ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅಲ್ಲಿ ಬಸ್ ಓಡಿಸುತ್ತಿರುವ ಮೂಡುಬಿದಿರೆ ತಾಲೂಕು ಕಲ್ಲಬೆಟ್ಟಿನ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ’ (ಮೂಡುಬಿದಿರೆ ಎಂದು ತುಳುವಿನಲ್ಲಿ ಅರ್ಥ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ.
ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪನಿಗಳ ಕೆಲಸಗಳಿಗೂ ಬಸ್ ಬಾಡಿಗೆಗೆ ಕೊಡುತ್ತಿದ್ದಾರೆ. ಹಲವು ವರ್ಷಗಳಿಂದ ಅವರು ಸೌದಿಯಲ್ಲಿ ನೆಲೆಸಿದ್ದಾರೆ.ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದವರಾಗಿರುವ ಮೊಹ್ಮದ್ ಹುಟ್ಟೂರಿನಲ್ಲಿ ಹಲವು ವರ್ಷ ‘ಕೊಹಿನೂರು’ ಹೆಸರಿನ ಆಟೋ ಬಾಡಿಗೆಗೆ ಓಡಿಸುತ್ತಿದ್ದರು. ಅದೇ ಹೆಸರನ್ನು ಅವರು ಸೌದಿಯಲ್ಲಿ ಬಸ್‌ಗೆ ಇಟ್ಟಿದ್ದಾರೆ.
ಅವರ ಬೆದ್ರ ಹೆಸರಿನ ಬಸ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.