಕಾರ್ಯ. ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ಜನಸೇವೆಗೆ ಇನ್ನಷ್ಟು ಅವಕಾಶ ದೇವರು ನೀಡಲಿ ಎಂದು ಪ್ರಾರ್ಥಿಸಿದರು.ಅಜೀತ ಧನಶೆಟ್ಟಿ, ಮುತ್ತಪ್ಪ ಪೊತೆ, ಶ್ರೀಕಾಂತ ಕುಡಿಗನೂರ, ಶಿವಯೋಗೆಪ್ಪ ಚನಗೊಂಡ, ಸತೀಶ ಕುಂಬಾರ, ಸುಗಂದಾ ಪಾಟೀಲ, ಬಿ.ಎಸ್.ಕವಲಗಿ ಮಾತನಾಡಿ, ಸದಾ ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಯಶವಂತರಾಯಗೌಡ ಪಾಟೀಲ ಅವರಿಗೆ ಭವಿಷ್ಯದಲ್ಲಿ ಸಚಿವ ಸ್ಥಾನ ಲಭಿಸಿ ನಾಡಿನ ಜನರ ಸೇವೆ ಮಾಡುವ ಭಾಗ್ಯ ಕರುಣಿಸಲಿ. ಬರದ ಸಂಕಷ್ಟದಿಂದ ಪಾರು ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.ಪ್ರಶಾಂತ ಕಾಳೆ, ಭೀಮಾಶಂಕರ ಮೂರಮನ, ಶೇಖರ ನಾಯಕ, ಕಾಮೇಶ ಉಕ್ಕಲಿ, ಸದಾಶಿವ ಪ್ಯಾಟಿ, ಪ್ರಭುಗೌಡ ಬಿರಾದಾರ, ರಷಿದ ಅರಬ, ಶಬ್ಬಿರ ಖಾಜಿ ವೇದಿಕೆ ಮೇಲಿದ್ದರು. ಮಲ್ಲು ಮಡ್ಡಿಮನಿ,ನಾಗೇಂದ್ರ ಮೇತ್ರಿ,ಯಲ್ಲಪ್ಪ ಬಂಡೆನವರ,ಮಹ್ಮದ ಸೌದಾಗರ,ಎಸ್.ಜೆ.ಮಾಡ್ಯಾಳ, ಸತೀಶಗೌಡ ಪಾಟೀಲ,
ಮುಸ್ತಾಕ ಇಂಡಿಕರ, ಸುಧೀರ ಕರಕಟ್ಟಿ, ನೀಲಕಂಠ ರೂಗಿ, ಶೇಖರ ಶಿವಶರಣ, ಮಹೇಶಗೌಡ ಲಚ್ಯಾಣ, ಇಮ್ರಾನ ಮಕಂದಾರ, ರೈಸ್ ಅಸ್ಟೇಕರ, ಹಣಮಂತ ಅರವತ್ತು, ಸುಭಾಷ ಬಾಬರ, ಮಹಿಬೂಬ ಜಹಾಗಿರದಾರ, ಸೋಮು ಚನಗೊಂಡ, ಸಂತೋಷ ಪರಸೆನವರ, ಹುಚ್ಚಪ್ಪ ತಳವಾರ, ಧರ್ಮು ವಾಲಿಕಾರ, ಧರ್ಮು ರಾಠೋಡ ಸೇರಿ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಶಾಸಕರಿಗೆ ಶುಭಾಶಯಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಜನ್ಮದಿನದ ನಿಮಿತ್ಯ ಕನ್ನಡಪ್ರಭ ಹೊರತಂದ ವಿಶೇಷ ಪುರವಣಿಯನ್ನು ಶಾಸಕರ ಆಪ್ತ ಸಹಾಯಕರಾದ ಟಿ.ಎಸ್.ಖಟ್ಟೆ, ಶ್ರೀಕಾಂತ ಚವ್ಹಾಣ, ಕೊಟ್ರೇಶ, ಮೋಹನ ಪ್ರದಾನಿ, ಆನಂದ ವಾಲಿ, ಶಾಂತೇಶ ಬಡಿಗೇರ, ಅಕ್ಷಯಕುಮಾರ ನಾಗಣೆ ಬಿಡುಗಡೆಗೊಳಿಸಿದರು.ಬಾಕ್ಸ್ನೋಟ್ ಬುಕ್ ವಿತರಣೆ
ಎನ್‌ಎಸ್‌ಯುಐ ತಾಲೂಕು ಸಂಚಾಲಕ ಸಂತೋಷ್ ರವಳಿ, ಯುವ ಘಟಕದ ಅಧ್ಯಕ್ಷ ಸತೀಶ್ ಹತ್ತಿ ,ಗಂಗಾಧರ ಗುಳೇದ, ಸಚಿನ ಹೊಸಮನಿ, ಭರತ ಮಡ್ಡಿಮನಿ, ಈಶ್ವರ ಸಜ್ಜನ, ಶಹಾಜಿ ಸಿಂಗ್, ಗಫರ್ ಇನ್ಮಾದಾರ, ಶಿವರಾಜ ಬಿರಾದಾರ, ಮುಸ್ತಾಫ ಬೈರೊಡಗಿ, ನಾಗರಾಜ ಆಳುರ ಮೊದಲಾದವರು ಇದ್ದರು.ಬಾಕ್ಸ್
ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಜನ್ಮದಿನದ ನಿಮಿತ್ಯ ವಿಬಿ ಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ, ಹಣ್ಣು ಹಂಪಲ ವಿತರಣೆ ಕಾರ್ಯಕ್ರಮ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ನೇತ್ರತ್ವದಲ್ಲಿ ನಡೆಯಿತು.