ನಗರಸಭೆ ಅಧ್ಯಕ್ಷರ ಚುನಾವಣೆ ನಡೆದೇ ನಡೆಯುತ್ತೆ

KannadaprabhaNewsNetwork |  
Published : Apr 17, 2025, 12:11 AM IST
16ಎಚ್ಎಸ್ಎನ್22 : ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ. | Kannada Prabha

ಸಾರಾಂಶ

ನಮ್ಮ ಪಕ್ಷದ ತೀರ್ಮಾನದಂತೆ ಅಧ್ಯಕ್ಷರ ಚುನಾವಣೆಯ ನಡೆದೇ ನಡೆಯುತ್ತದೆ. ಎಲ್ಲಾ ಪ್ರಕ್ರಿಯೆಗಳು ಕಾನೂನು ಬದ್ಧವಾಗಿಯೇ ನಡೆಯಲಿದೆ ಹಾಗೂ ನಗರಸಭೆ ಅಧ್ಯಕ್ಷರ ಬದಲಾವಣೆ ನಿಶ್ಚಿತ. ಉಪಾಧ್ಯಕ್ಷರ ಚುನಾವಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರ ಹಂಚಿಕೆ ಸಂಬಂಧ ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದ್ದು ಅದರಂತೆಯೇ ಪ್ರಕ್ರಿಯೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರಸಭೆ ಅಧ್ಯಕ್ಷರ ಚುನಾವಣೆ ಕಾನೂನು ಬದ್ಧವಾಗಿಯೇ ನಡೆದೇ ನಡೆಯುತ್ತದೆ. ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದ್ದು ಅದರಂತೆಯೇ ಪ್ರಕ್ರಿಯೆಗಳು ನಡೆಯಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ತಿಳಿಸಿದರು.

ನಗರದ ನಗರಸಭೆ ಉಪಾಧ್ಯಕ್ಷರ ಚುನಾವಣೆ ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಪಕ್ಷದ ತೀರ್ಮಾನದಂತೆ ಅಧ್ಯಕ್ಷರ ಚುನಾವಣೆಯ ನಡೆದೇ ನಡೆಯುತ್ತದೆ. ಎಲ್ಲಾ ಪ್ರಕ್ರಿಯೆಗಳು ಕಾನೂನು ಬದ್ಧವಾಗಿಯೇ ನಡೆಯಲಿದೆ ಹಾಗೂ ನಗರಸಭೆ ಅಧ್ಯಕ್ಷರ ಬದಲಾವಣೆ ನಿಶ್ಚಿತ. ಉಪಾಧ್ಯಕ್ಷರ ಚುನಾವಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಧಿಕಾರ ಹಂಚಿಕೆ ಸಂಬಂಧ ಈಗಾಗಲೇ ಪಕ್ಷದಲ್ಲಿ ತೀರ್ಮಾನವಾಗಿದ್ದು ಅದರಂತೆಯೇ ಪ್ರಕ್ರಿಯೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಹೇಮಲತಾ ಕಮಲ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಅವರಿಗೆ ಶುಭಾಶಯ ತಿಳಿಸುತ್ತೇನೆ ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡಲಿ ಜನಪರ ಆಡಳಿತ ನೀಡಲಿ ಎಂದು ಶುಭ ಕೋರುವುದಾಗಿ ತಿಳಿಸಿದರು.

ಯಾರನ್ನೋ ಕೂರಿಸಿ ಬರೆಸಿದಂತಿದೆ ವರದಿ:

