ಮುಡಾ ಹಗರಣವು ಸದ್ದು ಮಾಡಿ, ಇಡಿಯಿಂದ ಆಸ್ತಿ ಮುಟ್ಟುಗೋಲು, ಹಿಂದಿನ ಆಯುಕ್ತರ ಬಂಧನ ನಡೆಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತದಿಂದ ಕ್ಲಿನ್ ಚಿಟ್ ಸಿಕ್ಕಿತು.
- , ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದ, ಭಾರಿ ಪ್ರಮಾಣದ ಡ್ರಗ್ಸ್ ಪತ್ತೆ...- ಉರುಳಿದ ಮತ್ತೊಂದು ವರ್ಷ- 2025
--ಫೋಟೋಗಳು 31 ಎಂವೈಎಸ್ 41 ರಿಂದ 44---------------------ಕನ್ನಡಪ್ರಭ ವಾರ್ತೆ ಮೈಸೂರುಸದ್ದು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ. ಇಡಿಯಿಂದ ತನಿಖೆ, ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಬಂಧನ, ಟಿ. ನರಸೀಪುರದಲ್ಲಿ ಕುಂಭಮೇಳ, ದಸರಾ ಉದ್ಘಾಟಕರಾಗಿ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ವಿರೋಧ, ಮೈ,ಸೂರಿಗೆ ಮೂರನೇ ಸ್ವಚ್ಛ ನಗರ ಪ್ರಶಸ್ತಿ, ಹುಲಿ ದಾಳಿಗೆ ಮೂವರ ಬಲಿ, ಗ್ರೇಟರ್ ಮೈಸೂರು ನಗರಪಾಲಿಕೆ ರಚನೆ...- ಇವು ಕಳೆದ ವರ್ಷ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳು.ಮುಡಾ ಹಗರಣವು ಸದ್ದು ಮಾಡಿ, ಇಡಿಯಿಂದ ಆಸ್ತಿ ಮುಟ್ಟುಗೋಲು, ಹಿಂದಿನ ಆಯುಕ್ತರ ಬಂಧನ ನಡೆಯಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತದಿಂದ ಕ್ಲಿನ್ ಚಿಟ್ ಸಿಕ್ಕಿತು. ಜೊತೆಗೆ ಮೂಡಾ ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರ- ಎಂಡಿಎ ಆಗಿ ಬದಲಾಗಿದೆ.ದಸರಾ ಉದ್ಘಾಟಕರಾಗಿ ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ನಂತರ ಸಾಕಷ್ಟು ವಿವಾದ ಉಂಟಾದರೂ ಅಂತಿಮವಾಗಿ ಅವರಿಂದಲೇ ಉದ್ಘಾಟನೆ ನಡೆಯಿತು.ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವು ಎಂದಿನಂತೆ ತಿರುಮಕೂಡಲಿನಲ್ಲಿ ಕಾವೇರಿ, ಕಪಿಲಾ, ಸ್ಫಟಿಕ ಸರೋಪರದ ಸಂಗಮದಲ್ಲಿ ಜರುಗಿತು.ಉತ್ತರ ಪ್ರಯಾಗದ ಪ್ರಭಾವದಿಂದಾಗಿ ಈ ಬಾರಿ ಈ ಕುಂಭಮೇಳಕ್ಕೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದು ವಿಶೇಷ.ಮೈಸೂರು ನಗರಕ್ಕೆ ಮೂರನೇ ಸ್ವಚ್ಛ ನಗರಿ ಪ್ರಶಸ್ತಿ ದೊರೆಯಿತು. ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡರು. ಎಚ್.ಡಿ, ಕೋಟೆ ಸುತ್ತಮುತ್ತ ಹುಲಿ ದಾಳಿಯಿಂದ ಮೂವರು ರೈತರು ಬಲಿಯಾದರು. ಇದರಿಂದ ಸಫಾರಿ ಬಂದ್ ಮಾಡಲಾಗಿದೆ.ಮೈಸೂರು ನಗರಪಾಲಿಕೆಯುನ್ನು ಮೇಲ್ದರ್ಜೆಗೇರಿಸಲಾಗಿದೆ.ಸಿದ್ದರಾಮಯ್ಯ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶದ ಹೆಸರಿನಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಮೂಲ ಸೌಕರ್ಯಗಳುಬನ್ನಿಮಂಟಪದಲ್ಲಿ 120 ಕೋಟಿ ರು. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ, ಸುಸಜ್ಜಿತ ಅಶೋಕಪುರಂ ರೈಲ್ವೆ ನಿಲ್ದಾಣ ಉದ್ಘಾಟನೆ, ಚಿತ್ರನಗರಿ ನಿರ್ಮಾಣಕ್ಕೆ ಕ್ರಮ, ಜಿಲ್ಲಾಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ, ಗಣ್ಯರ ಭೇಟಿರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಮಳವಳ್ಳಿಯಲ್ಲಿ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಯಲ್ಲಿ ಭಾಗವಹಿಸಲು ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಕೂಡ ಜೆಎಸ್ಎಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಗಲಿದ ಗಣ್ಯರುಪ್ರೊ.