ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಿಯಕರ ಮೋಹನ್ ಜತೆ ತನ್ನ ಹುಟ್ಟುಹಬ್ಬವನ್ನು ಪ್ರಿಯಾಂಕ ಅದ್ದೂರಿಯಾಗಿ ಆಚರಿಸುವ ಸಂಭ್ರಮದಲ್ಲಿದ್ದಳು. ಮಾ.23ರಂದು ಕೇರಳ ಹಾಗೂ ತಮಿಳುನಾಡಿಗೆ ವೆನ್ನಿಲಾಳನ್ನು ಕರೆದುಕೊಂಡು ಕಾರಿನಲ್ಲಿ ಅವರು ಪ್ರವಾಸ ಹೋಗಿದ್ದರು. ಆದರೆ, ಕೇರಳದ ಅಲ್ಪೆ ಬೀಚ್‌ನಲ್ಲಿ ಬೋಟಿಂಗ್ ವಿಷಯಕ್ಕೆ ಪ್ರಿಯಕರನ ಜತೆ ಆಕೆ ಜಗಳ ಮಾಡಿದ್ದಳು. ಬಳಿಕ ಬೆಂಗಳೂರಿಗೆ ಮರಳಿದ ಪ್ರಿಯತಮೆ ಮುನಿಸು ತಣಿಸಲು ಇಂದಿರಾನಗರಕ್ಕೆ ಶಾಪಿಂಗ್‌ಗೆ ಮೋಹನ್ ಕರೆದೊಯ್ದ. ಆ ವೇಳೆ ಕಾರಿನಲ್ಲೇ ಒಬ್ಬಳೇ ಇದ್ದ ಮಗು ಮೇಲೆ ಸಿಟ್ಟಿನಲ್ಲಿ ಮೋಹನ್ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಈ ಟ್ರಾವೆಲ್ಸ್ ಹಿಸ್ಟರಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದೇವೆ. ಎಲ್ಲಡೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿದ್ದೇವೆ. ಪ್ರತಿ ಹಂತದಲ್ಲಿ ಕೂಡ ಲೋಪವಾಗದಂತೆ ತನಿಖೆ ನಡೆಸಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಮೃತಳ ತಂದೆಯಿಂದಲೇ ದೂರು ಪಡೆದು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.2 ದಿನದಲ್ಲಿ ಸಾವಿರ ಕಿ.ಮೀ ಸುತ್ತಾಟ: ಕಳೆದ ಮಾ.24ರಂದು ಪ್ರಿಯಾಂಕಳ ಹುಟ್ಟುಹಬ್ಬ ಆಚರಣೆ ಮಾಡಲು ಕೇರಳ-ತಮಿಳುನಾಡು ಪ್ರವಾಸಕ್ಕೆ ಆರೋಪಿಗಳು ಯೋಜಿಸಿದ್ದರು. ಅಂತೆಯೇ ಮಾ.23ರಂದು ಬೆಳಗ್ಗೆ ಹೊರಟು ತಮಿಳುನಾಡಿನ ತಿರುಣ್ಣಾಮಲೈಯಲ್ಲಿ ದೇವರ ದರ್ಶನ ಪಡೆದು ಅಲ್ಲಿಂದ ಕೇರಳದ ಅಲ್ಪೆಗೆ ಹೋಗಿದ್ದರು. ಆದರೆ, ಅಲ್ಪೆಯಲ್ಲಿ ಬೋಟಿಂಗ್ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮುನಿಸಿಕೊಂಡ ಪ್ರಿಯತಮೆ ಸಂತೈಸಲು ಮೋಹನ್ ಪ್ರಯತ್ನಿಸಿ ವಿಫಲನಾಗಿದ್ದ. ಕೊನೆಗೆ ಅದೇ ದಿನ ಕೇರಳದಿಂದ ಬೆಂಗಳೂರು ನಗರಕ್ಕೆ ಮರಳಿದರು.ಮೊಣಕೈಯಿಂದ ಗುದ್ದಿದ ಮೋಹನ್:
ಸಾವಿನ ಬಗ್ಗೆ ಸುಳ್ಳು ಕತೆ:
ವೆನ್ನಿಲಾ ಕೊಲೆ ಕೃತ್ಯವನ್ನು ಆರೋಪಿ ಮೋಹನ್ ಉಪಸ್ಥಿತಿಯಲ್ಲಿ ಪೊಲೀಸರು ಮರುಸೃಷ್ಟಿಸಿದ್ದಾರೆ. ಇಂದಿರಾನಗರದ ಶಾಪಿಂಗ್ ಮಾಲ್ ಬಳಿಗೆ ಮೃತ ಮಗುವಿನ ವಯಸ್ಸಿನ ಮತ್ತೊಬ್ಬಳು ಬಾಲಕಿಯನ್ನು ಕರೆತಂದು ಆರೋಪಿಯಿಂದ ಹತ್ಯೆ ಕೃತ್ಯದ ಸನ್ನಿವೇಶವನ್ನು ಮರುಸೃಷ್ಟಿಸಿ ಮಹಜರ್ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೇರಿ ಮೂವರ ತಲೆದಂಡಮಗು ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪದ ತೋರಿಸಿದ ಆರೋಪದ ಮೇರೆಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮೂವರನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಮಾನತುಗೊಳಿಸಿದ್ದಾರೆ. ಇನ್ಸ್‌ಪೆಕ್ಟರ್ ರಂಗಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ನಿಂಗರಾಜು ಹಾಗೂ ಹೆಡ್ ಕಾನ್‌ಸ್ಟೇಬಲ್ ಹಾಲೇಶ್ ನಾಯಕ್ ಅಮಾನತುಗೊಂಡಿದ್ದು, ಕೊಲೆ ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲು ವಿಳಂಬ ತೋರಿದ ಆರೋಪ ಬಂದಿದೆ. ಏ.4 ರಂದು ಪೊಲೀಸರಿಗೆ ಸಲ್ಲಿಕೆಯಾದ ಮಗು ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅಸಹಜ ಸಾವು ಎಂದು ಉಲ್ಲೇಖವಾಗಿತ್ತು. ಆಗ ಶಂಕಾಸ್ಪದ ಸಾವು ಆರೋಪದಡಿ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸದೆ ನಿರ್ಲಕ್ಷ್ಯತನ ತೋರಿದ್ದಾರೆ. ಈ ಬಗ್ಗೆ ವರದಿ ಪಡೆದು ಆಯುಕ್ತರು ಶಿಸ್ತು ಕ್ರಮ ಜರುಗಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನನ್ನ ಮಗಳನ್ನು ನಾನೇಕೆ ಕೊಲೆ ಮಾಡಲಿ. ನಾನು ತಪ್ಪು ಮಾಡಿಲ್ಲ. ನೀವು (ಪೊಲೀಸರು) ಸೃಷ್ಟಿಸಿದ ಸುಳ್ಳಿನ ಕಥೆ ಇದು ಎಂದು ವಿಚಾರಣೆ ವೇಳೆ ಮೃತಳ ತಾಯಿ ಪ್ರಿಯಾಂಕ ಹೊಸ ವರಸೆ ತೆಗೆದಿರುವುದಾಗಿ ತಿಳಿದು ಬಂದಿದೆ. ತಾನು ತಪ್ಪು ಮಾಡಿಲ್ಲ. ನನಗೆ ಮಗಳ ಸಾವಿನ ಸಂಗತಿ ಗೊತ್ತಾಗಿಲ್ಲ. ಆರೋಗ್ಯದಲ್ಲಿ ಸಮಸ್ಯೆಯಿಂದ ಸಾವನ್ನಪ್ಪಿದೆ ಎಂದು ಆಕೆ ಅಲವತ್ತುಕೊಂಡಿದ್ದಾಳೆ ಎನ್ನಲಾಗಿದೆ.
ಮಗು ಸಾವನ್ನಪ್ಪಿದ ವಿಚಾರ ತಿಳಿದು ಆತಂಕಗೊಂಡ ಪ್ರಿಯಾಂಕ, ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಮಗಳ ಬಟ್ಟೆಯನ್ನು ಬದಲಾಯಿಸಿದ್ದಾಳೆ. ಬಳಿಕ ಆ ಬಟ್ಟೆಗಳನ್ನು ತೊಳೆದು ಹಾಕಿದ್ದಳು. ಇದರಿಂದ ಆಕೆ ಮೇಲೆ ಶಂಕೆ ಮೂಡಿತ್ತು ಎನ್ನಲಾಗಿದೆ.
ವೆನ್ನಿಲಾ ಹತ್ಯೆ ಪ್ರಕರಣದಲ್ಲಿ ತನಿಖಾ ಲೋಪದ ಆರೋಪದ ಮೇರೆಗೆ ಪಿಎಸ್ಐ ನಿಂಗರಾಜು ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಮೇ 18 ರಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ಎಸಿಪಿ ವರದಿ ನೀಡಿದ್ದರು. ಇದರಲ್ಲಿ ಕರ್ತವ್ಯ ಲೋಪದ ಕುರಿತು ಸವಿಸ್ತಾರವಾಗಿ ಎಸಿಪಿ ಉಲ್ಲೇಖಿಸಿದ್ದರು ಎಂದು ತಿಳಿದು ಬಂದಿದೆ.
ಪ್ರಿಯಾಂಕಗೆ ₹50 ಲಕ್ಷ ಕೊಟ್ಟಿದ್ದ ಮೋಹನ್ಸೀಗೆಹಳ್ಳಿಯ ಸಿಲಿಕಾನ್ ಮಂತ್ರಿ ವಿಲ್ಲಾದಲ್ಲಿ ₹1.5 ಕೋಟಿಗೆ ವಿಲ್ಲಾವನ್ನು ಪ್ರಿಯಾಂಕ ಬೋಗ್ಯಕ್ಕೆ ಪಡೆದಿದ್ದಳು. ಇದಕ್ಕೆ ₹50 ಲಕ್ಷ ಹಣವನ್ನು ಮೋಹನ್ ಕೊಟ್ಟಿದ್ದ. ತಾನೊಬ್ಬ ಭಾರಿ ಶ್ರೀಮಂತ ಎಂದು ಆತ ಬಿಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.