ಕನ್ನಡಪ್ರಭ ವಾರ್ತೆ ದಾವಣಗೆರೆ ನಾನೊಂದು ತೀರ, ನೀನೊಂದು ತೀರ.. ಮನಸು ಮನಸ್ಸು ದೂರ, ಪ್ರೀತಿ ಹೃದಯ ಭಾರ.. ಎನ್ನುವಂತಾಗಿದ್ದ 15ಕ್ಕೂ ಹೆಚ್ಚು ಪತಿ-ಪತ್ನಿಯರನ್ನು ಒಗ್ಗೂಡಿಸುವ ಮೂಲಕ ಮನಸ್ಸು ಮನಸ್ಸನ್ನು ಬೆಸೆಯುವ ಕೊಂಡಿಯಾಗಿ, ಬೇರ್ಪಡಲು ಮುಂದಾಗಿದ್ದ ಜೋಡಿಗಳನ್ನು ಒಂದಾಗಿಸುವ ಮೂಲಕ ರಾಷ್ಟ್ರೀಯ ಲೋಕ ಅದಾಲತ್ ಮಹತ್ವದ ಮಾನವೀಯ ಕಾರ್ಯ ಮಾಡಿದೆ.
ಕೌಟುಂಬಿಕ ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಪ್ರತಿನಿಧಿಸುವ ವಕೀಲರು, ಸಂಧಾನಕಾರರು ಹೀಗೆ ಎಲ್ಲರ ಶ್ರಮದಿಂದ ಈವರೆಗೆ ಸುಮಾರು 15 ಜೋಡಿ ಗಂಡ-ಹೆಂಡತಿಯರು ಮರು ಹೊಂದಾಣಿಕೆ ಮಾಡಿಕೊಂಡು ಸಹ ಜೀವನ ನಡೆಸಲು ಸಿದ್ದರಾಗಿದ್ದಾರೆ. ಈ ಸಂಖ್ಯೆಯು ಇನ್ನೂ ಕೂಡ ಹೆಚ್ಚಾಗುವ ಸಂಭವ ಇದೆ. ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಹುದು ಎಂದರು.
ಕೆಲವು ಪಕ್ಷಗಾರರಿಗೆ ನಾವು ಏಕೆ ಪ್ರಕರಣ ಬಗೆಹರಿಸಬೇಕೆಂಬ ಜಿದ್ದು ಇರುತ್ತದೆ. ಆ ಜಿದ್ದಾಜಿದ್ದಿಯನ್ನು ಮರೆತು, ಇಲ್ಲಿಗೆ ಬಂದು ತಮ್ಮ ಪ್ರಕರಣಗಳನ್ನು ಎಲ್ಲರೂ ಕೂಡಿಕೊಂಡು, ಪರಿಹರಿಸಿಕೊಂಡಿದ್ದಾರೆ. ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದಾಗಿ ಮಾಡದೇ, ಸುಖ ಜೀವನ ನಡೆಸುವುದೇ ನಿಜ ಜೀವನವಾಗಿದೆ. ಐದಾರು ಸಾವಿರದಷ್ಟು ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಿದ್ದು, ಈಗಾಗಲೇ 4,800 ಪ್ರಕರಣಗಳನ್ನು ಈವರೆಗೆ ಬಗೆಹರಿಸಲಾಗಿದೆ ಎಂದು ಹೇಳಿದರು.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ್ ಮಾತನಾಡಿ, ಮದುವೆಯೆಂದರೆ ನಮ್ಮ ಸಂಬಂಧಿಗಳು, ಗೆಳೆಯರು, ಆತ್ಮೀಯರು ಹೀಗೆ ಸಾವಿರಾರು ಜನರು ಬಂದು, ಗಂಡ-ಹೆಂಡತಿ ಚೆನ್ನಾಗಿರಿ. ನಿಮ್ಮ ಬಾಳು ಸಂತೋಷವಾಗಿರಲಿ. ನಾಳೆ ನಿಮ್ಮ ಮಧ್ಯೆ ಏನೇ ಸಣ್ಣಪುಟ್ಟ ಸಮಸ್ಯೆ ಬಂದರೂ ತಮ್ಮನ್ನು ಭೇಟಿಯಾಗಿ, ನಮ್ಮ ಅನುಭವ ಕೇಳಿ, ತಿಳಿದುಕೊಳ್ಳಿ. ಆದರ್ಶ ಬಾಳು ನಿಮ್ಮದಾಗಲಿ ಎಂಬುದಾಗಿ ಹರಸಿ, ಹಾರೈಸಿ ಕಳಿಸುವುದೇ ವಿವಾಹ ಎಂದು ತಿಳಿಸಿದರು.
1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯನವರ್, ಕೌಟುಂಬಿಕ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೇರಿ, 2ನೇ ಸತ್ರ ಜಿಲ್ಲಾ ನ್ಯಾಯಾಧೀಶರಾದ ಎನ್.ಪ್ರವೀಣಕುಮಾರ ಎನ್, ಮಕ್ಕಳ ಶಾಲೆ ನ್ಯಾಯಾಧೀಶರಾದ ಶ್ರೀರಾಮ ಹೆಗಡೆ, ವಕೀಲ ಸಂಧಾನಕಾರರಾದ ಭಾಗ್ಯಲಕ್ಷ್ಮಿ, ಇತರರು, ಕಕ್ಷಿದಾರರು, ಒಂದಾದ ಜೋಡಿಗಳು, ಕುಟುಂಬ ವರ್ಗದವರು, ನ್ಯಾಯಾಲಯ ಸಿಬ್ಬಂದಿ ಇದ್ದರು.