ಮುಜಾಫರ್ ಅಸ್ಸಾದಿ, ಮಾಜಿ ಮೇಯರ್ ಎನ್. ಪ್ರಕಾಶ್, ಪದ್ಮಶ್ರೀ ಡಾ.ಎಸ್. ಅಯ್ಯಪ್ಪನ್, ಕೆ.ಬಿ. ಗಣಪತಿ, ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗ್ಡೆ, ನಂಜನಗೂಡು ಮಲ್ಲನಮೂಲೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ ನಿಧನರಾದರು. ದುರಂತಗಳುಮೈಸೂರು ಕೇಂದ್ರ ಕಾರಾಗೃಹದಲ್ಲಿ ಬೇಕರಿ ಉತ್ಪನ್ನ ತಯಾರಿಸುವ ರಾಸಾಯನಿಕ ಸೇವಿಸಿ ಮೂವರು ಕೈದಿಗಳ ಸಾವುಜಯಪುರ ಬಳಿ ಕೇರಳದ ಉದ್ಯಮಿಯ ಕಾರಿನ ಮೇಲೆ ದಾಳಿ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ಕುರಿತ ಕಾರ್ಮಿಕ ಸಾವುಉದಯಗಿರಿ ಪೊಲೀಸ್ ಠಾಣೆಗೆ ಉದ್ರಿಕ್ತ ಗುಂಪಿನ ಮುತ್ತಿಗೆ, ಕಲ್ಲು ತೂರಾಟ, ಅಪಾರ್ಟ್‌ಮೆಂಟ್ ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು, ಚಾಮುಂಡಿಬೆಟ್ಟದ ಅರಣ್ಯಕ್ಕೆ ಬೆಂಕಿ, ಬದುಕಿರುವ ಪತ್ನಿಯ ಕೊಲೆ ಆರೋಪದಡಿ ಬಂಧನಕ್ಕೆ ಗಂಡ ಬಿಡುಗಡೆ- ಮೂವರು ಪೊಲೀಸ್ ಅಧಿಕಾರಿಗಳ ಅಮಾನತು, ಎಚ್.ಡಿ. ಕೋಟೆಯಲ್ಲಿ ಪ್ರಿಯಕರನೊಂದಿಗೆ ಪುತ್ರಿ ಮದುವೆಯಾಗಿದ್ದಕ್ಕೆ ಮತ್ತೊರ್ವ ಪುತ್ರಿಯೊಂದಿಗೆ ತಂದೆ- ತಾಯಿ ಆತ್ಮಹತ್ಯೆ, ಮೀನಾಕ್ಷಿಪುರ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಜಲಸಮಾಧಿ, ರೌಡಿ ಶೀಟರ್ ಕಾರ್ತಿಕ್ ಹತ್ಯೆ, ವಸ್ತು ಪ್ರದರ್ಶನ ಎದುರು ಮತ್ತೊರ್ವ ರೌಡಿಶೀಟರ್ ಗಿಲ್ಕಿ ವೆಂಕಟೇಶ್ ಹತ್ಯೆ, ಬಲೂರು ಮಾರಲು ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ, ವರುಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭ್ರೂಣಲಿಂಗ ಪತ್ತೆ ಬಯಲು, ಅರಮನೆ ಎದುರು ಹೀಲಿಂಯ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಮೂವರ ಸಾವು, ಹುಣಸೂರಿನಲ್ಲಿ ಹಾಡುಹಗಲೇ ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ನಡೆದವು, ಮರಗಳ ಹನನನಜರ್‌ಬಾದಿನ ಕರ್ನಾಟಕ ಪೊಲೀಸ್ ಅಕಾಡೆಮಿ ಎದುರು ಹೈದರಾಲಿ ರಸ್ತೆ ವಿಸ್ತರಣೆಗೆ ನೂರುರು ಮರಗಳ ಹನನ. ಇದಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಶಸ್ತಿ ಪುರಸ್ಕಾರಗಳುವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರಿಗೆ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಗೌರವ, ಸಿಐಟಿಬಿ ಮಾಜಿ ಅಧ್ಯಕ್ಷ ಡಿ. ಮಾದೇಗೌಡರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್, ಅಂಶಿ ಪ್ರಸನ್ನಕುಮಾರ್, ಎಂ. ಯೋಗೇಂದ್ರ, ಮೈಮ್ ರಮೇಶ್, ಪ್ರೊ.ಕೆ. ರಾಮಮೂರ್ತಿರಾವ್, ಡಾ.ಎನ್.ಎಸ್. ರಾಮೇಗೌಡ, ಹೇಮಾ ಶೇಖರ್, ಉಡಿಗಾಲ ಮಹದೇವಪ್ಪ ಅವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. ಟಿ. ನರಸೀಪುರ ತಾ. ಕುರಬೂರಿನ ಬೈ. ಚೈತ್ರಾ ವಿಶ್ವಕಪ್ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.