ಜಾತಿಗಣತಿ ವರದಿ ಬಗ್ಗೆ ಒಂದೇ ಪದದಲ್ಲಿ ಹೇಳುವುದಾದರೆ ಯಾರನ್ನೋ ಕೂರಿಸಿ ಬರೆಸಿರುವ ರೀತಿ ಇದ್ದು, ವರದಿಯಲ್ಲಿ ಯಾವುದೇ ವೈಜ್ಞಾನಿಕ ದತ್ತಾಂಶ ಇಲ್ಲ. ಅದಕ್ಕೆ ಪೂರಕವಾದ ಸಾಕ್ಷ್ಯವೂ ಇರುವುದಿಲ್ಲ. ನನ್ನ ದೃಷ್ಟಿಯಲ್ಲಿ ಯಾರೋ ಒಬ್ಬರು ಕುಳಿತುಕೊಂಡು ಇಬ್ಬರು ನಿವೃತ್ತ ಐಎಎಸ್, ಕೆಎಎಸ್ ಅಥವಾ ಪ್ರಮೋಟೆಡ್ ಕೆಎಎಸ್ ಆಫೀಸರ್‌ನ ಕೂರಿಸಿಕೊಂಡು ಬರೆಸಿ ಅದನ್ನು ಈಗ ಮಂಡನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜಾತಿಗಣತಿ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು ಹೊಸದೇನಲ್ಲ, ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಜಾತಿಗಣತಿ ಉದ್ದೇಶ ಜಾತಿಗಣತಿ ವರದಿಯಿಂದ ಜನಸಂಖ್ಯೆ ಆಧಾರದ ಮೇಲೆ ಇಷ್ಟು ಅನುದಾನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಗ್ಯಾರಂಟಿಗಳಿಂದ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಜಾತಿ ಓಲೈಕೆ ರಾಜಕಾರಣ, ನಮ್ಮ ಸಮಾಜ ಒಡೆಯುವ ರಾಜಕಾರಣಕ್ಕೆ ಈ ಸರ್ಕಾರ ಕೈಹಾಕಿದೆ ಎಂದು ಸಿಡಿಮಿಡಿಗೊಂಡರು.

ನಾನು ಯಾವ ಸಮಾಜದ ಬಗ್ಗೆಯೂ ಮಾತನಾಡುವುದಿಲ್ಲ. ಜಾತಿಗಣತಿ ಮಾಡೋದು ಒಂದು ಸಮಾಜದ ಏಳಿಗೆಗೆ ಎಂಬುದನ್ನು ಮರೆಯಬಾರದು. ಒಂದು ಸಮಾಜವನ್ನು ಒಡೆದು ಅವರ ಸ್ವಹಿತಾಸಕ್ತಿ ರಾಜಕಾರಣ ಮಾಡಲು ಮುಂದಾಗಿದ್ದು, ಪಕ್ಷಕ್ಕೆ ಹೆಚ್ಚಿನ ಸೀಟ್‌ಗಳು ಬರಲಿ ಎಂದು ಮಾಡುವುದು ರಾಜ್ಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ನನ್ನ ದೃಷ್ಟಿಯಲ್ಲಿ ಒಟ್ಟಾರೆ ಇದನ್ನು ಮಾಡಿರುವುದು ತಪ್ಪು. ನಿವೃತ್ತ ಕೆಎಎಸ್, ಐಎಎಸ್ ಅಧಿಕಾರಿ ಕೂರಿಸಿಕೊಂಡು ಬರೆಸಿರುವ ರೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ****ಬಾಕ್ಸ್‌:ಇಡೀ ನಮ್ಮ ಕುಟುಂಬವನ್ನೇ ಟಾರ್ಗೆಟ್‌ ಮಾಡಿದ್ದಾರೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜಮೀನು ತೆರವು ವಿಚಾರ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅದು ಈಗ ಕೋರ್ಟ್‌ನಲ್ಲಿ ಸ್ಟೇ ಆಗಿದೆ, ಮುಂದಿನ ಪ್ರಕ್ರಿಯೆ ನಡೆಯುತ್ತದೆ. ಕುಮಾರಸ್ವಾಮಿ ಒಬ್ಬರೇ ಅಲ್ಲ, ನಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇಡೀ ರಾಜ್ಯದ ಜನ ನೋಡುತ್ತಿದ್ದಾರೆ, ನಾವೇನು ಹೊಸದಾಗಿ ಹೇಳಬೇಕಾಗಿಲ್ಲ. ನಮ್ಮ ಪಕ್ಷದ ಪ್ರತಿಯೊಬ್ಬ ಶಾಸಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಡಾ. ಸೂರಜ್ ಆರೋಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